T20 World Cup: ಬಲಿಷ್ಠ ಟೀಂ ಇಂಡಿಯಾ ಪ್ರಕಟಿಸಿದ ಬಿಸಿಸಿಐ..!

ಟಿ20 ವಿಶ್ವಕಪ್ ಆಡಲು ಸೂರ್ಯ ಪಡೆ ರೆಡಿಯಾಗಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ 15 ಆಟಗಾರರುಳ್ಳ ತಂಡವನ್ನು ಅಜಿತ್ ಅಗರ್ಕರ್​ ಪ್ರಕಟಿಸಿದ್ದಾರೆ. ತಂಡದಲ್ಲಿ ಯಾರೆಲ್ಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಅನ್ನೋದ್ರ ವಿವರ ಹೀಗಿದೆ..

author-image
Ganesh Kerekuli
Team india (16)
Advertisment

ಟಿ-20 ವಿಶ್ವಕಪ್​​-2026ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. ಅಜಿತ್ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿಯು 15 ಸದಸ್ಯರುಳ್ಳ ಆಟಗಾರರ ತಂಡವನ್ನು ಪ್ರಕಟಿಸಿದೆ. ರಿಂಕು ಸಿಂಗ್, ಇಶಾನ್ ಕಿಶನ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಇದೇ ತಂಡ ವಿಶ್ವಕಪ್​ಗೂ ಮುನ್ನ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ-20 ಸಿರೀಸ್​ನಲ್ಲೂ ಆಡಲಿದೆ. 

ಯಾರೆಲ್ಲ ಆಡ್ತಾರೆ ವಿಶ್ವಕಪ್..?

ತಂಡದಲ್ಲಿ ಯಾರಿಗೆಲ್ಲ ಚಾನ್ಸ್ ಸಿಕ್ಕಿದೆ ಎಂದು ನೋಡೋದಾದರೆ.. ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ವಾಯ್ಸ್ ಕ್ಯಾಪ್ಟನ್, ಇಶಾನ್ ಕಿಶನ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಆರ್ಷ್​ದೀಪ್ ಸಿಂಗ್, ಹರ್ಷಿತ್ ರಾಣಾ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 

ಇದನ್ನೂ ಓದಿ:ಟೀಮ್​ ಇಂಡಿಯಾಗೆ 30 ರನ್​ಗಳ ಗೆಲುವು.. ಟಿ-20 ಸರಣಿ ಗೆದ್ದ ಸೂರ್ಯ ಪಡೆ..!

2026, ಫೆಬ್ರವರಿ 7 ರಿಂದ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದ್ದು ಮಾರ್ಚ್​ 8 ರಂದು ಫೈನಲ್ ನಡೆಯಲಿದೆ. ಮುಂಬೈ, ಕೋಲ್ಕತ್ತ, ಅಹ್ಮದಾಬಾದ್, ಚೆನ್ನೈ, ದೆಹಲಿ, ಶ್ರೀಲಂಕಾದ ಕೊಲೊಂಬೋ ಹಾಗೂ ಕ್ಯಾಂಡಿಯಲ್ಲಿ ವಿಶ್ವಕಪ್ ಪಂದ್ಯಗಳು ಆಯೋಜನೆಗೊಂಡಿವೆ. ಮೊದಲು ಪಂದ್ಯವು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ್ರೆ, ಫೈನಲ್ ಮ್ಯಾಚ್ ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. 

ಒಟ್ಟು ನಾಲ್ಕು ಗುಂಪುಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. 

  • Group A: ಭಾರತ, USA, ನಮಿಬಿಯಾ, ನೆದರ್ಲೆಂಡ್, ಪಾಕಿಸ್ತಾನ್
  • Group B: ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ, ಐರ್ಲೆಂಡ್, ಒಮೆನ್
  • Group C: ಇಂಗ್ಲೆಂಡ್, ವೆಸ್ಟ್ ವಿಂಡೀಸ್, ಬಾಂಗ್ಲಾದೇಶ್, ಇಟಲಿ, ನೇಪಾಳ್
  • Group D: ಸೌಥ್ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ಥಾನ್, ಕೆನಡಾ, UAE

ಇದನ್ನೂ ಓದಿ: ಬರೀ 16 ಎಸೆತದಲ್ಲಿ ಅರ್ಧ ಶತಕ ಬಾರಿಸಿದ ಪಾಂಡ್ಯ.. ತಿಲಕ್ ಆಟ ಹೇಗಿತ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20I team Team India T20I T20 world cup team india squad
Advertisment