/newsfirstlive-kannada/media/media_files/2025/12/20/team-india-15-2025-12-20-09-04-31.jpg)
ಟೀಮ್ ಇಂಡಿಯಾ ಆಟಗಾರರಿಗೆ ಇವತ್ತು 'D' ಡೇ. ಇಂದು ಮಧ್ಯಾಹ್ನ ಮುಂಬೈನಲ್ಲಿ ಸಭೆ ಸೇರಲಿರುವ ಅಜೀತ್ ಅಗರ್​ಕರ್​​​​​​​ ನೇತೃತ್ವದ ಆಯ್ಕೆ ಸಮಿತಿ ಟಿ-20 ವಿಶ್ವಕಪ್​​ಗೆ ತಂಡ ಪ್ರಕಟಿಸಲಿದೆ. 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ ನಡೆಯುತ್ತಿದೆ. ಆಯ್ಕೆಗಾರರು ಯಾರಿಗೆ ಮಣೆ ಹಾಕ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಟೀಮ್ ಇಂಡಿಯಾ ಆಯ್ಕೆಗಾರರಿಗೆ ಇವತ್ತು ಟಫ್ ಟಾಸ್ಕ್. ಟಿ-20 ವಿಶ್ವಕಪ್​ಗೆ ಬಲಿಷ್ಟ ತಂಡ ಆಯ್ಕೆ ಮಾಡೋದೇ ಬಿಗ್ ಚಾಲೆಂಜ್. 15 ಸದಸ್ಯರ ತಂಡದಲ್ಲಿ ಒಂದೇ ಒಂದು ಸಣ್ಣ ತಪ್ಪು ಮಾಡಿದ್ರೂ ಆಯ್ಕೆ ಸಮಿತಿ ಟೀಕೆಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಇಂದು ಅಜಿತ್ ಅಗರ್​​ಕರ್ ಟೀಮ್, ಲೆಕ್ಕಚಾರ ಹಾಕಿ ವಿಶ್ವಕಪ್ ತಂಡವನ್ನ ಪಿಕ್ ಮಾಡಬೇಕಿದೆ. ನ್ಯೂಸ್​ಫಸ್ಟ್​ ಸ್ಪೋರ್ಟ್ಸ್​ಬ್ಯೂರೋ ಆಯ್ಕೆ ಮಾಡಿರುವ 15 ಸದಸ್ಯರ ತಂಡ ಹೀಗಿದೆ..
ಇದನ್ನೂ ಓದಿ: ಟೀಮ್​ ಇಂಡಿಯಾಗೆ 30 ರನ್​ಗಳ ಗೆಲುವು.. ಟಿ-20 ಸರಣಿ ಗೆದ್ದ ಸೂರ್ಯ ಪಡೆ..!
ಇನ್ನಿಂಗ್ಸ್ ಆರಂಭಿಸೋದು ಯಾರು..?
ಎಂದಿನಂತೆ ಟಿ-20 ವಿಶ್ವಕಪ್​ನಲ್ಲಿ ಲೆಫ್ಟ್-ರೈಟ್ ಕಾಂಬಿನೇಷನ್​​​​​​​​ ಇರಲಿದೆ. ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ವಿಶ್ವಕಪ್​​ನಲ್ಲಿ ಇನ್ನಿಂಗ್ಸ್​ ಆರಂಭಿಸೋದು ಫಿಕ್ಸ್.
ಇವರೇ ಟಾಪ್ ಆರ್ಡರ್ ಬ್ಯಾಟರ್ಸ್?
ಟಾಪ್ ಌಂಡ್ ಮಿಡಲ್ ಆರ್ಡರ್​ನಲ್ಲಿ ಎಡಗೈ ಬ್ಯಾಟರ್ ತಿಲಕ್ ವರ್ಮಾ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ವಿಕೆಟ್ ಕೀಪರ್ಸ್ ಯಾಱರು..?
ಸಂಜು ಸ್ಯಾಮ್ಸನ್ ಫಸ್ಟ್ ಚಾಯ್ಸ್​ ವಿಕೆಟ್ ಕೀಪರ್ ಬ್ಯಾಟರ್. ಆದ್ರೆ ಸ್ಯಾಮ್ಸನ್​​ಗೆ, ಜಿತೇಶ್ ಶರ್ಮಾ ಬ್ಯಾಕ್ ಅಪ್ ಕೀಪರ್ ಬ್ಯಾಟ್ಸ್​ಮನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಫಾಸ್ಟ್ ಬೌಲಿಂಗ್ ಆಲ್​ರೌಂಡರ್ಸ್..!
ಅನುಭವಿ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಬಿಗ್ ಹಿಟ್ಟಿಂಗ್ ಆಲ್​ರೌಂಡರ್ ಶಿವಂ ದುಬೆ ಇಬ್ಬರೂ ಒಂದೇ ಬಾರಿ ತಂಡದಲ್ಲಿ ಸ್ಥಾನ ಪಡೆದ್ರೂ ಆಶ್ಚರ್ಯವಿಲ್ಲ.
/filters:format(webp)/newsfirstlive-kannada/media/media_files/2025/12/20/gambhir-ajit-2025-12-20-09-07-33.jpg)
ಸ್ಪಿನ್ ಆಲ್​ರೌಂಡರ್ಸ್ ಯಾರು..?​
ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್​ಗೆ, ಸ್ಪಿನ್ ಆಲ್​ರೌಂಡರ್ ಖೋಟಾದಲ್ಲಿ ಸ್ಥಾನ ಖಚಿತ.
ಸ್ಪೆಷಲಿಸ್ಟ್ ಸ್ಪಿನ್ನರ್ಸ್​ ಇವರೇನಾ..?
ಸ್ಪೆಷಲಿಸ್ಟ್ ಸ್ಪಿನ್ನರ್​ಗಳಾಗಿ ಮಿಸ್ತ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ಚೈನಾಮೆನ್ ಸ್ಪಿನ್ನರ್ ಕುಲ್ದೀಪ್ ಯಾದವ್ 15ರ ಬಳಗದಲ್ಲಿ ಇರೋದು ಕನ್ಫರ್ಮ್.
ಫಾಸ್ಟ್ ಬೌಲಿಂಗ್ ಅಟ್ಯಾಕ್ ಇದೇ
ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ, ಎಡಗೈ ವೇಗಿ ಆರ್ಷ್​ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಈ ತ್ರಿಮೂರ್ತಿಗಳು ಫಾಸ್ಟ್ ಬೌಲರ್​ಗಳಾಗಿ ಕಣಕ್ಕಿಳಿಯಲಿದ್ದಾರೆ.
ಇವರಷ್ಟೇ ಅಲ್ಲ, ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಹೆಸರನ್ನೂ ತಂಡದ ಆಯ್ಕೆ ವೇಳೆ ಚರ್ಚಿಸಲಾಗುತ್ತದೆ.! ಒಟ್ನಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿ ಆಡಿದ ತಂಡವೇ ಹೆಚ್ಚು ಕಡಿಮೆ ನ್ಯೂಜಿಲೆಂಡ್ ಟಿ-20 ಸರಣಿ ಮತ್ತು ಟಿ-20 ವಿಶ್ವಕಪ್ ಆಡಲಿದೆ. ಒಂದೆರೆಡು ಬದಲಾವಣೆ ಬಿಟ್ರೆ ಉಳಿದೆಲ್ಲಾ ಆಟಗಾರರು ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ:ಬೆಟ್ಟಿಂಗ್ ಆ್ಯಪ್ ಜಾಹೀರಾತಿನಲ್ಲಿ ನಟನೆ : ಕ್ರಿಕೆಟಿಗರು, ಸೆಲೆಬ್ರೆಟಿಗಳ ಆಸ್ತಿಪಾಸ್ತಿ ಜಫ್ತಿ ಮಾಡಿದ ಇ.ಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us