/newsfirstlive-kannada/media/media_files/2025/12/18/ipl-auctin-2025-12-18-17-28-38.jpg)
ಐಪಿಎಲ್.. ಇದು ಜಸ್ಟ್ ಎಂಟರ್​​ಟೈನಿಂಗ್ ಲೀಗ್ ಅಲ್ಲ.. ಇದು ಎಷ್ಟೋ ಆಟಗಾರರಿಗೆ, ಕರಿಯರ್ ರೂಪಿಸಿರುವ ಲಕ್ಕಿ ಲೀಗ್. ಐಪಿಎಲ್​ನಲ್ಲಿ ಒಂದೇ ಒಂದು ಅದ್ಭುತ ಇನ್ನಿಂಗ್ಸ್​, ಕ್ರಿಕೆಟಿಗರ ಅದೃಷ್ಟವನ್ನೇ ಬದಲಾಯಿಸಿಬಿಡುತ್ತೆ. ಹಾಗೆ ಒಂದು ಒಂದು ಕಳಪೆ ಪಂದ್ಯ, ಹೀರೋ ಆಗಿದ್ದವರನ್ನ ಝೀರೋ ಮಾಡಿಬಿಡುತ್ತದೆ. ಈ ಮಿಲಿಯನ್ ಡಾಲರ್ ಟೂರ್ನಿಗೆ, ಅಷ್ಟು ಪವರ್ ಇದೆ. ಆಟಗಾರರ ಹಣೆಬರಹ ಬದಲಾಯಿಸುವ ತಾಖತ್ತಿದೆ. ಇದೀಗ ಐಪಿಎಲ್​ ಮೂಲಕವೇ ಕೆಲ ಯುವ ಕ್ರಿಕೆಟಿಗರು, ಮತ್ತೆ ಟೀಮ್ ಇಂಡಿಯಾ ಕಮ್​ಬ್ಯಾಕ್ ನಿರೀಕ್ಷೆಯಲ್ಲಿದ್ದಾರೆ.​
ಡ್ಯಾಶಿಂಗ್ ಬ್ಯಾಟ್ಸ್​ಮನ್​ ಪೃಥ್ವಿ ಶಾ, ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದು, ಜುಲೈ 25, 2021ರಲ್ಲಿ. ನಾಲ್ಕುವರೆ ವರ್ಷದಲ್ಲಿ ಪೃಥ್ವಿ, ಟೀಮ್ ಇಂಡಿಯಾದಿಂದ ದೂರ ಉಳಿದಿದ್ರು. ಕೌಂಟಿ ಕ್ರಿಕೆಟ್​ನಲ್ಲಿ ಪೃಥ್ವಿ ಡೀಸೆಂಟ್ ಪರ್ಫಾಮೆನ್ಸ್ ನೀಡಿದ್ರು. ಆದ್ರೆ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಮಹಾರಾಷ್ಟ್ರ ಬ್ಯಾಟರ್, ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದ್ರೀಗ ಕಮ್​​ಬ್ಯಾಕ್​ಗಾಗಿ ಪೃಥ್ವಿ ಐಪಿಎಲ್​​​​​​​​ ಟೂರ್ನಿಯನ್ನ ಎದುರು ನೋಡ್ತಿದ್ದಾರೆ.
ಇದನ್ನೂ ಓದಿ: ಬದಲಾದ ಧೋನಿ ಗೇಮ್​ ಪ್ಲಾನ್.. ಹರಾಜಿನಲ್ಲಿ ಬುದ್ಧಿವಂತಿಕೆ ತೋರಿಸಿದ CSK..!
28 ವರ್ಷದ ಸರ್ಫರಾಜ್ ಖಾನ್ ಎಲ್ಲಾ ಫಾರ್ಮೆಟ್​ನಲ್ಲೂ ಪರ್ಫಾಮೆನ್ಸ್ ಮಾಡಿದ್ದಾರೆ. ಆದ್ರೆ ಸರ್ಫರಾಜ್​​ಗೆ ಅದೃಷ್ಟ ಮಾತ್ರ ಕೈ ಹಿಡಿಯಲೇ ಇಲ್ಲ. ವರ್ಷದ ಹಿಂದೆ ಭಾರತ ಟೆಸ್ಟ್ ತಂಡದಲ್ಲಿದ್ದ ಮುಂಬೈಕರ್, ಇದೀಗ ರಾಷ್ಟ್ರೀಯ ತಂಡದ ಮೆಟ್ಟಿಲೇರಲು ಕಾತರದಿಂದ ಕಾಯ್ತಿದ್ದಾರೆ. ಐಪಿಎಲ್​ನಲ್ಲಿ ತಮ್ಮ ಸಾಮರ್ಥ್ಯ ತೋರಿಸಲು, ಸರ್ಫರಾಜ್ ರೆಡಿಯಾಗಿದ್ದಾರೆ.
ಪ್ಯೂರ್​ ಟ್ಯಾಲೆಂಟೆಡ್​ ಲೆಗ್​ಸ್ಪಿನ್ನರ್ ರವಿ ಬಿಷ್ನೋಯ್​​, ಎಲ್ಲಾ ಫಾರ್ಮೆಟ್ ಆಡುವ ಸಾಮರ್ಥ್ಯ ಹೊಂದಿರೋ ಆಟಗಾರ. ಆದ್ರೆ ಬಿಷ್ನೊಯ್, ಏಕದಿನ ಮತ್ತು ಟಿ-20 ಕ್ರಿಕೆಟ್​ಗೆ ಮಾತ್ರ ಸೀಮಿತವಾಗಿದ್ರು. ಟೀಮ್ ಇಂಡಿಯಾ ಪರ ವೈಟ್​ಬಾಲ್ ಕ್ರಿಕೆಟ್​ ಆಡಿದ್ದ ಬಿಷ್ನೋಯ್, ಮೂರುವರೆ ವರ್ಷದ ಬಳಿಕ ಮತ್ತೆ ಇಂಡಿಯನ್ ಟೀಮ್ ಜೆರ್ಸಿ ತೊಡೋ ಕನಸು ಕಾಣ್ತಿದ್ದಾರೆ. ಅದು ಮುಂಬರುವ ಐಪಿಎಲ್ ಮೂಲಕ.
ಇದನ್ನೂ ಓದಿ: ಕರ್ನಾಟಕ ತಂಡಕ್ಕೆ ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ ಕಂಬ್ಯಾಕ್..!
ಮಧ್ಯಪ್ರದೇಶ ಆಲ್​ರೌಂಡರ್ ವೆಂಕಟೇಶ್ ಅಯ್ಯರ್, ವೈಟ್​ಬಾಲ್​ಗೆ ಸಖತ್ ಸೂಟ್ ಆಗ್ತಾರೆ. ಆದ್ರೆ ಇನ್​ಕನ್ಸಿಸ್ಟೆನ್ಸಿ ವೆಂಕಿ ಅಯ್ಯರ್​ರನ್ನ, ಟೀಮ್ ಇಂಡಿಯಾದಿಂದ ದೂರ ಮಾಡಿದೆ. 3 ವರ್ಷಗಳ ಹಿಂದೆ ODI ಮತ್ತು T20 ಫಾರ್ಮೆಟ್​ನಲ್ಲಿ ರಾಷ್ಟ್ರೀಯ ತಂಡವನ್ನ ಪ್ರತಿನಿಧಿಸಿದ್ದ ವೆಂಕಿ, ನಂತರ ಸೆಲೆಕ್ಟರ್ಸ್​ ಅವಕೃಪೆಗೆ ಪಾತ್ರರಾಗಿದ್ರು. ಆದ್ರೀಗ ಐಪಿಎಲ್​ನಲ್ಲಿ ಶತಾಯಗತಾಯ ಪರ್ಫಾಮ್ ಮಾಡಿ, ಮೆನ್ ಇನ್ ಬ್ಲೂ ಪಡೆಗೆ ಸೇರಲು ಪಣತೊಟ್ಟಿದ್ದಾರೆ.
ರಾಹುಲ್ ಚಹರ್..?
ರಾಜಸ್ಥಾನದ ಲೆಗ್​ಸ್ಪಿನ್ನರ್ ರಾಹುಲ್ ಚಹರ್, ಆರಂಭಿಕ ದಿನಗಳಲ್ಲಿ ಭಾರೀ ಸದ್ದು ಮಾಡಿದ್ರು. ಆದ್ರೆ ಯುಜುವೇಂದ್ರ ಚಹಲ್, ರವಿ ಬಿಷ್ನೋಯ್ ಸೇರಿದಂತೆ ಇತರೆ ಸ್ಪಿನ್ನರ್​ಗಳ ಸುಳಿಗೆ ಸಿಲುಕಿ ಕಳೆದು ಹೋಗಿದ್ದ ಚಹರ್, 4 ವರ್ಷಗಳ ಬಳಿಕ ಕಾಂಪಿಟೇಶನ್​​ಗೆ ನಿಂತಿದ್ದಾರೆ. ಸೂಕ್ತ ವೇದಿಕೆಗಾಗಿ ಕಾಯುತ್ತಿದ್ದ ಚಹರ್, ಪ್ರತಿ ಸ್ಫರ್ಧಿಗಳನ್ನ ಸೈಡ್​ ಹೋಡೆಯೋಕೆ ಮುಂದಾಗಿದ್ದಾರೆ.
ಐಪಿಎಲ್ ಸೀಸನ್-19ರ ಮೂಲಕ ಹೊಸ ದಾರಿ ಹುಡುಕುತ್ತಿರುವ ಇಂಡಿಯನ್ ಯಂಗ್​​ಸ್ಟರ್ಸ್ ಹಾದಿ ಸುಗಮವಾಗಲಿ. ಮತ್ತೆ ಬ್ಲೂ ಜೆರ್ಸಿ ತೊಟ್ಟು ಮಿಂಚಲಿ ಅನ್ನೋದೇ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಆಶಯ.
ಇದನ್ನೂ ಓದಿ: ಒಂದೇ ಒಂದು ವಿಭಾಗದಲ್ಲಿ ಎಡವಿದ RCB.. ಹರಾಜಿನಲ್ಲಿ ತಪ್ಪು ಮಾಡಿತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us