ಟೀಮ್​ ಇಂಡಿಯಾಗೆ 30 ರನ್​ಗಳ ಗೆಲುವು.. ಟಿ-20 ಸರಣಿ ಗೆದ್ದ ಸೂರ್ಯ ಪಡೆ..!

ಬಿಗ್​​ ಸ್ಕೋರ್​ ಚೇಸಿಂಗ್​ಗಿಳಿದ ಸೌತ್​ ಆಫ್ರಿಕಾ ಕೂಡ ಬೊಂಬಾಟ್​ ಆರಂಭವನ್ನೇ ಪಡೆದುಕೊಳ್ತು. ಆರಂಭಿಕ 10 ಓವರ್​​ಗಳಲ್ಲಿ ಹರಿಣಗಳ ಅಬ್ಬರ ನಡೀತು. ಕೊನೆಯ 10 ಓವರ್​ಗಳಲ್ಲಿ ಇಂಡಿಯನ್ ಬೌಲರ್ಸ್​ ಗೇಮ್​ ಚೆಂಜ್​ ಮಾಡಿದ್ರು. ಟೀಮ್ ಇಂಡಿಯಾದ ಭರ್ಜರಿ ಬೌಲಿಂಗ್​ ದಾಳಿ ಹೇಗಿತ್ತು?

author-image
Ganesh Kerekuli
Hardik pandya (10)
Advertisment
  • ಚಕ್ರವರ್ತಿಯ ಚಮಾತ್ಕಾರಕ್ಕೆ ಸೌತ್​ ಆಫ್ರಿಕಾ ಸ್ಟನ್​
  • ಚೇಸಿಂಗ್​ಗೆ ಟ್ವಿಸ್ಟ್​ ಕೊಟ್ಟ ಹಾರ್ದಿಕ್, ಬೂಮ್ರಾ
  • 2 ವಿಕೆಟ್​ ಕಬಳಿಸಿ ಜಸ್​​ಪ್ರಿತ್ ಬೂಮ್ರಾ ಮಿಂಚು

232 ರನ್​ಗಳ ಬಿಗ್​ ಟಾರ್ಗೆಟ್​ ಚೇಸಿಂಗ್​ಗಿಳಿದ ಸೌತ್​ ಆಫ್ರಿಕಾ ಕೂಡ ಸೂಪರ್​ ಆರಂಭ ಪಡೆದುಕೊಳ್ತು. ಕ್ವಿಂಟನ್​ ಡಿ ಕಾಕ್​ ಮೊದಲ ಓವರ್​ನಲ್ಲೇ ಹ್ಯಾಟ್ರಿಕ್​ ಬೌಂಡರಿ ಬಾರಿಸಿ ಚೇಸಿಂಗ್​ಗೆ ಕಿಕ್​ ಸ್ಟಾರ್ಟ್​​ ನೀಡಿದ್ರು. 

ಪವರ್​​ ಪ್ಲೇನಲ್ಲಿ ಸ್ಪೋಟಕ ಬ್ಯಾಟಿಂಗ್​ ನಡೆಸಿದ ಕ್ವಿಂಟನ್​ ಡಿ ಕಾಕ್​ ಪವರ್​ಫುಲ್​ ಆರಂಭ ಒದಗಿಸಿದ್ರು. ಇಂಡಿಯನ್ ಬೌಲರ್​ಗಳ ಮೇಲೆ ಡಿಕಾಕ್​ ಅಟ್ಯಾಕ್​ ಮಾಡಿದ ಪರಿಣಾಮ ಪವರ್​ ಪ್ಲೇ ಅಂತ್ಯಕ್ಕೆ ಸೌತ್​ ಆಫ್ರಿಕಾ ವಿಕೆಟ್​ ನಷ್ಟವಿಲ್ಲದೇ 67 ರನ್​ಗಳಿಸಿತು. 7ನೇ ಓವರ್​ನಲ್ಲಿ ಬೌಲಿಂಗ್​ ದಾಳಿಗಿಳಿದ ವರುಣ್​ ಚಕ್ರವರ್ತಿ ಮೊದಲ ಬ್ರೇಕ್​ ಥ್ರೂ ನೀಡಿದ್ರು. ಶಿವಂ ದುಬೆ ಹಿಡಿದ ಅದ್ಭುತ ಕ್ಯಾಚ್​ಗೆ ರಿಝಾ ಹೆಂಡ್ರಿಕ್ಸ್​ ಬಲಿಯಾದ್ರು. 

ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್ ಜಾಹೀರಾತಿನಲ್ಲಿ ನಟನೆ : ಕ್ರಿಕೆಟಿಗರು, ಸೆಲೆಬ್ರೆಟಿಗಳ ಆಸ್ತಿಪಾಸ್ತಿ ಜಫ್ತಿ ಮಾಡಿದ ಇ.ಡಿ.

Hardik pandya (11)

ಡಿ ಕಾಕ್​ 30 ಎಸೆತಗಳಲ್ಲಿ ಹಾಫ್​ ಸೆಂಚುರಿ ಸಿಡಿಸಿದ್ರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಡೆವಾಲ್ಡ್​ ಬ್ರೆವಿಸ್ ಡಿ ಕಾಕ್​ಗೆ ಸಾಥ್​ ನೀಡಿದ್ರು. ​ ಅಗ್ರೆಸ್ಸಿವ್ ಆಟವಾಡಿದ ಈ ಜೋಡಿ  23 ಎಸೆತಕ್ಕೆ 51 ರನ್​ಗಳ ಜೊತೆಯಾಟವಾಡಿದ್ರು. ಡಿ ಕಾಕ್ ಆರ್ಭಟಕ್ಕೆ ಜಸ್​​ಪ್ರಿತ್​ ಬೂಮ್ರಾ ಫುಲ್​ ಸ್ಟಾಪ್​ ಇಟ್ರು. 11ನೇ ಓವರ್​ನಲ್ಲಿ ಡಿ ಕಾಕ್ Caught & Bowled ಆದ್ರೆ, ನೆಕ್ಸ್ಟ್​​ ಓವರ್​​ನಲ್ಲಿ ಹಾರ್ದಿಕ್​ ಪಾಂಡ್ಯ, ಡೆವಾಲ್ಡ್​ ಬ್ರೆವಿಸ್​ಗೆ ಪೆವಿಲಿಯನ್​ ದಾರಿ ತೋರಿಸಿದ್ರು. ಇದ್ರೊಂದಿಗೆ ಸೌತ್​ ಆಫ್ರಿಕಾ ಕುಸಿತ ಆರಂಭವಾಯ್ತು. 

ಇದನ್ನೂ ಓದಿ: 28 ಕೋಟಿ ನೀರಿನಲ್ಲಿ ಹೋಮ..! ಯಾವ ಫ್ರಾಂಚೈಸಿ ಹೇಗೆಲ್ಲ ಕೈಸುಟ್ಟುಕೊಂಡಿವೆ?

13ನೇ ಓವರ್​ನಲ್ಲಿ ವರುಣ್​ ಚಕ್ರವರ್ತಿ ಸೌತ್​ ಆಫ್ರಿಕಾಗೆ ಡಬಲ್​ ಶಾಕ್​ ನೀಡಿದ್ರು. ಚಕ್ರವರ್ತಿಯ ಚಕ್ರವ್ಯೂಹಕ್ಕೆ ಸಿಲುಕಿದ ಮರ್ಕರಮ್​, ಪೆರೆರಾ ಬ್ಯಾಕ್ ಟು ಬ್ಯಾಕ್​ ಪೆವಿಲಿಯನ್​ ಸೇರಿದ್ರು. 2 ಬೌಂಡರಿ ಬಾರಿಸಿದ ಡೇವಿಡ್​ ಮಿಲ್ಲರ್​ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಆರ್ಷ್​​ದೀಪ್​ ಸಿಂಗ್​ ಆರ್ಭಟದ ಮುಂದೆ ಸೈಲೆಂಟಾಗಿ ಪೆವಿಲಿಯನ್​ ಸೇರಿದ್ರು. 2 ಸಿಕ್ಸರ್​​ ಸಿಡಿಸಿದ ಜಾರ್ಜ್ ಲಿಂಡೆ ವರುಣ್​ ಚಕ್ರವರ್ತಿಯ ಚಮತ್ಕಾರದ ಮುಂದೆ ದಂಗಾದ್ರು.    

14 ರನ್​ಗಳಿಸಿದ ಮಾರ್ಕೋ ಯಾನ್ಸೆನ್​ಗೆ ಬೂಮ್ರಾ ​ಪೆವಿಲಿಯನ್​ ದಾರಿ ತೋರಿಸಿದ್ರು. ಕಾರ್ಬಿನ್​ ಬೋಶ್​, ಲುಂಗಿ ಎನ್​ಗಿಡಿ ಗೆಲುವಿನ ದಡ ಸೇರಿಸುವಲ್ಲಿ ಫೇಲ್ ಆದ್ರು. 20 ಓವರ್​ಗಳ ಅಂತ್ಯಕ್ಕೆ ಕೇವಲ 201 ರನ್​ಗಳಿಸಲಷ್ಟೇ ಸೌತ್​​ ಆಫ್ರಿಕಾ ಶಕ್ತವಾಯ್ತು. 30 ರನ್​ಗಳ ಜಯ ಸಾಧಿಸಿದ ಟೀಮ್ ಇಂಡಿಯಾ 3-1 ಅಂತರದಲ್ಲಿ ಸರಣಿ ಗೆದ್ದು ಬೀಗಿತು. 

ಇದನ್ನೂ ಓದಿ:ಈ ಐದು ಆಟಗಾರರಿಗೆ ಮತ್ತೆ ಮರುಜೀವ ಕೊಟ್ಟ IPL; ಇದೇ ಲಾಸ್ಟ್ ಚಾನ್ಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gautam Gambhir Surya kumar Yadav Team India Ind vs SA
Advertisment