/newsfirstlive-kannada/media/media_files/2025/12/21/ishan-kishan-2025-12-21-10-50-42.jpg)
ಅಟ್ಯಾಕಿಂಗ್ ಬ್ಯಾಟಿಂಗ್ ಸ್ಟೈಲ್​​​​​ ಮೂಲಕ ಬಿಗ್ ಫ್ಯಾನ್​ ಕ್ಲಬ್ ಹೊಂದಿರುವ ಇಶಾನ್ ಕಿಶನ್ ಟ್ರೆಂಡಿಂಗ್​ನಲ್ಲಿದ್ದಾರೆ. ಸೈಯ್ಯದ್ ಮುಷ್ತಾಕ್ ಅಲಿ T20 ಟೂರ್ನಿಯಲ್ಲಿ ಬೌಲರ್​ಗಳ ಧೂಳಿಪಟ ಮಾಡ್ತಿರುವ ಜಾರ್ಖಂಡ್ ನಾಯಕ ಕಿಶನ್, ಟೀಮ್ ಇಂಡಿಯಾ ಸೆಲೆಕ್ಟರ್ಸ್​​​ ಕಣ್ಣು ತೆರೆಸಿದ್ದಾರೆ.
ಸರ್​ಪ್ರೈಸ್ ಎಂಟ್ರಿ
ಜಾರ್ಖಂಡ್​​ನ ಎಡಗೈ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಟಿ-20 ವಿಶ್ವಕಪ್​ಗೆ ಆಯ್ಕೆಯಾಗ್ತಾರೆ ಅಂತ ಯಾರೂ ಕೂಡ ನಿರೀಕ್ಷಿಸಿರಲಿಲ್ಲ. ಟ್ಯಾಲೆಂಟೆಡ್ ಕಿಶನ್ ಕ್ವಾಲಿಟೀಸ್ ಗಮನಿಸಿದ ಆಯ್ಕೆ ಸಮಿತಿ, ವಿಕೆಟ್ ಕೀಪರ್ ಬ್ಯಾಟರ್​ಗೆ ಗುಡ್​ನ್ಯೂಸ್ ಕೊಟ್ಟಿದೆ. ಟಾಪ್ ಆರ್ಡರ್ ಬ್ಯಾಟಿಂಗ್ ಜೊತೆಗೆ 2ನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿರುವ ಇಶಾನ್ ಕಿಶನ್ ವಿಶ್ವಕಪ್ ಆಡುವ ಕನಸು, ಕೊನೆಗೂ ನನಸಾಗಿದೆ.​​
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದ ಮುಷ್ತಾಕ್ ಅಲಿ T20 ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್, ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ರು. ಕೇವಲ 45 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ ಕಿಶನ್, ಟೂರ್ನಿಯಲ್ಲಿ ದಾಖಲೆ ನಿರ್ಮಿಸಿದ್ದಾರೆ. 206ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ ಗಳಿಸಿದ್ದ ಕಿಶನ್ 49 ಎಸೆತಗಳಲ್ಲಿ 101 ರನ್​​ ಕಲೆಹಾಕಿದ್ರು. ಟೂರ್ನಿಯಲ್ಲಿ ಇದು ಕಿಶನ್​ರ 2ನೇ ಶತಕವಾಗಿದೆ.
ಇದನ್ನೂ ಓದಿ: ಚಿನ್ನ ಖರೀದಿಸೋರಿಗೆ ಸಿಹಿ ಸುದ್ದಿ.. ಬೆಲೆಯಲ್ಲಿ ಅನಿರೀಕ್ಷಿತ ಬದಲಾವಣೆ.. ಇಂದಿನ ಬೆಲೆ ಎಷ್ಟಿದೆ..?
/filters:format(webp)/newsfirstlive-kannada/media/media_files/2025/12/21/ishan-kishan-1-2025-12-21-10-52-19.jpg)
ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ಆಡಿದ ಇನ್ನಿಂಗ್ಸ್​, ಟಾಪ್ ಕ್ಲಾಸ್ ಆಗಿತ್ತು. ಹರಿಯಾಣದ ಬಲಿಷ್ಟ ಬೌಲಿಂಗ್ ಅಟ್ಯಾಕ್​ ಅನ್ನ ಚಿಟಿಕೆ ಹೊಡೆಯೋದ್ರಲ್ಲಿ ಧೂಳಿಪಟ ಮಾಡಿದ ಇಶಾನ್ ಕಿಶನ್, 10 ಮೆಗಾ ಸಿಕ್ಸರ್ ಮತ್ತು 6 ಬೌಂಡರಿಗಳನ್ನ ಬಾರಿಸಿದ್ರು. ವಿಶೇಷ ಅಂದ್ರೆ ಕಿಶನ್, ಕ್ರೀಸ್​ನಲ್ಲೇ ನಿಂತು 84 ರನ್​​ ಕಲೆಹಾಕಿದ್ರು.
517 ರನ್, 33 ಸಿಕ್ಸರ್..!
2025ರ ಸ್ಯ್ಮಾಟ್ ಟೂರ್ನಿಯಲ್ಲಿ ಕಿಶನ್, 517 ರನ್​ಗಳಿಸಿ ಅತಿಹೆಚ್ಚು ರನ್​ಗಳಿಸಿದ ಲಿಸ್ಟ್​ನಲ್ಲಿ, ನಂಬರ್.1 ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಗರಿಷ್ಟ ರನ್​ಗಳಿಸಿದ್ದಷ್ಟೇ ಅಲ್ಲ. ಸಿಕ್ಸರ್​ಗಳನ್ನ ಸಿಡಿಸೋದ್ರಲ್ಲೂ ಇಶಾನ್ ಕಿಶನ್, ಟಾಪರ್. ಟೂರ್ನಿಯಲ್ಲಿ ಒಟ್ಟು 33 ಸಿಕ್ಸರ್ ಸಿಡಿಸಿದ ಕಿಶನ್, ಪಂಜಾಬ್​ನ ಸಲೀಲ್ ಅರೋಡಾ ಮತ್ತು ಅಭಿಷೇಕ್ ಶರ್ಮಾರನ್ನ ಹಿಂದಿಕ್ಕಿದ್ದಾರೆ. ಅರೋಡಾ 28 ಸಿಕ್ಸರ್ ಸಿಡಿಸಿದ್ರೆ ಅಭಿಷೇಕ್ 26 ಸಿಕ್ಸರ್​ ಸಿಡಿಸಿದ್ದಾರೆ.
ಇದನ್ನೂ ಓದಿ:iPhone 15 ಕೇವಲ 36,000 ರೂಪಾಯಿಗೆ! ಯಾವಾಗ ಮತ್ತು ಎಲ್ಲಿ ಖರೀದಿಸಬಹುದು?
ಪುಣೆಯಲ್ಲಿ ಜಾರ್ಖಂಡ್ ವರ್ಸಸ್​ ಹರಿಯಾಣ ಪಂದ್ಯ ನೋಡಲು ಟೀಮ್ ಇಂಡಿಯಾ ಸೆಲೆಕ್ಟರ್​ಗಳಾದ ಆರ್​ಪಿ ಸಿಂಗ್ ಮತ್ತು ಪ್ರಗ್ಯಾನ್ ಓಜಾ ಆಗಮಿಸಿದ್ರು. ಆಯ್ಕೆಗಾರರ ಮುಂದೆಯೇ ಅಬ್ಬರಿಸಿ ಬೊಬ್ಬರಿದ ಜಾರ್ಖಂಡ್​​ ನಾಯಕ ಇಶಾನ್ ಕಿಶನ್, ತನ್ನ ಬ್ಯಾಟ್​ನಿಂದಲೇ ಎಲ್ಲರೂ ಉತ್ತರ ನೀಡಿದ್ರು. ಕಿಶನ್ ಬ್ಯಾಟಿಂಗ್ ಕಣ್ತುಂಬಿಸಿಕೊಂಡ ಆಯ್ಕೆಗಾರರು, ಮಾತಿನಲ್ಲದೇ ಮೌನವಾಗೇ ಸ್ಟೇಡಿಯಮ್​ನಿಂದ ಹೊರನಡೆದರು.
ಸದ್ಯ ಟಿ-20 ಟೂರ್ನಿಗಳನ್ನ ಖುದ್ದು ಕ್ರೀಡಾಂಗಣಕ್ಕೆ ತೆರಳಿ ವೀಕ್ಷಿಸುತ್ತಿರುವ ಟೀಮ್ ಇಂಡಿಯಾ ಆಯ್ಕೆಗಾರರು, ಟಿ-20 ವಿಶ್ವಕಪ್ ತಂಡಕ್ಕೆ ಕಿಶನ್ ಹೆಸರನ್ನ ಪ್ರಸ್ತಾಪಿದ್ರು. ಸ್ಯ್ಮಾಟ್ ಟೂರ್ನಿಯಲ್ಲಿ ಎದುರಾಳಿ ಬೌಲರ್​ಗಳನ್ನ ಚಿಂದಿ ಉಡಾಯಿಸೋದನ್ನ ಕಣ್ಣಾರೆ ಕಂಡ ಆಯ್ಕೆಗಾರರು, ಕಿಶನ್ ವಿಶ್ವಕಪ್ ತಂಡದಲ್ಲಿ ಇರಲೇಬೇಕು ಅಂತ ಬಿಸಿಸಿಐ ಮುಂದೆ ಪಟ್ಟು ಹಿಡಿದಿದ್ರು.
ಒಂದೇ ಒಂದು ಇನ್ನಿಂಗ್ಸ್​ನಿಂದ ಇಶಾನ್ ಕಿಶನ್, ಅದೃಷ್ಟ ಬದಲಾಗಿದೆ. 2 ವರ್ಷಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಿರುವ ಜಾರ್ಖಂಡ್ ವಿಕೆಟ್ ಕೀಪರ್, ವಿಶ್ವಕಪ್​ನಲ್ಲಿ ಮಿಂಚಲಿ ಅನ್ನೋದೇ ಎಲ್ಲರ ಆಶಯ.
ಇದನ್ನೂ ಓದಿ:ChatGPT ದೇಶಕ್ಕೆ ಅಪಾಯ! ಬಳಸದಂತೆ ತನ್ನ ನೌಕರರಿಗೆ ಕೇಂದ್ರ ಸರ್ಕಾರ ಆದೇಶ ನೀಡಿದ್ದೇಕೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us