ನಾವೆಲ್ಲರೂ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಸುಮ್ನಿದ್ದೆ, ಬಾಯಿ ಇಲ್ಲ ಎಂದಲ್ಲ -ಕಿಚ್ಚ ಸುದೀಪ್ ವಾರ್ನಿಂಗ್

ಬಹಳಷ್ಟು ಕಲ್ಲಿನ ತೂರಾಟ, ನಿನ್ನಿಂದಾಗಿ ನಿಮ್ಮ ಮೇಲೆ ಬೀಳುತ್ತಲೇ ಇರುತ್ತೆ. ಅದನ್ನು ತಾವು ತಡ್ಕೊಂಡು ಬರ್ತಾನೇ ಇದ್ದೀರಿ. ಈಗ ಹೇಳ್ತಾ ಇದ್ದೀನಿ. ಅದನ್ನು ತಡಿಯೋ ತನಕ ತಡ್ಕೊಂಡು ಇರಿ. ಮಾತನ್ನಾಡೋ ಟೈಮ್​ನಲ್ಲಿ ಮಾತನ್ನಾಡಿ ಎಂದು ಅಭಿಮಾನಿಗಳಿಗೆ ಸುದೀಪ್ ಹೇಳಿದ್ದಾರೆ.

author-image
Ganesh Kerekuli
Updated On
Kiccha sudeep (5)
Advertisment

ಹುಬ್ಬಳ್ಳಿ: ವಿವಾದ ಸೃಷ್ಟಿಸಿಲು ಸಿದ್ಧವಾಗಿರುವ ವಿರೋಧಿಗಳಿಗೆ ಕಿಚ್ಚ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ. ಹುಬ್ಬಳ್ಳಿ ನೆಹರು ಮೈದಾನದಲ್ಲಿ ಮಾರ್ಕ್ ಚಿತ್ರದ ಈವೆಂಟ್ ನಡೆಯಿತು. ಈ ವೇಳೆ  ಮಾತನ್ನಾಡಿರುವ ಸುದೀಪ್, ಈ ತಿಂಗಳ 25 ರಂದು ಮಾರ್ಕ್ ಚಿತ್ರ ಬಿಡುಗಡೆ ಆಗಲಿದೆ. ಆದರೆ ಕೆಲವರು ಈ ಸಮಯಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಹೇಳೋದು ಇಷ್ಟೇ, ಯುದ್ಧಕ್ಕೆ ನಾವು ಸಿದ್ಧ ಎಂದಿದ್ದಾರೆ. 

ಸುದೀಪ್ ಏನಂದ್ರು..? 

ಈ ಜರ್ನಿಯಲ್ಲಿ, ಥಿಯೇಟರ್​​ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತ ಇದೆ. ಈ ವೇದಿಕೆ ಮೇಲೆ ನಿಂತು ಹೇಳ್ತಾ ಇದ್ದೀನಿ. ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ.

ಕೆಲವೊಮ್ಮೆ ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ನನ್ನ ಸ್ನೇಹಿತರು ನೀವೆಲ್ಲ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ, ನಾವೆಲ್ಲರೂ ಚೆನ್ನಾಗಿರಬೇಕು ಎಂಬ ಉದ್ದೇಶಗೋಸ್ಕರ ನಾನು ಬಾಯಿ ಮುಚ್ಚಿಕೊಂಡು ಇದ್ದೇ ಹೊರತು, ಬಾಯಿ ಇಲ್ಲ ಅಂತಲ್ಲ. 

ಬಹಳಷ್ಟು ಕಲ್ಲಿನ ತೂರಾಟ, ನಿನ್ನ ಸಹನೆಯಿಂದಾಗಿ ನಿಮ್ಮ ಮೇಲೆ ಬೀಳುತ್ತಲೇ ಇರುತ್ತೆ. ಅದನ್ನು ತಾವು ತಡ್ಕೊಂಡು ಬರ್ತಾನೇ ಇದ್ದೀರಿ. ಈಗ ಹೇಳ್ತಾ ಇದ್ದೀನಿ. ಅದನ್ನು ತಡಿಯೋ ತನಕ ತಡ್ಕೊಂಡು ಇರಿ. ಮಾತನ್ನಾಡೋ ಟೈಮ್​ನಲ್ಲಿ ಮಾತನ್ನಾಡಿ. 

ಮಾರ್ಕ್​ ಒಂದು ಅದ್ಭುತವಾದ ಸಿನಿಮಾ. ವಿಜಯ್ ಕಾರ್ತಿಕೇಯ ತಾವು ಎಲ್ಲಿದ್ದರೂ ಥ್ಯಾಂಕ್ಯೂ. ಡಿಸೆಂಬರ್ 25 ರಂದು ಸಿನಿಮಾ ರಿಲೀಸ್ ಆಗ್ತಿದೆ. ಹುಬ್ಬಳ್ಳಿ ಥಿಯೇಟರ್​ನಲ್ಲಿ ಕೇಳಿ ಬರುವ ಕೂಗು ನನಗೆ ಬೆಂಗಳೂರಿನಲ್ಲಿ ಕೇಳಿಸಬೇಕು. 

ಕಿಚ್ಚ ಸುದೀಪ್, ಮಾರ್ಕ್ ನಟ

ಇದನ್ನೂ ಓದಿ:ಇಶಾನ್ ಕಿಶನ್ ಸರ್ಪ್ರೈಸ್ ಎಂಟ್ರಿ.. ವಿಶ್ವಕಪ್​ ಆಯ್ಕೆಯ ಮೀಟಿಂಗ್​ನಲ್ಲಿ ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep Mark Movie
Advertisment