ಬರೀ 16 ಎಸೆತದಲ್ಲಿ ಅರ್ಧ ಶತಕ ಬಾರಿಸಿದ ಪಾಂಡ್ಯ.. ತಿಲಕ್ ಆಟ ಹೇಗಿತ್ತು..?

ಅಹ್ಮದಾಬಾದ್​ ನಮೋ ಮೈದಾನದಲ್ಲಿ ನಿನ್ನೆ ಬೌಂಡರಿಗಳ ಬೋರ್ಗರೆತ, ಸಿಕ್ಸರ್​ಗಳ ಸುರಿಮಳೆಯೇ ಸುರಿಯಿತು. ಸೌತ್​ ಆಫ್ರಿಕಾ ಬೌಲರ್ಸ್​​ನ ಅಟ್ಟಾಡಿಸಿದ ಹಾರ್ದಿಕ್​ ಪಾಂಡ್ಯ-ತಿಲಕ್​ ವರ್ಮಾ ರನ್​ಹೊಳೆ ಹರಿಸಿದ್ರು. ಇಂಡಿಯನ್​ ಟೈಗರ್ಸ್​ ಘರ್ಜನೆಗೆ ಸೌತ್​ ಆಫ್ರಿಕಾ ಬೌಲರ್ಸ್​ ಸ್ಟನ್​ ಆದ್ರು.

author-image
Ganesh Kerekuli
Hardik Pandya (12)

Photograph: (ಬಿಸಿಸಿಐ)

Advertisment
  • ನಮೋ ಮೈದಾನದಲ್ಲಿ ಬೌಂಡರಿ, ಸಿಕ್ಸರ್ ಸುರಿಮಳೆ
  • ಅಬ್ಬರದ ಆರಂಭ ನೀಡಿದ ಅಭಿಷೇಕ್-ಸಂಜು
  • ಹಾಫ್​​ ಸೆಂಚುರಿ ಸಿಡಿಸಿ ತಿಲಕ್​ ವರ್ಮಾ ಮಿಂಚು

ಅಹ್ಮದಾಬಾದ್​ ನಮೋ ಮೈದಾನದಲ್ಲಿ ನಿನ್ನೆ ಬೌಂಡರಿಗಳ ಬೋರ್ಗರೆತ, ಸಿಕ್ಸರ್​ಗಳ ಸುರಿಮಳೆಯೇ ಸುರಿಯಿತು. ಸೌತ್​ ಆಫ್ರಿಕಾ ಬೌಲರ್ಸ್​​ನ ಅಟ್ಟಾಡಿಸಿದ ಹಾರ್ದಿಕ್​ ಪಾಂಡ್ಯ-ತಿಲಕ್​ ವರ್ಮಾ ರನ್​ಹೊಳೆ ಹರಿಸಿದ್ರು. ಇಂಡಿಯನ್​ ಟೈಗರ್ಸ್​ ಘರ್ಜನೆಗೆ ಸೌತ್​ ಆಫ್ರಿಕಾ ಬೌಲರ್ಸ್​ ಸ್ಟನ್​ ಆದ್ರು. ಟೀಮ್​ ಇಂಡಿಯಾದ ಬ್ಯಾಟಿಂಗ್​ ದರ್ಬಾರ್​ ಹೇಗಿತ್ತು? 

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ ಭರ್ಜರಿ ಓಪನಿಂಗ್​ ಪಡೆದುಕೊಳ್ತು. ಅಭಿಷೇಕ್​ ಶರ್ಮಾ, ಸಂಜು ಸ್ಯಾಮ್ಸನ್​ ಪವರ್​ ಪ್ಲೇನಲ್ಲಿ ಪವರ್​ ಫುಲ್​ ಬ್ಯಾಟಿಂಗ್​ ನಡೆಸಿದ್ರು. 
ಎಂದಿನಂತೆ ಅಗ್ರೆಸ್ಸಿವ್​ ಇಂಟೆಂಟ್​ನಲ್ಲಿ ಬ್ಯಾಟ್​ ಬೀಸಿದ ಅಭಿಷೇಕ್​ ಶರ್ಮಾ ಕ್ರಿಸ್​​ನಲ್ಲಿದ್ದಷ್ಟು ಹೊತ್ತು ಘರ್ಜಿಸಿದ್ರು. 161ರ ಸ್ಟ್ರೈಕ್​​ರೇಟ್​​ನಲ್ಲಿ ಬ್ಯಾಟ್​ ಬೀಸಿದ ಅಭಿಷೇಕ್,​ 1 ಸಿಕ್ಸರ್​, 6 ಬೌಂಡರಿ ಸಿಡಿಸಿದ್ರು. 21 ಎಸೆತಗಳಲ್ಲಿ 34 ರನ್​ಗಳಿಸಿದ್ರು. 

ಇದನ್ನೂ ಓದಿ: T20 ವಿಶ್ವಕಪ್​ಗೆ ಇವತ್ತು ತಂಡ ಪ್ರಕಟ.. 15 ಸದಸ್ಯರ ತಂಡದಲ್ಲಿ ಯಾರಿಗೆಲ್ಲ ಸ್ಥಾನ?

Hardik pandya (11)

34 ರನ್​ಗಳಿಸಿ ಅಭಿಷೇಕ್​ ನಿರ್ಗಮಿಸಿದ್ರೆ, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ತಿಲಕ್​ ವರ್ಮಾ ಮೊದಲ ಎಸೆತದಲ್ಲೇ ಬೌಂಡರಿ ಚಚ್ಚಿ ಅಕೌಂಟ್​ ಓಪನ್​ ಮಾಡಿದ್ರು. ಗಿಲ್​ ಇಂಜುರಿಯಿಂದಾಗಿ ಅವಕಾಶ ಪಡೆದ ಸಂಜು ಸ್ಯಾಮ್ಸನ್ ನಮೋ ಮೈದಾನದಲ್ಲಿ​ ಡಿಸೆಂಟ್​ ಇನ್ನಿಂಗ್ಸ್​ ಕಟ್ಟಿದ್ರು. 4 ಬೌಂಡರಿ, 2 ಸಿಕ್ಸರ್​ ಸಿಡಿಸಿದ ಸಂಜು 22 ಎಸೆತಗಳಲ್ಲಿ 37 ರನ್​ಗಳಿಸಿದ್ರು. 

37 ರನ್​ಗಳಿಸಿದ್ದ ವೇಳೆ ಸಂಜು ಸ್ಯಾಮ್ಸನ್​, ಜಾರ್ಜ್​ ಲಿಂಡೆಯ ಸ್ಪಿನ್​ ಮ್ಯಾಜಿಕ್​ಗೆ ಕ್ಲೀನ್​ಬೋಲ್ಡ್​ ಆದ್ರು. ಬಳಿಕ ಕಣಕ್ಕಿಳಿದ ನಾಯಕ ಸೂರ್ಯಕುಮಾರ್​ ಯಾದವ್ ಮತ್ತೊಂದು ಫ್ಲಾಪ್ ಶೋ ನೀಡಿದ್ರು. ನಮೋ ಅಂಗಳದಲ್ಲಿ ಪರದಾಡಿದ ಸೂರ್ಯ 7 ಎಸೆತ ಎದುರಿಸಿ ಕೇವಲ 5 ರನ್​ಗಳಿಸಿ ನಿರ್ಗಮಿಸಿದ್ರು. 

ಇದನ್ನೂ ಓದಿ: ಟೀಮ್​ ಇಂಡಿಯಾಗೆ 30 ರನ್​ಗಳ ಗೆಲುವು.. ಟಿ-20 ಸರಣಿ ಗೆದ್ದ ಸೂರ್ಯ ಪಡೆ..!

Hardik pandya (10)

4ನೇ ವಿಕೆಟ್​​ಗೆ ಕ್ರಿಸ್​​ನಲ್ಲಿ ಜೊತೆಯಾದ ತಿಲಕ್​ ವರ್ಮಾ - ಹಾರ್ದಿಕ್​ ಪಾಂಡ್ಯ ಸೌತ್​ ಆಫ್ರಿಕಾ ಬೌಲರ್​ಗಳನ್ನ ಬೆಂಡೆತ್ತಿದ್ರು. ಮೈದಾನದ ಉದ್ದಗಲಕ್ಕೂ ಚೆಂಡಿನ ದರ್ಶನ ಮಾಡಿಸಿದ ತಿಲಕ್​-ಹಾರ್ದಿಕ್​ ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಸುರಿಸಿದ್ರು. ಜಾರ್ಜ್​ ಲಿಂಡೆ ಎಸೆದ 14ನೇ ಓವರ್​ನಲ್ಲಂತೂ 27 ರನ್​ ಚಚ್ಚಿದ್ರು. 

ಸಾಲಿಡ್​​ ಫಾರ್ಮ್​ ಮುಂದುವರೆಸಿದ ತಿಲಕ್​ ವರ್ಮಾ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ರು. ಲುಂಗಿ ಎನ್​​ಗಿಡಿ ಎಸೆದ 15ನೇ ಓವರ್​ನ 4ನೇ ಎಸೆತವನ್ನ ಬೌಂಡರಿ ಬಾರಿಸಿದ ತಿಲಕ್​ ವರ್ಮಾ ಟಿ20 ಕರಿಯರ್​ನ 6ನೇ ಹಾಫ್​ ಸೆಂಚುರಿ ಪೂರೈಸಿದ್ರು. 

ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್​ ಸಿಡಿಸಿದ ಹಾರ್ದಿಕ್​ ಪಾಂಡ್ಯ ಬೌಂಡರಿ-ಸಿಕ್ಸರ್​ಗಳಲ್ಲೇ ರನ್​ ಡೀಲ್​ ಮಾಡಿದ್ರು. ಹಾರ್ದಿಕ್​ ರಣಾರ್ಭಟಕ್ಕೆ ಆಫ್ರಿಕನ್​ ಬೌಲರ್ಸ್​ ಬೆಚ್ಚಿ ಬಿದ್ರೆ, ಅಭಿಮಾನಿಗಳು ಹುಚ್ಚೆದ್ದು ಕುಣಿದ್ರು. ಲುಂಗಿ ಎನ್​ ಗಿಡಿ, ಕಾರ್ಬಿನ್ ಬಾಷ್​, ಜಾರ್ಜ್​ ಲಿಂಡೆ.. ಯಾವ ಬೌಲರ್​ಗೂ ಬಿಡಲಿಲ್ಲ. ಸೌತ್​ ಆಫ್ರಿಕಾ ಬೌಲಿಂಗ್​ ದಾಳಿಯನ್ನ ಹಾರ್ದಿಕ್​ ಧೂಳಿಪಟ ಮಾಡಿದ್ರು. ಜಸ್ಟ್​ 16 ಎಸೆತಕ್ಕೆ ಹಾಫ್​​ ಸೆಂಚುರಿ ಸಿಡಿಸಿ ದಾಖಲೆ ಬರೆದ್ರು. ಮೈದಾನದಲ್ಲಿದ ಗೆಳತಿಗೆ ಕಿಸ್​ ನೀಡಿ ಸಂಭ್ರಮಿಸಿದ್ರು. 

ಇದನ್ನೂ ಓದಿ:ಬೆಟ್ಟಿಂಗ್ ಆ್ಯಪ್ ಜಾಹೀರಾತಿನಲ್ಲಿ ನಟನೆ : ಕ್ರಿಕೆಟಿಗರು, ಸೆಲೆಬ್ರೆಟಿಗಳ ಆಸ್ತಿಪಾಸ್ತಿ ಜಫ್ತಿ ಮಾಡಿದ ಇ.ಡಿ.

ಡೆತ್​ ಓವರ್​ಗಳಲ್ಲೂ ಬೌಲರ್​ಗಳನ್ನ ಅಟ್ಟಾಡಿಸಿದ ಹಾರ್ದಿಕ್​ - ತಿಲಕ್​ ರನ್​ ಹೊಳೆ ಹರಿಸಿದ್ರು. 4ನೇ ವಿಕೆಟ್​ ಶತಕದ ಜೊತೆಯಾಟವಾಡಿದ ಈ ಜೋಡಿ 44 ಎಸೆತಗಳಲ್ಲಿ 105 ರನ್​ಗಳ ಕಾಣಿಕೆ ನೀಡಿತು. 63 ರನ್​ಗಳಿಸಿ ಹಾರ್ದಿಕ್​ ಪಾಂಡ್ಯ ಔಟಾದ್ರೆ, ತಿಲಕ್​ ವರ್ಮಾ 73 ರನ್​ಗಳಿಸಿದ್ದಾಗ ರನೌಟ್​ ಆದ್ರು. ಕ್ರಿಸ್​ಗೆ ಬರ್ತಿದ್ದಂತೆ ಸಿಕ್ಸರ್​ ಸಿಡಿಸಿದ ಶಿವಂ ದುಬೆ ಎದುರಿಸಿದ 3 ಎಸೆತಗಳಲ್ಲೇ 10 ರನ್​ಗಳಿಸಿದ್ರು. ಅಂತಿಮವಾಗಿ 20 ಓವರ್​ಗಳ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 231 ರನ್​ಗಳಿಸಿತು. 

ಇದನ್ನೂ ಓದಿ: ಜೆಫ್ರಿ ಎಫಿಸ್ಟೀನ್ ಲೈಂಗಿಕ ಹಗರಣದ 68 ಪೋಟೋ ಬಿಡುಗಡೆ : ಬಿಲ್ ಗೇಟ್ಸ್, ನೋಮ್ ಚೋಸ್ಕಿ ಪೋಟೋ ಬಿಡುಗಡೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ind vs SA T20I India vs South Africa
Advertisment