/newsfirstlive-kannada/media/media_files/2025/12/16/ipl-auction-2026-2025-12-16-08-32-33.jpg)
ಐಪಿಎಲ್ ಹರಾಜು ಅಂದ್ರೆನೇ ಹಾಗೆ. ಅಲ್ಲಿ ಊಹೆಗೂ ನಿಲುಕದ್ದು. ಕೆಲವೊಮ್ಮೆ ಸಾಮಾನ್ಯ ಆಟಗಾರರಿಗೆ ಹೆಚ್ಚು ಬಿಡ್ ಆದ್ರೆ ಸೂಪರ್​ಸ್ಟಾರ್ ಪ್ಲೇಯರ್ಸ್​ಗೆ ಬಿಡ್ ಆಗೋದಿಲ್ಲ. ಇನ್ನು ಅಲ್ಪ ಸ್ವಲ್ಪ ಹೆಸರು ಮಾಡಿರೋ ಆಟಗಾರರು ರಾತ್ರೋ ರಾತ್ರಿ ಕೋಟಿ ವೀರರಾಗಿಬಿಡ್ತಾರೆ. ಇದು ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಸಾಮಾನ್ಯ. ಕೆಲ ಆಟಗಾರರು ಪಡೆದ ಹಣಕ್ಕೆ ಮ್ಯಾಚೇ ಆಗೋದಿಲ್ಲ.
ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿಗಳು ಭಾರೀ ಲೆಕ್ಕಾಚಾರ ಹಾಕಿ ಆಟಗಾರರನ್ನ ಖರೀದಿಸುತ್ತದೆ. ಅಬುಧಾಬಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ ಫ್ರಾಂಚೈಸಿ ಮಾಲೀಕರು ಎಡವಿದ್ದಾರೆ. ಸುಖಾಸುಮ್ಮನೆ ಕೆಲ ಆಟಗಾರರ ಮೇಲೆ ಕೋಟಿ ಕೋಟಿ ಇನ್ವೆಸ್ಟ್ ಮಾಡಿ, ಕೈಸುಟ್ಟುಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಬ್ಯಾಡ್​​ಹ್ಯಾಂಡ್​​ನಲ್ಲಿ ಸಿಕ್ಕಾಪಟ್ಟೆ ಹೋಂವರ್ಕ್​ ಮಾಡಿದ್ದ ಮಾಲೀಕರು ಎಡವಿದ್ದೆಲ್ಲಿ?
/filters:format(webp)/newsfirstlive-kannada/media/media_files/2025/12/16/venkatesh-iyer-3-2025-12-16-16-01-26.jpg)
7 ಕೋಟಿ ಕೊಟ್ಟು ಎಡವಿತಾ ಆರ್​ಸಿಬಿ?
ಕೆಕೆಆರ್​ ತಂಡದಿಂದ ರಿಲೀಸ್ ಆಗಿದ್ದ ಆಲ್​ರೌಂಡರ್ ವೆಂಕಟೇಶ್ ಅಯ್ಯರ್​, ಮಿನಿ ಹರಾಜಿನಲ್ಲಿ 7 ಕೋಟಿ ರೂಪಾಯಿಗೆ, ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಪಾಲಾಗಿದ್ದಾರೆ. ಪ್ರಶ್ನೆ ಏನಪ್ಪಾ ಅಂದ್ರೆ ವೆಂಕಿ ಆರ್​ಸಿಬಿ ಪ್ಲೇಯಿಂಗ್​ ಇಲೆವೆನ್​ನಲ್ಲಿ ಯಾವ ಸ್ಲಾಟ್​​​ಗೆ ಫಿಟ್ ಆಗ್ತಾರೆ ಅನ್ನೋದು. ಐಪಿಎಲ್​ನಲ್ಲಂತೂ ಅಯ್ಯರ್ ಬೌಲಿಂಗ್​​​ ಮಾಡೋದೇ ತೀರ ಅಪರೂಪ. ಅಂತದ್ರಲ್ಲಿ ವೆಂಕಿಗೆ ಕೋಟಿ ಕೋಟಿ ಕೊಟ್ಟಿದ್ದು ಎಷ್ಟು ಸರಿ..? ಪ್ರಸಕ್ತ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲೂ ವೆಂಕಿ ಪರ್ಫಾಮೆನ್ಸ್ ಅಷ್ಟಕಷ್ಟೇ. ಈ ವರ್ಷ ವೆಂಕಿ ಹಿಟ್​​ಗಿಂತ ಫ್ಲಾಪ್ ಆಗಿದ್ದೇ ಜಾಸ್ತಿ. ಆರ್​ಸಿಬಿಯನ್ನ ದೇವರೇ ಕಾಪಾಡಬೇಕು.
ಪತಿರಣಗೆ 8 ಕೋಟಿ ಸಿಕ್ಕಿದ್ದೇ ಲಕ್
ಲಂಕಾದ ಯುವ ವೇಗಿ ಮಥೀಶ ಪತಿರಣ ಸದ್ಯ ಇಂಜುರಿಯಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಪತಿರಣ ಇಂಜುರಿ ಕಾರಣದಿಂದಲೇ ಚೆನ್ನೈ ಸೂಪರ್​ಕಿಂಗ್ಸ್​ ಯುವ ವೇಗಿಯನ್ನ ತಂಡದಿಂದ ರಿಲೀಸ್ ಮಾಡಿದ್ದು. ಕಳೆದ ಐಪಿಎಲ್​​ನಲ್ಲಿ ಪತಿರಣ ಸಿಕ್ಕಾಪಟ್ಟೆ ಎಕ್ಸ್​ಪೆನ್ಸಿವ್ ಬೌಲರ್ ಆಗಿದ್ರು. ಪತಿರಣ ಎಕಾನಮಿ ರೇಟ್ 10 ಇತ್ತು. ಪ್ರಸಕ್ತ ವರ್ಷ ಪತಿರಣ ಲಂಕಾ ಪರ ಆಡಿದ್ದೇ ಕೇವಲ ಎರಡೇ ಎರಡು ಪಂದ್ಯಗಳು ಮಾತ್ರ. ಒಂದೇ ಒಂದು ವಿಕೆಟ್ ಪಿಕ್ ಮಾಡಿದ್ರೂ ಌವರೇಜ್ ಮತ್ತು ಎಕಾನಮಿ ರೇಟ್ ಗಗನಕ್ಕೇರಿತ್ತು.
ಇದನ್ನೂ ಓದಿ: ಒಂದೇ ಒಂದು ವಿಭಾಗದಲ್ಲಿ ಎಡವಿದ RCB.. ಹರಾಜಿನಲ್ಲಿ ತಪ್ಪು ಮಾಡಿತಾ..?
/filters:format(webp)/newsfirstlive-kannada/media/post_attachments/wp-content/uploads/2023/09/PATIRANA.jpg)
28 ಕೋಟಿ ನೀರಿನಲ್ಲಿ ಹೋಮ?
ಚೆನ್ನೈ ಸೂಪರ್​ಕಿಂಗ್ಸ್​ ಫ್ರಾಂಚೈಸಿ 43.40 ಕೋಟಿಯೊಂದಿಗೆ ಐಪಿಎಲ್ ಮಿನಿ ಹರಾಜಿಗೆ ಎಂಟ್ರಿ ನೀಡಿತ್ತು. ಆದ್ರೆ ಬಿಡ್ಡಿಂಗ್​ನಲ್ಲಿ ಕೂತಿದ್ದ ಸಿಎಸ್​​ಕೆ ಫ್ರಾಂಚೈಸಿ ತಲೆಯಲ್ಲಿ ಏನು ಪ್ಲಾನ್ ಇತ್ತೋ ಗೊತ್ತಿಲ್ಲ. ಇಬ್ಬರು ಅನ್​ಕ್ಯಾಪ್ಡ್​ ಆಟಗಾರರಿಗೆ ಬರೋಬ್ಬರಿ 28 ಕೋಟಿ ರೂಪಾಯಿ ಖರ್ಚಯ ಮಾಡಿ, ಆಶ್ಚರ್ಯ ಮೂಡಿಸಿದ್ರು. ಅವರು ಯಾಕೆ ಅಷ್ಟು ಖರ್ಚು ಮಾಡಿದ್ರು ಅನ್ನೋದು ಗೊತ್ತಿಲ್ಲ. ಆದ್ರೆ 28 ಕೋಟಿ ಪಡೆದ ಇಬ್ಬರು ಆಟಗಾರರು, ಪ್ಲೇಯಿಂಗ್ ಇಲೆವೆನ್​ನಲ್ಲಿ ಆಡೋದೇ ಅನುಮಾನ. ಇಂಪ್ಯಾಕ್ಟ್ ಪ್ಲೇಯರ್​​ ಆಗೋದು, ಅಸಾಧ್ಯ..!
8.6 ಕೋಟಿ ನೀಡ್ತಾ ಲಕ್ನೋ ಸೂಪರ್​ಜೈಂಟ್ಸ್​?
ಲಕ್ನೋ ಸೂಪರ್​ಜೈಂಟ್ಸ್​ ಮಾಲೀಕ ಸಂಜೀವ್ ಗೊಯೆಂಕಾ ಮನಸು ತುಂಬಾ ದೊಡ್ಡದ್ದು. ಯಾಕಂದ್ರೆ ಕೇವಲ ನಾಲ್ಕೇ ನಾಲ್ಕು ಐಪಿಎಲ್ ಪಂದ್ಯಗಳನ್ನ ಆಡೋ ಆಟಗಾರ ಆಸ್ಟ್ರೇಲಿಯಾದ ಜೋಷ್ ಇಂಗ್ಲೀಸ್​​ಗೆ, 8.6 ಕೋಟಿ ರೂಪಾಯಿ ಕೊಟ್ಟು ಖರಿದಿಸಿದ್ದಾರೆ. ಅಂದ್ರೆ ಇಂಗ್ಲೀಸ್ ಪ್ರತಿ ಪಂದ್ಯಕ್ಕೆ 2.15 ಕೋಟಿ ರೂಪಾಯಿ. ಎಸ್​ಎಸ್​ಜಿ ಮಾಲೀಕರ ನಡೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸಂಜೀವ್ ಗೊಯೆಂಕಾ ಲೆಕ್ಕಾಚಾರ ಏನು ಅನ್ನೋದು ಮಾತ್ರ ಸದ್ಯ ಕ್ರಿಕೆಟ್ ಅಭಿಮಾನಿಗಳನ್ನ ಕಾಡ್ತಿದೆ.
ಭರ್ಜರಿ ಜಾಕ್​ಪಾಟ್..?
ಇಂಗ್ಲೆಂಡ್​ ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್​​​​​​​ಗೆ ಭರ್ಜರಿ ಜ್ಯಾಕ್​ಪಾಟ್​ ಹೊಡೆದಿದೆ. ಸನ್​ರೈಸರ್ಸ್​ ಹೈದ್ರಾಬಾದ್​ ಫ್ರಾಂಚೈಸಿ ಲಿವಿಂಗ್​ಸ್ಟೋನ್​ರನ್ನ 13 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ. ಆದ್ರೆ ಲಿವಿಂಗ್​ಸ್ಟೋನ್ ಎಸ್​ಆರ್​ಎಚ್ ತಂಡಕ್ಕೆ ಫಿಟ್ ಆಗ್ತಾರಾ..? ನಾಲ್ಕನೇ ಫಾರಿನ್ ಪ್ಲೇಯರ್ ಆಗಿ ಕಣಕ್ಕಿಳಿದ್ರೂ, ಫಿನಿಷರ್ ಆಗಿ ಆಡಬೇಕಷ್ಟೇ..! ಅದು ಸಾಧ್ಯಾನಾ..? ಅಸಾಧ್ಯಾನಾ ಅನ್ನೋದು ಗೊತ್ತಿಲ್ಲ.
ಇದನ್ನೂ ಓದಿ: ಕರ್ನಾಟಕ ತಂಡಕ್ಕೆ ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ ಕಂಬ್ಯಾಕ್..!
/filters:format(webp)/newsfirstlive-kannada/media/media_files/2025/12/16/liam-livingstone-2025-12-16-15-43-54.jpg)
ಬಾಂಗ್ಲಾದ ಎಡಗೈ ವೇಗಿ ಮುಸ್ತಾಫಿಝುರ್ ರಹಮಾನ್ 9.20 ಕೋಟಿಗೆ, ಕೆಕೆಆರ್​ ಪಾಲಾಗಿದ್ದಾರೆ. ಕೊಲ್ಕತ್ತಾ ಯಾವ ಲೆಕ್ಕಾಚಾರದಲ್ಲಿ ಫಿಝ್​ರನ್ನ ಖರೀದಿಸಿತ್ತೋ ಗೊತ್ತಿಲ್ಲ. ಆದ್ರೆ ಫಿಝ್​​, ಐಪಿಎಲ್​​ ವೇಳೆ ನ್ಯಾಷನಲ್ ಡ್ಯೂಟಿಯಲ್ಲಿ ಬ್ಯುಸಿಯಾಗ್ತಾರೆ. ಬಾಂಗ್ಲಾ ಕ್ರಿಕೆಟ್ ಬೋರ್ಡ್ ಸಹ ಫಿಝ್​​ಗೆ, ಎಲ್ಲಾ ಐಪಿಎಲ್​​​​​ ಪಂದ್ಯಗಳನ್ನ ಆಡಲು NOC ಕೊಡೋದು ಅನುಮಾನ ಎನ್ನಲಾಗ್ತಿದೆ.
ಇಂಡಿಯನ್ ಪೈಸಾ ಲೀಗ್ ಐಪಿಎಲ್​ನಲ್ಲಿ ಹೀರೋಗಳು ಝೀರೋ ಆಗ್ತಾರೆ. ಝೀರೋಗಳು ಹೀರೋ ಆಗ್ತಾರೆ ಅನ್ನೋದಕ್ಕೆ, ಈ ಮಿನಿ ಆಕ್ಷನ್​​ನೇ ಅತ್ಯುತ್ತಮ ಉದಾಹರಣೆ.
ಇದನ್ನೂ ಓದಿ:ಬದಲಾದ ಧೋನಿ ಗೇಮ್​ ಪ್ಲಾನ್.. ಹರಾಜಿನಲ್ಲಿ ಬುದ್ಧಿವಂತಿಕೆ ತೋರಿಸಿದ CSK..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us