/newsfirstlive-kannada/media/media_files/2025/10/08/dulkar-salman-2025-10-08-12-16-08.jpg)
ನವದೆಹಲಿ: ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ ಮನೆಯೂ ಸೇರಿ, ಕೇರಳ ಹಾಗು ತಮಿಳುನಾಡಿನ 17 ಕಡೆಗಳಲ್ಲಿ ಇಂದು ಬೆಳಗ್ಗೆ ಇಡಿ ದಾಳಿ ನಡೆಸಿದೆ. ಭೂತಾನ್ ದೇಶದಿಂದ ಅಕ್ರಮವಾಗಿ ಲಕ್ಸೂರಿ ಕಾರುಗಳನ್ನು ಆಮದು ಮಾಡಿಕೊಂಡಿರುವ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.
ಏನಿದು ಪ್ರಕರಣ..?
ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ಅನಧಿಕೃತ ವಿದೇಶಿ ವಿನಿಮಯ ವ್ಯವಹಾರಗಳನ್ನು ಕಸ್ಟಮ್ಸ್ ಪತ್ತೆ ಹಚ್ಚಿದ ಬೆನ್ನಲ್ಲೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಈ ದಾಳಿ ನಡೆಸಲಾಗಿದೆ. ನಟ ದುಲ್ಕರ್ ಸಲ್ಮಾನ್, ಅಮಿತ್ ಚಕ್ಕಲ್ ಹಾಗು ಪೃಥ್ವಿರಾಜ್ ಸುಕುಮಾರನ್​ರ ಮನೆ ಮೇಲೆ ದಾಳಿ ನಡೆಸಲಾಗಿದೆ. ಇವರ ಹೊರತಾಗಿಯೂ ಕೊಯಮತ್ತೂರು ಮೂಲದ ಉದ್ಯಮಿಗಳು ಹಾಗು ಕಾರು ಮಾಲೀಕರ ಮನೆ ಮೇಲು ಸಹ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಕಳ್ಳ ಸಾಗಾಣೆಯ ಬಗ್ಗೆ ಶಂಕೆ..!
ಸೆಪ್ಟೆಂಬರ್​ನಲ್ಲಿ ನಡೆದ ಕೊನೆಯ ದಾಳಿ ನಂತರ ಮೂವರು ನಟರಿಗೆ ಸೇರಿದ ಸುಮಾರು 40 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ನಿಸ್ಸಾನ್ SUV ಹಾಗು ಸಲ್ಮಾನ್​ಗೆ ಸೇರಿದ ಲ್ಯಾಂಡ್ ರೋವರ್ ಡಿಫೆಂಡರ್ ಕೂಡ ಸೇರಿದೆ. ಕಸ್ಟಮ್ಸ್​ನ ಮೂಲಗಳ ಪ್ರಕಾರ ಈ ಕಾರುಗಳನ್ನು ಅವರು ಅಕ್ರಮ ಮಾರಾಟಗಾರರು ಹಾಗು ನಟರ ನಡುವೆ ನೇರ ಸಂಪರ್ಕವಿದೆ ಎಂದು ಶಂಕಿಸಿದೆ.