/newsfirstlive-kannada/media/media_files/2025/09/19/rishabh_shetty-1-2025-09-19-16-19-51.jpg)
ಬೆಂಗಳೂರು: ಅಕ್ಟೋಬರ್​ 2 ರಂದು ಅಂದರೆ ವಿಜಯ ದಶಮಿಯಂದು ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್​ ( Rukmini Vasanth) ಯುವರಾಣಿಯಾಗಿ ಮಿಂಚಿರುವ ಕಾಂತಾರ ಚಾಪ್ಟರ್​ -1 ಸಿನಿಮಾ ಬಿಡುಗಡೆಯಾಗಲಿದೆ. ಅಕ್ಟೋಬರ್​ 2 ಯಾವಾಗ ಬರುತ್ತೆ ಅಂತಾ ಸಿನಿ ವೀಕ್ಷಕರು ಎಕ್ಸೈಟ್ ಆಗಿದ್ದಾರೆ. ಆಂಧ್ರಪ್ರದೇಶದಲ್ಲಿ ಕಾಂತಾರ ಚಾಪ್ಟರ್​ -1 ಸಿನಿಮಾಗೆ ವಿರೋಧ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ಆಂಧ್ರದಲ್ಲಿ ಕಾಂತಾರಾಗೆ ತೊಂದರೆ..!
ದೇಶದಾದ್ಯಂತ ನೆನ್ನೆ ರಾತ್ರಿಯಿಂದಲೇ ಪವನ್ ಕಲ್ಯಾಣ್ ನಟನೆಯ ಓಜಿ ಸಿನಿಮಾದ ಪ್ರದರ್ಶನ ನಡೀತಿದೆ. ಬೆಂಗಳೂರಿನ ಪ್ರಮುಖ ಥಿಯೇಟರ್​ಗಳಲ್ಲೂ ಪೇಯ್ಡ್ ಪ್ರೀಮಿಯರ್ ಪ್ರದರ್ಶನ ಆಯೋಜಿಸಲಾಗಿತ್ತು. ಈ ಶೋಗಳಿಗಾಗಿ ಅಧಿಕ ಮೊತ್ತದ ದರ ನಿಗದಿ ಮಾಡಲಾಗಿತ್ತು.
ಇದಕ್ಕೆ ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದರು. ಇದ್ದರಿಂದ ಶೋಗಳಿಗೆ ತೊಂದರೆ ಆಗಿತ್ತು. ಕನ್ನಡ ಪರ ಹೋರಾಟಗಾರರು ವರ್ತನೆಯಿಂದ ಸಿಟ್ಟಿಗೆದ್ದ ಆಂಧ್ರ ಪ್ರೇಕ್ಷಕರು ಕಾಂತಾರ ಸಿನಿಮಾಗೂ ಆಂಧ್ರದಲ್ಲಿ ಇದೇ ರೀತಿಯ ವಿರೋಧ ಮಾಡುವುದಾಗಿ ಬೆದರಿಸಿದ್ದಾರೆ ಎನ್ನಲಾಗ್ತಿದೆ.
ಮೊನ್ನೆಯಷ್ಟೇ ‘ಇದೇ ನಮ್ಮ ಮೂಲಗ, ಇಲ್ಲೇ ಅದೊಂದು ದೊಡ್ಡ ದಂತಕತೆ’ ಎನ್ನುತ್ತ ಕಾಂತಾರ ಪ್ರೀಕ್ವೇಲ್​ನ ಟ್ರೈಲರ್​ ರಿಲೀಸ್ ಆಗಿದೆ. ರಿಷಬ್ ಶೆಟ್ಟಿ ಮತ್ತೊಮ್ಮೆ ರೋಮಾಂಚನಕಾರಿ ದೃಶ್ಯಕಾವ್ಯದೊಳಗೆ ನಮ್ಮನ್ನ ಕರೆದೊಯ್ದಿದ್ದಾರೆ. ಚಿತ್ರದ ಟ್ರೈಲರ್​ ಅದ್ಭುತವಾಗಿ ಮೂಡಿಬಂದಿದ್ದು, ಧರ್ಮ ಕಾಪಾಡಲು ಬಂದಿರುವ ಗಣಗಳು ಸುತ್ತ ಹಾಗೂ ಸಿಕ್ಕಿರುವ ಕಾರ್ಣಿಕ ಕಲ್ಲಿನ ಹಿಂದಿರುವ ಸ್ಟೋರಿ ಏನು ಅನ್ನೋ ಕುತೂಹಲ ಹೆಚ್ಚಾಗಿದೆ. ಅಷ್ಟರೊಳಗೆ ಆಂಧ್ರಪ್ರದೇಶದಲ್ಲಿ ಕಾಂತಾರ ಚಾಪ್ಟರ್​ -1 ಸಿನಿಮಾಕ್ಕೆ ಬೆದರಿಸಲಾಗಿದ್ದು,ಚಿತ್ರತಂಡಕ್ಕೆ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳ ಹುಚ್ಚಾಟ.. ತಲ್ವಾರ್ ಹಿಡಿದು ವಿಕೃತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ