/newsfirstlive-kannada/media/media_files/2025/12/18/rcb-7-2025-12-18-09-05-42.jpg)
ಐಪಿಎಲ್ ಸೀಸನ್​-18ರಲ್ಲಿ ಹೊಸ ಅಧ್ಯಾಯ ಶುರುಮಾಡಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದ್ರೀಗ ಮಿನಿ ಹರಾಜಿನಲ್ಲಿ ಮತ್ತೆ ನ್ಯೂ ಚಾಪ್ಟರ್​ ಆರಂಭಿಸಿರುವ ಆರ್​ಸಿಬಿ 2ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ಆರ್​ಸಿಬಿ, ಮಿನಿ ಹರಾಜಿನಲ್ಲಿ ಓಡುವ ಕುದುರೆಗಳನ್ನ ಹುಡುಕಿ ಹುಡಕಿ, ತಂಡಕ್ಕೆ ಕರೆತಂದಿದೆ. ಹೊಸ ಆಟಗಾರರ ಎಂಟ್ರಿಯಿಂದ ಬೆಂಗಳೂರು ತಂಡ, ಹಿಂದೆಂದಿಗಿಂತಲು ಬಲಿಷ್ಟವಾಗಿ ಕಾಣುತ್ತಿದೆ.
/filters:format(webp)/newsfirstlive-kannada/media/media_files/2025/12/17/rcb-6-2025-12-17-09-03-48.jpg)
ಆರ್​ಸಿಬಿಗೆ ಆಲ್​ರೌಂಡರ್ಸ್ ಹೆಚ್ಚಿಸಿದ ಬಲ
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಆಲ್​ರೌಂಡರ್​ಗಳಿಂದ ತುಂಬಿದೆ. ವೆಂಕಟೇಶ್ ಅಯ್ಯರ್ ಎಂಟ್ರಿಯಿಂದ, ಆರ್​ಸಿಬಿ ಬಲ ಮತ್ತಷ್ಟು ಹೆಚ್ಚಿಸಿದೆ. ಟಿ-20 ಕ್ರಿಕೆಟ್​​ಗೆ ಆಲ್​ರೌಂಡರ್ಸ್​​​ ತುಂಬಾ ಇಂಪಾರ್ಟೆಂಟ್. ಅದನ್ನ ಚೆನ್ನಾಗಿ ಅರಿತಿರುವ ಆರ್​ಸಿಬಿ, ತಂಡದಲ್ಲಿ 9 ಆಟಗಾರರಿಗೆ ಸ್ಥಾನ ಕಲ್ಪಿಸಿದೆ.
ರಾಯಲ್​ ಚಾಲೆಂಜರ್ಸ್​ಗೆ ವೇಗಿಗಳ ಟೆನ್ಶನ್ ಇಲ್ಲ
ಆರ್​ಸಿಬಿ ತಂಡದಲ್ಲಿ ಫಾಸ್ಟ್​ ಬೌಲರ್​ಗಳು ತುಂಬಿ ತುಳುಕುತ್ತಿದ್ದಾರೆ. ಅನುಭವಿಗಳ ಜೊತೆಗೆ ಯುವ ವೇಗಿಗಳು, ಆರ್​​ಸಿಬಿ ಸ್ಟ್ರೆಂಥ್ ಹೆಚ್ಚಿಸಿದ್ದಾರೆ. ಅದ್ರಲ್ಲೂ ಲೋಕಲ್ ಪೇಸರ್ಸ್​​ ತಂಡದಲ್ಲಿರೋದು, ಬೆಂಗಳೂರು ತಂಡಕ್ಕೆ ಬಿಗ್ ಬೌನಸ್ ಸಿಕ್ಕಂತೆ. ಸದ್ಯ ಫಾಸ್ಟ್​ ಬೌಲಿಂಗ್​​ ಅಟ್ಯಾಕ್​ನಲ್ಲಿ ಬ್ಯಾಕ್​ಅಪ್ ಬೌಲರ್ಸ್ ಇರೋದ್ರಿಂದ, ಬೆಂಗಳೂರು ತಂಡಕ್ಕೆ ನೋ ಟೆನ್ಶನ್.​
ಟಿಮ್ ಡೇವಿಡ್, ಫಿಲ್ ಸಾಲ್ಟ್, ರೊಮ್ಯಾರಿಯೋ ಶಫರ್ಡ್, ಜೋಷ್ ಹೇಝಲ್​ವುಡ್​​ರಂತಹ ಸೂಪರ್​ಸ್ಟಾರ್ ಪ್ಲೇಯರ್ಸ್​​, ಆರ್​ಸಿಬಿಗೆ ನೂರಾನೆ ಬಲ ಇದ್ದಂತೆ. ಜೊತೆಗೆ ಜೇಕಬ್ ಬೆಥಲ್, ಜೇಕಭ್ ಡಫಿ ಮತ್ತು ನುವಾನ್ ತುಷಾರರಂತಹ ಆಟಗಾರರು, ಬೆಂಗಳೂರು ತಂಡದ ಗೇಮ್ ಚೇಂಜರ್ಸ್​ ಆಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ:ವಿದೇಶಿ ಆಟಗಾರರಿಗೆ ನಿರಾಸೆ.. ಹಣದ ಗುಂಗಿನಲ್ಲಿದ್ದ ಸ್ಟಾರ್​ಗಳಿಗೆ ಬಿಗ್ ಶಾಕ್..!
/filters:format(webp)/newsfirstlive-kannada/media/media_files/2025/09/15/rajat_patidar_ipl-2025-09-15-16-31-38.jpg)
ಬೆಂಗಳೂರು ತಂಡ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್. ಮೂರೂ ವಿಭಾಗಗಳನ್ನೂ ಚೆನ್ನಾಗೇ ಕವರ್​ಅಪ್ ಮಾಡಿದೆ. ಹೀಗಿರುವಾಗ ಬೆಂಗಳೂರು ತಂಡಕ್ಕೆ ಇಂಪ್ಯಾಕ್ಟ್ ಪ್ಲೇಯರ್ ಕೊರತೆ ಇಲ್ಲವೇ ಇಲ್ಲ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮ್ಯಾಚ್ ವಿನ್ ಮಾಡಿಸುವಂತಹ ಪ್ಲೇಯರ್ಸ್​ ಇದ್ದಾರೆ. ಸದ್ಯ ಆರ್​ಸಿಬಿಗೆ ಇಂಪ್ಯಾಕ್ಟ್ ಪ್ಲೇಯರ್​ಗಳ ಗೊಂದಲವಿಲ್ಲ. ಅದೇ ಗುಡ್​ನ್ಯೂಸ್.
ಬೆಂಗಳೂರು ತಂಡದಲ್ಲಿ ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್​..!
ಎಲ್ಲಾ ವಿಭಾಗಗಳನ್ನ ಸಾಲಿಡ್ ಆಗಿ ಕಟ್ಟಿರುವ ಬೆಂಗಳೂರು ತಂಡ, ಸ್ಪೆಷಲಿಸ್ಟ್ ಸ್ಪಿನ್ನರ್​​ಗಳ ವಿಚಾರದಲ್ಲಿ ಎಲ್ಲೋ ಎಡವಿದೆ ಅನಿಸುತ್ತದೆ. ತಂಡದಲ್ಲಿ ಇರೋದು ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್. ಅದು ಲೆಗ್​ಸ್ಪಿನ್ನರ್ ಸುಯೇಷ್ ಶರ್ಮಾ ಮಾತ್ರ. ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್ ಇದ್ರೂ ಅವರು ಆಲ್​ರೌಂಡರ್ಸ್​ ಅಷ್ಟೇ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ.. ಸ್ಥಳದಲ್ಲೇ ಪ್ರಾಣಬಿಟ್ಟ ಮೂವರು ಯುವಕರು
ಆರ್​ಸಿಬಿ ಹರಾಜಿನಲ್ಲಿ ಪದೇ ಪದೇ ಎಡವುತ್ತಿತ್ತು. ಆದ್ರೆ ಕಳೆದೆರಡು ಆಕ್ಷನ್​ನಲ್ಲಿ ಬೆಂಗಳೂರು ತಂಡದ ಮಾಲೀಕರು ಆಟಗಾರರ ಖರೀದಿಯಲ್ಲಿ ಸುಪರ್ಬ್​​​ ಗೇಮ್ ಆಡಿದ್ದಾರೆ. ತಂಡಕ್ಕೆ ಅವಶ್ಯಕತೆ ಇರೋ ಆಟಗಾರರನ್ನೇ ಖರೀದಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us