/newsfirstlive-kannada/media/post_attachments/wp-content/uploads/2024/04/BAABA-VANGA.jpg)
ಬಾಬಾ ವಂಗಾ (Baba Vanga) ಜಗತ್ತಿಗೆ ಪರಿಚಯ ಇರುವ ಹೆಸರು. 2025 ಕಳೆದು 2026ರ ಆಗಮನ ಆಗುತ್ತಿದೆ. ಹೊಸ ವರ್ಷದ ಆಚರಣೆಯಲ್ಲಿರೋ ವಿಶ್ವದ ಮಂದಿಗೆ ಬಾಬಾ ಅವರ ಭವಿಷ್ಯವಾಣಿ ಸಂಚಲನ ಸೃಷ್ಟಿಸಿದೆ. ಅವರ ಪ್ರಕಾರ, ಮುಂಬರುವ ವರ್ಷವು ಗಂಭೀರ ಬದಲಾವಣೆಗಳು ಮತ್ತು ಸವಾಲುಗಳಿಗೆ ವೇದಿಕೆಯಾಗಲಿದೆ.
ಬಾಬಾ ವಂಗಾ 2026 ರ ಭವಿಷ್ಯವಾಣಿಗಳು
ತೀವ್ರ ಆರ್ಥಿಕ ಬಿಕ್ಕಟ್ಟು, ಚಿನ್ನದ ಬೆಲೆ ಏರಿಕೆ: 2026 ರಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು, ಬ್ಯಾಂಕ್ ವೈಫಲ್ಯಗಳು ಮತ್ತು ಅಧಿಕ ಹಣದುಬ್ಬರ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ. ಈ ಅಸ್ಥಿರ ಪರಿಸ್ಥಿತಿಗಳಲ್ಲಿ ಚಿನ್ನದ ಬೆಲೆಗಳು ಅನಿರೀಕ್ಷಿತವಾಗಿ ಗಗನಕ್ಕೇರುತ್ತವೆ. 25 ರಿಂದ 40 ಪ್ರತಿಶತದಷ್ಟು ಹೆಚ್ಚಾಗುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಹೆಚ್ಚಿರುವ ಚಿನ್ನದ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನೂ ಓದಿ:ಮೊಟ್ಟೆಗಳು ತಿನ್ನಲು ಸೇಫ್ ಎಂದ FSSAI : ಮೊಟ್ಟೆ ಸುರಕ್ಷಿತ, ಆತಂಕ ಬೇಡ ಎಂದ FSSAI
ಭೀಕರ ನೈಸರ್ಗಿಕ ವಿಕೋಪಗಳು: 2026ರಲ್ಲಿ ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ತೀವ್ರ ಹವಾಮಾನ ಬದಲಾವಣೆಗಳ ಸಾಧ್ಯತೆಯಿದೆ. ವಿಶ್ವದ ಭೂಪ್ರದೇಶದಲ್ಲಿ ಸುಮಾರು ಏಳರಿಂದ ಎಂಟು ಪ್ರತಿಶತವು ಈ ವಿಕೋಪಗಳಿಗೆ ತುತ್ತಾಗುತ್ತವೆ ಎಂದಿದ್ದಾರೆ.
ಕೃತಕ ಬುದ್ಧಿಮತ್ತೆಯ ಪ್ರಾಬಲ್ಯ: 2026ರ ಹೊತ್ತಿಗೆ ಕೃತಕ ಬುದ್ಧಿಮತ್ತೆ ಪ್ರಮುಖ ಸ್ಥಾನದಲ್ಲಿರುತ್ತವೆ. ಕೈಗಾರಿಕೆಗಳು ಮತ್ತು ಮಾನವ ಜೀವನದ ಮೇಲೆ ಪ್ರಾಬಲ್ಯ ಸಾಧಿಸುವ ಹಂತ ತಲುಪುತ್ತದೆ ಎಂದಿದ್ದಾರೆ. ಇದು ಮನುಷ್ಯರ ಬದುಕಿಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂದಿದ್ದಾರೆ. AI ನ ಪ್ರಸ್ತುತ ಬೆಳವಣಿಗೆ ಗಮನಿಸಿದರೆ ಅವರ ಭವಿಷ್ಯ ಸರಿಯಾಗಿದೆ ಎಂದು ಹಲವರು ನಂಬುತ್ತಾರೆ.
ರಷ್ಯಾದಿಂದ ಒಬ್ಬ ಶಕ್ತಿಶಾಲಿ ನಾಯಕ ಎಂಟ್ರಿ: ವಿಶ್ವ ವ್ಯವಹಾರಗಳನ್ನು ನೋಡಿಕೊಳ್ಳುವ ಒಬ್ಬ ಶಕ್ತಿಶಾಲಿ ನಾಯಕ ರಷ್ಯಾದಿಂದ ಹೊರಹೊಮ್ಮುತ್ತಾನೆ ಎಂದಿದ್ದಾರೆ.
ಚೀನಾದ ಪ್ರಾಬಲ್ಯ, ಭೌಗೋಳಿಕ ರಾಜಕೀಯ ಬದಲಾವಣೆ: ಚೀನಾ ಪ್ರಮುಖ ಪ್ರಾಬಲ್ಯವನ್ನು ಪಡೆಯಲಿದೆ ಎಂದು ಬಾಬಾ ವಂಗಾ ಹೇಳಿದ್ದಾರೆ. ಇದರಲ್ಲಿ ತೈವಾನ್ ಮೇಲೆ ನಿಯಂತ್ರಣ ಅಥವಾ ದಕ್ಷಿಣ ಚೀನಾ ಸಮುದ್ರಕ್ಕೆ ವಿಸ್ತರಣೆ ಸೇರಿರಬಹುದು.
ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ: ನವೆಂಬರ್ 2026 ರಲ್ಲಿ ಭೂಮಿಯ ವಾತಾವರಣ ಪ್ರವೇಶಿಸುವ ದೊಡ್ಡ ಬಾಹ್ಯಾಕಾಶ ನೌಕೆಯ ಮೂಲಕ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ನೇರ ಸಂಪರ್ಕ ಸಾಧ್ಯ ಎಂಬ ಅವರ ಮೊದಲ ಸಲಹೆಯು ಜಗತ್ತನ್ನು ಆಘಾತಗೊಳಿಸಿದೆ.
ಹಸಿರು ಶಕ್ತಿ: ಇಂಧನ ಕೊರತೆಯ ಸಮಸ್ಯೆಗಳ ನಡುವೆ ಪ್ರಪಂಚದಾದ್ಯಂತದ ದೇಶಗಳು ಹಸಿರು ಶಕ್ತಿಗಳು ಪರಿಣಾಮ ಬೀರಲಿವೆ. ಭವಿಷ್ಯದಲ್ಲಿ ಮಾನವ ಅಗತ್ಯಗಳನ್ನು ಪೂರೈಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ದ.ಆಫ್ರಿಕಾ ಸರಣಿಯಲ್ಲಿ ಸಮಸ್ಯೆಗೆ ಸಿಕ್ಕಿಲ್ಲ ಪರಿಹಾರ.. ಗೊಂದಲದಲ್ಲೇ ಟೀಂ ಇಂಡಿಯಾ!
ಬಾಬಾ ವಂಗಾ ಅವರ ನಿಜವಾದ ಹೆಸರು ವಾಂಜೆಲಿಯಾ ಪಾಂಡವ ಡಿಮಿಟ್ರೋವಾ (Vangeliya Pandeva Gushterova). ಅವರು 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದರು. ಅವರು ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಂಡರು. ನಂತರ ಅವರು ಅಸಾಧಾರಣ ಭವಿಷ್ಯವಾಣಿಯ ಶಕ್ತಿಯನ್ನು ಪಡೆದರು ಎಂದು ಹೇಳಲಾಗುತ್ತದೆ. 1996ರಲ್ಲಿ ಅವರ ಮರಣಕ್ಕೂ ಮೊದಲು.. ರಾಜಕುಮಾರಿ ಡಯಾನಾ ಸಾವು, 2001ರ ನ್ಯೂಯಾರ್ಕ್ ಅವಳಿ ಗೋಪುರಗಳ ಘಟನೆ, ಮುಂಬೈ ಭಯೋತ್ಪಾದಕ ದಾಳಿ, ಚೀನಾದ ಉದಯ ಮತ್ತು ರಷ್ಯಾ-ಉಕ್ರೇನ್ ಯುದ್ಧದಂತಹ ಅನೇಕ ಪ್ರಮುಖ ಘಟನೆಗಳನ್ನು ಮುಂಚಿತವಾಗಿ ಭವಿಷ್ಯ ನುಡಿದಿದ್ದರು. ಈ ಕಾರಣಕ್ಕಾಗಿ ಅವರನ್ನು ‘ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್’ ಎಂದು ಕರೆಯಲಾಗುತ್ತದೆ. ಅವರ ಹೇಳಿದ ಅನೇಕ ವಿಷಯಗಳು ನಿಜವಾಗುತ್ತಿದ್ದಂತೆ ‘ಭವಿಷ್ಯವಾಣಿಗಳು ವಿಶ್ವಾದ್ಯಂತ ಮಹತ್ವ’ ಪಡೆದುಕೊಂಡವು.
ಇದನ್ನೂ ಓದಿ: ಚಿನ್ನ ಖರೀದಿಸೋರಿಗೆ ಸಿಹಿ ಸುದ್ದಿ.. ಬೆಲೆಯಲ್ಲಿ ಅನಿರೀಕ್ಷಿತ ಬದಲಾವಣೆ.. ಇಂದಿನ ಬೆಲೆ ಎಷ್ಟಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us