/newsfirstlive-kannada/media/media_files/2025/12/03/kl-rahul-2-2025-12-03-08-26-43.jpg)
KL Rahul Photograph: (BCCI)
ಟೀಮ್​ ಇಂಡಿಯಾ ಸ್ಟಾರ್​ ಬ್ಯಾಟ್ಸ್​ಮನ್​ ಕೆ.ಎಲ್.ರಾಹುಲ್​ ಕರ್ನಾಟಕ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ವಿಜಯ್​ ಹಜಾರೆ ಟೂರ್ನಿಗೆ ಕರ್ನಾಟಕ ತಂಡ ಪ್ರಕಟವಾಗಿದ್ದು, ಕೆ.ಎಲ್​ ರಾಹುಲ್​ ಸ್ಥಾನ ಪಡೆದುಕೊಂಡಿದ್ದಾರೆ.
6 ವರ್ಷಗಳ ಬಳಿಕ ವಿಜಯ್​ ಹಜಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲು ಕೆ.ಎಲ್​ ರಾಹುಲ್​ ಸಜ್ಜಾಗಿದ್ದಾರೆ. 2019-20ರ ಟೂರ್ನಿಯಲ್ಲಿ ಕೊನೆಯ ಬಾರಿ ರಾಹುಲ್​ ವಿಜಯ್​ ಹಜಾರೆ ಟೂರ್ನಿಯಲ್ಲಿ ಆಡಿದ್ದರು. ಮಯಾಂಕ್​ ಅಗರ್​​ವಾಲ್​ ನಾಯಕನಾಗಿ ಮುಂದುವರೆದಿದ್ದು, ಕರುಣ್​ ನಾಯರ್​ಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ತಂಡದಲ್ಲಿ ಕೆ.ಎಲ್​ ರಾಹುಲ್​, ಪ್ರಸಿದ್ಧ್​ ಕೃಷ್ಣ ಸೇರಿದಂತೆ ಒಟ್ಟು 16 ಆಟಗಾರರಿಗೆ ಸ್ಥಾನ ಕಲ್ಪಿಸಲಾಗಿದೆ. ದೇವದತ್​​ ಪಡಿಕ್ಕಲ್, ವೈಶಾಕ್​ ವಿಜಯ್​ಕುಮಾರ್​, ಅಭಿನವ್​ ಮನೋಹರ್​ ಸ್ಥಾನ ಪಡೆದ ಪ್ರಮುಖ ಆಟಗಾರರಾಗಿದ್ದಾರೆ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ಕ್ಯಾಪ್ಟನ್), ದೇವದತ್ ಪಡಿಕ್ಲ್, ಕರುಣ್ ನಾಯರ್ (ಉಪನಾಯಕ), ಆರ್​.ಸ್ಮರಣ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ, ಶ್ರೇಯಸ್ ಗೋಪಾಲ್, ವೈಶಾಕ್ ವಿಜಯ್, ಮನ್ವಂತ್ ಕುಮಾರ್, ಶ್ರೀಶಾ ಎಸ್​ ಆಚಾರ್, ಅಭಿಲಾಷ್ ಶೆಟ್ಟಿ, ಶರತ್ ಬಿಆರ್, ಹರ್ಷಿಲ್ ಧರ್ಮಣಿ, ಧ್ರುವ್ ಪ್ರಭಾಕರ್, ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ
ಇದನ್ನೂ ಓದಿ: 2 ಪೆಗ್ ವಿಸ್ಕಿ ಕುಡಿದ್ದೀವಿ, 2 ಪೀಸ್ ಮಾಂಸ ತಿಂದಿದ್ದೀವಿ -ಡಿನ್ನರ್ ಮೀಟಿಂಗ್ ಬಗ್ಗೆ ರಾಜಣ್ಣ ಮಾತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us