ಅನುಶ್ರೀ ಮದುವೆಯಲ್ಲಿ ಪರಮಾತ್ಮ​.. ಅಪ್ಪು ಫೋಟೋ ನೋಡುತ್ತಿದ್ದಂತೆ ಕಣ್ಣೀರಿಟ್ಟ ನಿರೂಪಕಿ

ಸ್ಟಾರ್ ನಿರೂಪಕಿ ಅನುಶ್ರೀ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ರೋಷನ್​ ಅವರು ಅನುಶ್ರೀ ಕೊರಳಿಗೆ ತಾಳಿ ಕಟ್ಟಿದ್ದಾರೆ.

author-image
Veenashree Gangani
anushree(29)
Advertisment

ಸ್ಟಾರ್ ನಿರೂಪಕಿ ಅನುಶ್ರೀ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ರೋಷನ್​ ಅವರು ಅನುಶ್ರೀ ಕೊರಳಿಗೆ ತಾಳಿ ಕಟ್ಟಿದ್ದಾರೆ.

ಇದನ್ನೂ ಓದಿ: ಹಗಲಿನಲ್ಲಿ ‘Change Your Life’ ಎನ್ನುತ್ತಿದ್ದ ಯೂಟ್ಯೂಬರ್.. ರಾತ್ರಿ ಮಾಡ್ತೀರೋದು..!

anushree(25)

ನಿರೂಪಕಿ, ನಟಿ ಅನುಶ್ರೀ ಅವರ ಮದುವೆ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಅದರಲ್ಲೂ ಒಂದು ಫೋಟೋ ಮಾತ್ರ ಅನುಶ್ರೀ ಹಾಗೂ ಅಭಿಮಾನಿಗಳು ಭಾವುಕರಾಗುವಂತೆ ಮಾಡಿದೆ. ಅದುವೆ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ ಫೋಟೋ.

anushree(24)

ಹೌದು, ನಿರೂಪಕಿ ಅನುಶ್ರೀ ಆರತಕ್ಷತೆ ಕಾರ್ಯಕ್ರಮದಲ್ಲಿ ಅವರ ಸ್ನೇಹಿತರ ಗುಂಪೊಂದು ಫೋಟೋ ಫ್ರೇಮ್​ ಅನ್ನು ಕೊಟ್ಟಿದ್ದಾರೆ. ಆ ಫ್ರೇಮ್​ನಲ್ಲಿ ಅಪ್ಪು ಅವರು ಅನುಶ್ರೀ ಹಾಗೂ ರೋಷನ್​ ಅವರ ಮದುವೆ ಮಧ್ಯೆ ನಿಂತುಕೊಂಡು ಫೋಟೋಗೆ ಫೋಸ್​ ಕೊಡುತ್ತಿರೋ ಹಾಗೇ ಕ್ರಿಯೇಟ್ ಮಾಡಲಾಗಿದೆ.

ಇದೇ ಫೋಟೋವನ್ನು ನೋಡಿದ ಅನುಶ್ರೀ ಅವರು ಕಣ್ಣೀರು ಹಾಕಿದ್ದಾರೆ. ಈ ಫೋಟೋ ಫ್ರೇಮ್​ ಅನ್ನು ಉಡುಗೊರೆ ನೀಡಿದ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಇದೇ ಫೋಟೋ ನೋಡಿದ ಅಭಿಮಾನಿಗಳು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಅಪ್ಪು ಅಜರಾಮರ, ನಗುಮುಖದ ಒಡೆಯ, ಅಪ್ಪು ಸದಾ ಜೀವಂತ ಅಂತ ಭಾವುಕರಾಗಿ ಕಾಮೆಂಟ್ಸ್​ ಮಾಡಿದ್ದಾರೆ.

anushree(18)

ಅನುಶ್ರೀ ಮದುವೆ ಮಂಟಪದಲ್ಲಿ ಅಪ್ಪು ಫೋಟೋ..

ಅನುಶ್ರೀ ಅವರು ನಟ ಪುನೀತ್ ರಾಜ್​​ಕುಮಾರ್ ಅವರ ದೊಡ್ಡ ಅಭಿಮಾನಿ ಅಂತ ಎಲ್ಲರಿಗೂ ಗೊತ್ತಿದೆ. ಅನುಶ್ರೀ ಅವರು ಏನೇ ಶುಭ ಕಾರ್ಯ ಮಾಡಿದರೂ ಅಪ್ಪು ಅವರನ್ನು ನೆನೆಯುತ್ತಾ ಇರುತ್ತಾರೆ. ಅದರಂತೆ ತಮ್ಮ ಮದುವೆ ಸಮಾರಂಭದಲ್ಲೂ ಪುನೀತ್ ರಾಜ್​ಕುಮಾರ್ ಅವರ ಫೋಟೋವನ್ನು ಮಂಟಪದಲ್ಲಿ ಹಾಕಿಸಿ ಮೊದಲು ಅವರ ಆರ್ಶೀವಾದ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ‘ಅಪ್ಪು ಸರ್​ ರೋಷನ್ ಮತ್ತು ನನ್ನ ಸೇರಿಸಿದ್ದರು ಅಂತ ಕೂಡ ಹೇಳಿಕೊಂಡಿದ್ದರು.

anushree(30)

ಇನ್ನೂ, ಅನುಶ್ರೀ ಅವರಿಗೆ ಗಿಫ್ಟ್ ಆಗಿ ಬಂದ ಫೋಟೋ​ದಲ್ಲಿ ಅಪ್ಪು ಅವರು ನಿಜವಾಗಲೂ ಮದುವೆಗೆ ಬಂದ ಹಾಗೇ ನೈಜತೆಯಿಂದ ಕೂಡಿದೆ. ಮುಖದಲ್ಲಿ ಅದೇ ನಗು, ಪಂಚೆ ಶರ್ಟ್ ಧರಿಸಿಕೊಂಡು ಅಪ್ಪು ಅವರು ಮಂದಹಾಸ ಬೀರುತ್ತಾ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Anushree marriage
Advertisment