/newsfirstlive-kannada/media/media_files/2025/12/14/suryakumara-yadav-2025-12-14-11-27-42.jpg)
ಟಿ-20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾಕ್ಕೆ ಮತ್ತೆ ಸಮಸ್ಯೆಗಳು ಎದುರಾಗಿವೆ. ಸೌತ್ ಆಫ್ರಿಕಾ ಸರಣಿಯಲ್ಲಿ ಗೊಂದಲಗಳಿಗೆ ಫುಲ್​ಸ್ಟಾಪ್ ಹಾಕಲು ಹೊರಟಿದ್ದ ಟೀಮ್ ಇಂಡಿಯಾ ಪರಿಹಾರ ಕಂಡುಕೊಳ್ಳುವಲ್ಲಿ ಫೇಲ್​ ಆಗಿದೆ. ಅಷ್ಟಕ್ಕೂ ಸೂರ್ಯಕುಮಾರ್ ಯಾದವ್ ಪಡೆಗೆ ಆಗಿರೋದೇನು?
ಟೀಮ್ ಇಂಡಿಯಾದಲ್ಲಿ ಸಮಸ್ಯೆಗಳು ಒಂದಾ, ಎರಡಾ? ಹೇಳ್ತಾ ಹೋದ್ರೆ ದಿನವಿಡಿ ಸಾಕಾಗೋದಿಲ್ಲ. ಆದ್ರೆ ಇಷ್ಟೆಲ್ಲಾ ಪ್ರಾಬ್ಲಮ್ಸ್ ಇದ್ರೂ ಟೀಮ್ ಮ್ಯಾನೇಜ್ಮೆಂಟ್ ಮಾತ್ರ, ಕ್ಯಾರೇ ಅನ್ನುತ್ತಿಲ್ಲ. ಬದಲಿಗೆ ತಾವು ಮಾಡ್ತಿರೋದೇ ಸರಿ ಅಂತ ಸುಮ್ಮನೆ ಕೈಕಟ್ಟಿ ಕುಳಿತಿದೆ. ಟಿ-20 ವಿಶ್ವಕಪ್​​ ಹತ್ತಿರವಾಗ್ತಿದ್ರೂ ಗೊಂದಲಗಳಿಗೆ ಫುಲ್​ಸ್ಟಾಪ್ ಇಡೋ ಮನಸ್ಸೂ ಕೂಡ ಮಾಡ್ತಿಲ್ಲ.
/filters:format(webp)/newsfirstlive-kannada/media/media_files/2025/12/20/team-india-16-2025-12-20-14-38-16.jpg)
ಓಪನಿಂಗ್ ಸ್ಲಾಟ್
ರೋಹಿತ್ ಶರ್ಮಾ ಟಿ-20 ಕ್ರಿಕೆಟ್​​​ಗೆ ನಿವೃತ್ತಿ ಹೇಳಿ ವರ್ಷ ಮೇಲಾಯ್ತು. ಆದ್ರೆ ರೋಹಿತ್ ನಿವೃತ್ತಿಯ ನಂತರವೂ, ಟೀಮ್ ಮ್ಯಾನೇಜ್ಮೆಂಟ್​​​​​​​​ ಅಭಿಷೇಕ್ ಶರ್ಮಾಗೆ ಸೂಟ್ ಆಗೇ ಜೋಡಿಯನ್ನ ಹುಡುಕಲೇ ಇಲ್ಲ. ಅಭಿಷೇಕ್ ಆರಂಭಿಕನಾಗಿ ಅತ್ಯುತಮ ಬ್ಯಾಟಿಂಗ್ ನಡೆಸ್ತಿದ್ದಾರೆ. ಎಡಗೈ ಬ್ಯಾಟರ್​ಗೆ ಒಳ್ಳೆ ಜೋಡಿ ಸಿಗ್ತಿಲ್ಲ. ಹಾಗಾಗಿ ಸದ್ಯ ಓಪನಿಂಗ್ ಸ್ಲಾಟ್ ಅನ್​ಸೆಟಲ್ ಆದಂತೆ ಕಾಣುತ್ತದೆ.
ಇದನ್ನೂ ಓದಿ: T20 World Cup: ಬಲಿಷ್ಠ ಟೀಂ ಇಂಡಿಯಾ ಪ್ರಕಟಿಸಿದ ಬಿಸಿಸಿಐ..!
/filters:format(webp)/newsfirstlive-kannada/media/media_files/2025/12/12/team-india-12-2025-12-12-08-03-19.jpg)
ಟಿ-20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಬ್ಯಾಟಿಂಗ್ ಆರ್ಡರ್​ನಲ್ಲಿ ಪದೇಪದೆ ಬದಲಾವಣೆ ಪ್ರಶ್ನಾರ್ಥಕವಾಗಿದೆ. ಒಮ್ಮೊಮ್ಮೆ ಅಕ್ಷರ್ ಪಟೇಲ್ ಟಾಪ್ 3ನಲ್ಲಿ ಬ್ಯಾಟಿಂಗ್ ನಡೆಸಿದ್ರೆ, ತಿಲಕ್ ವರ್ಮಾ ನಂಬರ್.5 ಅಥವಾ ನಂಬರ್.6 ಸ್ಲಾಟ್​ನಲ್ಲಿ ಬ್ಯಾಟಿಂಗ್ ನಡೆಸ್ತಾರೆ. ಇನ್ನು ಶಿವಂ ದುಬೆಗೆ, ಯಾವ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು ಅನ್ನೋದು ಸ್ವರ್ಃ ಅವರಿಗೇ ಗೊತ್ತಿಲ್ಲ.
ವರುಣ್ ಚಕ್ರವರ್ತಿಗೆ ಸಾಥ್ ಯಾರು?
ಟಿ-20 ಕ್ರಿಕೆಟ್​ನಲ್ಲಿ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಫಸ್ಟ್ ಚಾಯ್ಸ್ ಸ್ಪಿನ್ನರ್. ಆದ್ರೆ ವರುಣ್​ಗೆ ಸಾಥ್ ಕೊಡೋದು ಯಾರು? ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್ ತ್ರಿಮೂರ್ತಿ ಸ್ಪಿನ್ನರ್​ಗಳು ರೇಸ್​ನಲ್ಲಿದ್ದಾರೆ. ಆದ್ರೆ ಅಂತಿಮವಾಗಿ ನಾಯಕ ಯಾಱರಿಗೆ ಮಣೆ ಹಾಕ್ತಾರೆ..? ವರುಣ್​​ ಚಕ್ರರ್ಚತಿಗೆ ಯಾವ ಕಾಂಬಿನೇಷನ್ ಫಿಟ್ ಮಾಡ್ತಾರೆ ಅನ್ನೋದು ಸ್ಪಷ್ಟವಾಗಿಲ್ಲ.
ಕೋಚ್ ಗೌತಮ್ ಗಂಭೀರ್ ಫೇವರಿಟ್ ಆಟಗಾರ ಹರ್ಷಿತ್ ರಾಣಾ ಬಗ್ಗೆ ಹಲವು ಪ್ರಶ್ನೆಗಳು ಎದುರಾಗಿದೆ. ಸಮಸ್ಯೆಗಳು, ಗೊಂದಲಗಳು ಇದ್ರೆ ಟೀಮ್ ಇಂಡಿಯಾಗೆ ಟಿ-20 ವಿಶ್ವಕಪ್ ಗೆಲ್ಲೋದು ಅಷ್ಟು ಸುಲಭವಲ್ಲ. ಹಾಗಾಗಿ ಟೀಮ್ ಮ್ಯಾನೇಜ್ಮೆಂಟ್ ಆದಷ್ಟು ಬೇಗ ಎಲ್ಲದಕ್ಕೂ ಬ್ರೇಕ್ ಹಾಕಬೇಕಿದೆ.
ಇದನ್ನೂ ಓದಿ: ಮೊಟ್ಟೆಗಳು ತಿನ್ನಲು ಸೇಫ್ ಎಂದ FSSAI : ಮೊಟ್ಟೆ ಸುರಕ್ಷಿತ, ಆತಂಕ ಬೇಡ ಎಂದ FSSAI
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us