IPL Auction 2026: ರಾತ್ರೋರಾತ್ರಿ ಕೋಟಿ ವೀರರಾದ ಭಾರತೀಯ ಪ್ರತಿಭೆಗಳು..!

ಐಪಿಎಲ್ ಮಿನಿ ಹರಾಜಿನಲ್ಲಿ ಭಾರತೀಯ ಆಟಗಾರರಿಗೆ ಜಾಕ್ ಪಾಟ್ ಹೊಡೆದಿದೆ. ಅನ್​ಕ್ಯಾಪ್ಡ್​ ಪ್ಲೇಯರ್ಸ್​ ಲಿಸ್ಟ್​ನಲ್ಲಿ ದಾಖಲೆ ಬರೆದಿದ್ದಾರೆ. ಮತ್ತೊಂದೆಡೆ ಕೋಟಿ ಕೋಟಿ ಮೊತ್ತದ ಭಾರೀ ನಿರೀಕ್ಷೆಯಲ್ಲಿದ್ದ ವಿದೇಶಿ ಆಟಗಾರರಿಗೆ ಫ್ರಾಂಚೈಸಿ ಮಾಲೀಕರು ಬಿಗ್ ಶಾಕ್ ನೀಡಿದ್ದಾರೆ. ​

author-image
Ganesh Kerekuli
IPL Auction
Advertisment

ಐಪಿಎಲ್ ಮಿನಿ ಹರಾಜಿನಲ್ಲಿ ಭಾರತೀಯ ಆಟಗಾರರಿಗೆ ಜಾಕ್ ಪಾಟ್ ಹೊಡೆದಿದೆ. ಯಾರೂ ನಿರೀಕ್ಷಿಸದ ಮೊತ್ತದ ಸೇಲ್ ಆದ ಆಟಗಾರರು ಅನ್​ಕ್ಯಾಪ್ಡ್​ ಪ್ಲೇಯರ್ಸ್​ ಲಿಸ್ಟ್​ನಲ್ಲಿ ದಾಖಲೆ ಬರೆದಿದ್ದಾರೆ. ಮತ್ತೊಂದೆಡೆ ಕೋಟಿ ಕೋಟಿ ಮೊತ್ತದ ಭಾರೀ ನಿರೀಕ್ಷೆಯಲ್ಲಿದ್ದ ವಿದೇಶಿ ಆಟಗಾರರಿಗೆ ಫ್ರಾಂಚೈಸಿ ಮಾಲೀಕರು ಬಿಗ್ ಶಾಕ್ ನೀಡಿದ್ದಾರೆ. ​

ಅಬುಧಬಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಭಾರತೀಯ ಆಟಗಾರರು ಕೋಟಿ ಕೋಟಿ ಮೊತ್ತಕ್ಕೆ ಸೇಲ್ ಆಗಿ ದಾಖಲೆ ಬರೆದಿದ್ದಾರೆ. ಈ ಬಾರಿ ಇಂಡಿಯನ್ ಅನ್​ಕ್ಯಾಪ್ಡ್ ಪ್ಲೇಯರ್ಸ್ ಫ್ರಾಂಚೈಸಿ ಮಾಲೀಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ದೇಸಿ ಕ್ರಿಕೆಟ್​​ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿರುವ ಯಂಗ್ ಇಂಡಿಯನ್ಸ್​, ರಾತ್ರೋ ರಾತ್ರಿ ಕರೋಡ್ ಪತಿಗಳಾಗಿದ್ದಾರೆ.​ 
ಭಾರತದ ಕೋಟಿ ವೀರರು..!

ಉತ್ತರ ಪ್ರದೇಶದ ಎಡಗೈ ಸ್ಪಿನ್ನರ್ ಪ್ರಶಾಂತ್ ವೀರ್ ಮತ್ತು ರಾಜಸ್ಥಾನ ತಂಡದ ವಿಕೆಟ್ ಕೀಪರ್ ಬ್ಯಾಟರ್ ಕಾರ್ತಿಕ್ ಶರ್ಮಾ, ತಲಾ 14.20 ಕೋಟಿ ರೂಪಾಯಿಗೆ ಚೆನ್ನೈ ಸೂಪರ್​ಕಿಂಗ್ಸ್​ ಪಾಲಾದ್ರು. ಜಮ್ಮು ಕಾಶ್ಮೀರದ ಎಕ್ಸ್​ಪ್ರೆಸ್ ಬೌಲರ್ ಅಕಿಬ್ ನಬಿ 8.40 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್​ಗೆ ಸೇಲಾದ್ರೆ, ಯು.ಪಿ ವೇಗಿ ತೇಜಸ್ವಿ ಸಿಂಗ್ 3 ಕೋಟಿ ಮೊತ್ತಕ್ಕೆ ಕೊಲ್ಕತ್ತಾ ನೈಟ್​​ರೈಡರ್ಸ್​ ತಂಡಕ್ಕೆ ಸೇರಿಕೊಂಡ್ರು. ಇನ್ನು ರಾಜಸ್ಥಾನದ ವಿಕೆಟ್ ಕೀಪರ್​​ ಬ್ಯಾಟರ್ ಮುಕುಲ್ ಚೌದರಿ 30 ಲಕ್ಷ ಬೇಸ್​ಪ್ರೈಸ್​ನಿಂದ 2.60 ಕೋಟಿ ರೂಪಾಯಿಗೆ ಲಕ್ನೋ ತಂಡಕ್ಕೆ ಬಿಡ್ ಆದ್ರು.

ಇದನ್ನೂ ಓದಿ: ಗ್ರೀನ್, ಪತಿರಣ ಅಷ್ಟೇ ಅಲ್ಲ.. ಹರಾಜಿನಲ್ಲಿ ಕೋಟಿ ಕೋಟಿ ಜೇಬಿಗಿಳಿಸಿದ 5 ಆಟಗಾರರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL brand valuable IPL IPL 2026 auction ipl retention IPL 2026
Advertisment