/newsfirstlive-kannada/media/media_files/2025/09/28/sudeep-2025-09-28-16-23-12.jpg)
ಬೆಂಗಳೂರು: ಕೊಳಚೆ ನೀರನ್ನು ಸಂಸ್ಕರಿಸದೆ ನಿಯಮ ಬಾಹೀರವಾಗಿ ಚರಂಡಿಗೆ ಹರಿಸಿದ ಪರಿಣಾಮ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿದ್ದು, ಆದ್ರೀಗ ಈ ಪ್ರಕರಣದಲ್ಲಿ ಭಾರೀ ಬೆಳವಣಿಗೆಯಾಗಿದೆ.
ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ..
ಜಾಲಿವುಡ್​ ಸ್ಟುಡಿಯೋಗೆ ಬೀಗ ಹಾಕಿದ ರಾಮನಗರ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ಬಿಗ್​ಬಾಸ್ ತಂಡದ ಪರವಾಗಿ ವಕೀಲೆ ತೇಜಸ್ವಿನಿ ಅರೂರ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ತುರ್ತಾಗಿ ವಿಚಾರಣೆ ನಡೆಸುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿರುವ ಕೋರ್ಟ್, ಇವತ್ತು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸೋದಾಗಿ ತಿಳಿಸಿದೆ.
ಹೈಕೋರ್ಟ್ ತೀರ್ಪಿನ ಮೇಲೆ ಬಿಗ್​ಬಾಸ್​ ಶೋ ಭವಿಷ್ಯ ನಿಂತಿದೆ. ಇಂದು ಮಧ್ಯಾಹ್ನ ಕೋರ್ಟ್​ನಲ್ಲಿ ಏನೆಲ್ಲ ವಿಚಾರಣೆ ನಡೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.