ChatGPT ದೇಶಕ್ಕೆ ಅಪಾಯ! ಬಳಸದಂತೆ ತನ್ನ ನೌಕರರಿಗೆ ಕೇಂದ್ರ ಸರ್ಕಾರ ಆದೇಶ ನೀಡಿದ್ದೇಕೆ..?

ಕೇಂದ್ರ ಸರ್ಕಾರವು ಕೃತಕ ಬುದ್ಧಿಮತ್ತೆ ಪರಿಕರಗಳ (AI) ಕುರಿತು ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರು ಅವುಗಳನ್ನು ಬಳಸದಂತೆ ಎಚ್ಚರಿಕೆ ನೀಡಿದೆ.ಯಾಕೆ ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ.

author-image
Ganesh Kerekuli
ChatGPT
Advertisment

ಕೇಂದ್ರ ಸರ್ಕಾರವು ಕೃತಕ ಬುದ್ಧಿಮತ್ತೆ ಪರಿಕರಗಳ (AI) ಕುರಿತು ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರು ಅವುಗಳನ್ನು ಬಳಸದಂತೆ ಎಚ್ಚರಿಕೆ ನೀಡಿದೆ. 

ಚಾಟ್ ಜಿಪಿಟಿಯಂತಹ AI ಪ್ಲಾಟ್‌ಫಾರ್ಮ್‌ ಬಳಸುವುದು ತುಂಬಾ ಅಪಾಯಕಾರಿ ಮತ್ತು ಮಾಹಿತಿ ಸೋರಿಕೆಯಾಗುವ ಅಪಾಯವಿದೆ ಎಂದಿದೆ. ಯಾವುದೇ ಕೇಂದ್ರ ಸರ್ಕಾರಿ ಉದ್ಯೋಗಿ AI ಪ್ಲಾಟ್‌ಫಾರ್ಮ್‌ಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಮಾಹಿತಿಯನ್ನು ಹಂಚಿಕೊಂಡರೆ ಇತರ ದೇಶಗಳು ಅದನ್ನು ತಿಳಿದುಕೊಳ್ಳುತ್ತವೆ. ಇದರಿಂದ ದೇಶಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದಿದೆ. 

ಇದನ್ನೂ ಓದಿ:2026ರಲ್ಲಿ ಏನಾದರೂ ಬೆದರಿಕೆ ಇದೆಯೇ? ಬಾಬಾ ವಂಗಾ ಅಚ್ಚರಿಯ ಭವಿಷ್ಯವಾಣಿಗಳು..!

ಮಾಹಿತಿ ಹಂಚಿಕೊಳ್ಳೋದ್ರಿಂದ ದೇಶದಲ್ಲಿ ಏನಾಗುತ್ತದೆ..? ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ? ಯಾವ ಕೆಲಸವನ್ನು ಕೈಗೊಳ್ಳಲಾಗುತ್ತದೆ? AI ಕಂಪನಿಗಳು ನೆರೆಯ ದೇಶಗಳೊಂದಿಗೆ ಹಂಚಿಕೊಳ್ಳುವಂತಹ ಪ್ರಮುಖ ಮಾಹಿತಿ ಸೋರಿಕೆ ಆಗುವ ಅಪಾಯವಿದೆ. ಇದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗ್ತಿದೆ. ಸರ್ಕಾರಿ ನೌಕರರು ಮಾಹಿತಿಗಾಗಿ ಅವುಗಳನ್ನು ಬಳಸದಿರುವುದು ಉತ್ತಮ ಎಂದು ಕೇಂದ್ರ ಆದೇಶಗಳಲ್ಲಿ ಸ್ಪಷ್ಟಪಡಿಸಿದೆ.

AI ಪರಿಕರಗಳು ನಮ್ಮ ವೈಯಕ್ತಿಕ ಮಾಹಿತಿಯನ್ನೂ ಸೋರಿಕೆ ಮಾಡುವ ಸಾಧ್ಯತೆ ಇದೆ. ಏಕೆಂದರೆ ನಾವು ಯಾವುದೇ ಮಾಹಿತಿಗಾಗಿ ವೈಯಕ್ತಿಕ ವಿವರಗಳನ್ನು ಒದಗಿಸಿದಾಗ, ಭವಿಷ್ಯದಲ್ಲಿ ಉತ್ತಮ ಮಾಹಿತಿ ಒದಗಿಸಲು AI ಪರಿಕರಗಳು ಅವುಗಳನ್ನು ತಮ್ಮ ಡೇಟಾಬೇಸ್‌ನಲ್ಲಿ ಸಂಗ್ರಹಿಸುತ್ತವೆ. ಇದು ವೈಯಕ್ತಿಕ ವಿಚಾರಗಳಿಗೆ ಅಪಾಯ ತರುತ್ತದೆ. ಅದಕ್ಕಾಗಿಯೇ ಸೈಬರ್ ತಜ್ಞರು AI ಪರಿಕರಗಳಿಗೆ ವೈಯಕ್ತಿಕ ವಿವರಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಅಪ್‌ಲೋಡ್ ಮಾಡದಿರುವುದು ಉತ್ತಮ ಎಂದಿದೆ.

ಇದನ್ನೂ ಓದಿ: iPhone 15 ಕೇವಲ 36,000 ರೂಪಾಯಿಗೆ! ಯಾವಾಗ ಮತ್ತು ಎಲ್ಲಿ ಖರೀದಿಸಬಹುದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

AI tools ChatGPT
Advertisment