/newsfirstlive-kannada/media/media_files/2025/12/17/ipl-2025-12-17-14-37-01.jpg)
ನಿನ್ನೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಭಾರತೀಯ ಆಟಗಾರರು ಕೋಟಿ ಕೋಟಿ ಮೊತ್ತಕ್ಕೆ ಸೇಲ್ ಆಗಿ ದಾಖಲೆ ಬರೆದಿದ್ದಾರೆ. ಈ ಬಾರಿ ಇಂಡಿಯನ್ ಅನ್​ಕ್ಯಾಪ್ಡ್ ಪ್ಲೇಯರ್ಸ್​, ಫ್ರಾಂಚೈಸಿ ಮಾಲೀಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ದೇಸಿ ಕ್ರಿಕೆಟ್​​ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿರುವ ಯಂಗ್ ಇಂಡಿಯನ್ಸ್ ರಾತ್ರೋ ರಾತ್ರಿ ಕರೋಡ್ ಪತಿಗಳಾಗಿದ್ದಾರೆ.​
ಹರಾಜಿನಲ್ಲಿ ಫ್ರಾಂಚೈಸಿ ಮಾಲೀಕರು ಯಂಗ್ ಇಂಡಿಯನ್ಸ್ ಪರ ಒಲವು ತೋರಿಸಿದ್ರೆ, ವಿದೇಶಿ ಆಟಗಾರರು ಮಾತ್ರ ಭಾರೀ ನಿರಾಸೆಗೊಂಡ್ರು. ಬೇಸ್​​ಪ್ರೈಸ್​​ಗಿಂತ ಹೆಚ್ಚು ಮೊತ್ತಕ್ಕೆ ಸೇಲ್ ಆಗೋ ನಿರೀಕ್ಷೆಯಲ್ಲಿದ್ದ ಫಾರಿನ್ ಸ್ಟಾರ್ಸ್​ಗೆ, ಆಕ್ಷನ್​ನಲ್ಲಿ ಆಘಾತ ಎದುರಾಯ್ತು.
/filters:format(webp)/newsfirstlive-kannada/media/media_files/2025/12/17/ipl-1-2025-12-17-14-37-38.jpg)
ವಿದೇಶಿ ಆಟಗಾರರಿಗೆ ಶಾಕ್..!
ದಕ್ಷಿಣ ಆಫ್ರಿಕಾ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ ಕೇವಲ 1 ಕೋಟಿ ಬೇಸ್​​ಪ್ರೈಸ್​​ಗೆ ಮುಂಬೈ ಇಂಡಿಯನ್ಸ್​ ತಂಡಕ್ಕೆ ಸೇಲಾದ್ರು. ಆಫ್ರಿಕಾದ ಡಿಸ್ಟ್ರಕ್ಟೀವ್ ಬ್ಯಾಟರ್ ಡೇವಿಡ್ ಮಿಲ್ಲರ್ ಮತ್ತು ಇಂಗ್ಲೆಂಡ್​​ನ ಬೆನ್ ಡಕೆಟ್​ ಇಬ್ಬರೂ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ್ರು. ಲಂಕಾದ ಲೆಗ್​ಸ್ಪಿನ್ ಆಲ್​ರೌಂಡರ್ ವನಿಂದು ಹಸರಂ ಮತ್ತು ಆಫ್ರಿಕಾದ ವೇಗಿ ಎನ್ರಿಚ್ ನೋಕಿಯಾ, ಅದೇ ಮೊತ್ತಕ್ಕೆ ಲಕ್ನೋ ಸೂಪರ್​ಜೈಂಟ್ಸ್​​ ತಂಡದ ತೆಕ್ಕೆಗೆ ಬಿದ್ರು.
ಇದನ್ನೂ ಓದಿ:IPL Auction 2026: ರಾತ್ರೋರಾತ್ರಿ ಕೋಟಿ ವೀರರಾದ ಭಾರತೀಯ ಪ್ರತಿಭೆಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us