/newsfirstlive-kannada/media/media_files/2025/12/21/iphone-2025-12-21-09-53-18.jpg)
ಅನೇಕರು ಐಫೋನ್ (iPhone) ಇಷ್ಟಪಡ್ತಾರೆ. ಆದರೆ ಹೆಚ್ಚಿನ ಬೆಲೆಯಿಂದಾಗಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಬಜೆಟ್ ಕೊರತೆಯಿಂದಾಗಿ ಹಿಂಜರಿಯುತ್ತಿರೋರಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ವರ್ಷಾಂತ್ಯದ ಮಾರಾಟದಲ್ಲಿ ಕ್ರೋಮಾ ಐಫೋನ್ 15 ರ ಬೆಲೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ. ಬೆಲೆ ಕಡಿತದ ಜೊತೆಗೆ, ಖರೀದಿದಾರರು ಬ್ಯಾಂಕ್ ಕೊಡುಗೆಗಳು, ವಿನಿಮಯ ಬೋನಸ್‌ಗಳು ಮತ್ತು ನೋ-ಕಾಸ್ಟ್ ಇಎಂಐನಂತಹ ಕೊಡುಗೆಗಳನ್ನು ಸಹ ಪಡೆಯಬಹುದು. ಈ ಮಾರಾಟವು ಜನವರಿ 4 ರವರೆಗೆ ಲಭ್ಯವಿರುತ್ತದೆ..
ಇದನ್ನೂ ಓದಿ: ಚಿನ್ನ ಖರೀದಿಸೋರಿಗೆ ಸಿಹಿ ಸುದ್ದಿ.. ಬೆಲೆಯಲ್ಲಿ ಅನಿರೀಕ್ಷಿತ ಬದಲಾವಣೆ.. ಇಂದಿನ ಬೆಲೆ ಎಷ್ಟಿದೆ..?
ಐಫೋನ್ 15 ಮೂರು ಸ್ಟೋರೆಜ್ ಕ್ಯಾಪಾಸಿಟಿಯಲ್ಲಿ ಲಭ್ಯವಿದೆ: 128GB, 256GB, ಮತ್ತು 512GB. ಆಪಲ್ ಆರಂಭದಲ್ಲಿ ಮೂಲ ಮಾದರಿಯನ್ನು 79,900 ರೂಪಾಯಿಗೆ ಬಿಡುಗಡೆ ಮಾಡಿತು. ಇದು ಪ್ರಸ್ತುತ ಕ್ರೋಮಾದಲ್ಲಿ 57,990 ರೂಪಾಯಿಗೆ ಲಭ್ಯವಿದೆ.
ಕೊಡುಗೆಗಳು
- ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಮೇಲೆ ರೂ. 14,000 ವರೆಗೆ ರಿಯಾಯಿತಿ.
- ವಿನಿಮಯ ಬೋನಸ್: ಟ್ರೇಡ್-ಇನ್ ವ್ಯಾಲ್ಯೂ ಮೇಲೆ ಹೆಚ್ಚುವರಿ ರೂ. 4,000 ಬೋನಸ್.
- ಇದರೊಂದಿಗೆ, ನೀವು ಕೇವಲ 36,490 ರೂ.ಗೆ ಐಫೋನ್ 15 ಕೊಳ್ಳಬಹುದು.
ಐಫೋನ್ 15 ವಿಶೇಷತೆಗಳು..
- ಇದು 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಹೊಂದಿದ್ದು, ಡೈನಾಮಿಕ್ ಐಲ್ಯಾಂಡ್ ಒಳಗೊಂಡಿದೆ.
- A16 ಬಯೋನಿಕ್ ಚಿಪ್‌ಸೆಟ್, ಗೇಮಿಂಗ್, ಸುಗಮ ಕಾರ್ಯಕ್ಷಮತೆ ನೀಡುತ್ತದೆ.
- 48MP ಮುಖ್ಯ ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಲೆನ್ಸ್
- 12MP ಫ್ರಂಟ್ ಕ್ಯಾಮೆರಾ, ಉತ್ತಮ ಗುಣಮಟ್ಟದ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳನ್ನು ತೆಗೆದುಕೊಳ್ಳಬಹುದು
- ಇದು USB ಟೈಪ್-C ಚಾರ್ಜಿಂಗ್ ಅಳವಡಿಸಿಕೊಂಡ ಮೊದಲ ಫ್ಲ್ಯಾಗ್‌ಶಿಪ್ ಐಫೋನ್
- MagSafe, Qi2 ವೈರ್‌ಲೆಸ್ ಚಾರ್ಜಿಂಗ್ ಮಾನದಂಡಗಳನ್ನು ಸಹ ಬೆಂಬಲಿಸುತ್ತದೆ.
ಇದನ್ನೂ ಓದಿ:2026ರಲ್ಲಿ ಏನಾದರೂ ಬೆದರಿಕೆ ಇದೆಯೇ? ಬಾಬಾ ವಂಗಾ ಅಚ್ಚರಿಯ ಭವಿಷ್ಯವಾಣಿಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us