/newsfirstlive-kannada/media/media_files/2025/08/29/youtuber-2025-08-29-21-40-41.jpg)
ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಪೊಲೀಸರು ಯೂಟ್ಯೂಬರ್ ಒಬ್ಬನನ್ನು ಬಂಧಿಸಿ ಶಾಕಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಯೂಟ್ಯೂಬರ್ ಹಗಲಿನಲ್ಲಿ ಪ್ರಾಮಾಣಿಕತೆ ಮತ್ತು ಅಪರಾಧ ಮುಕ್ತ ಜೀವನದ ಬಗ್ಗೆ ಬೋಧಿಸುತ್ತಿದ್ದ. ಆದರೆ ರಾತ್ರಿಯಲ್ಲಿ ಕ್ರೂರ ಕಳ್ಳನಾಗಿದ್ದ.
ಇದನ್ನೂ ಓದಿ: ಸುಳ್ಳು ಹೇಳಿಕೆ ನೀಡಲು ಚಿನ್ನಯ್ಯಗೆ ಮೂರೂವರೆಯಿಂದ ನಾಲ್ಕು ಲಕ್ಷ ರೂ. ಹಣ ನೀಡಿಕೆ, ಬಳಿಕ ಬೆದರಿಕೆ!
ಬಂಧಿತ ಆರೋಪಿಯ ಹೆಸರು ಮನೋಜ್ ಸಿಂಗ್. ‘ಚೇಂಜ್ ಯುವರ್ ಲೈಫ್’ ಎಂಬ ಯೂಟ್ಯೂಬ್ ಚಾನೆಲ್ ನಡೆಸ್ತಿದ್ದ. ಅಲ್ಲಿ ಅವನು ಶಿಸ್ತು ಮತ್ತು ಅಪರಾಧ ಮುಕ್ತ ಜೀವನದ ಬಗ್ಗೆ ಸಂದೇಶ ಸಾರುತ್ತಿದ್ದ ಎನ್ನಲಾಗಿದೆ.
ಆರೋಪಿಗಳ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು
ಪೊಲೀಸರ ಪ್ರಕಾರ, ಬಂಧಿತ ಆರೋಪಿ ಮನೋಜ್ ಹಲವು ಕಳ್ಳತನಗಳಲ್ಲಿ ಭಾಗಿಯಾಗಿದ್ದಾನೆ. ಈಗಾಗಲೇ 10ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ. ಆಗಸ್ಟ್ 14 ರಂದು ಭರತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಈತ ಅಪರಾಧ ಎಸಗಿದ್ದ. ಈ ಪ್ರಕರಣದಲ್ಲಿ 200 ಗ್ರಾಂ ಚಿನ್ನ ಮತ್ತು 5 ಲಕ್ಷ ರೂ ನಗದು ಕಳವು ಮಾಡಲಾಗಿದೆ. ಪೊಲೀಸರು ಒಂದು ವಾರಗಳ ಕಾಲ ಮನೋಜ್‌ನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದರು. ಇದೀಗ ಪೊಲೀಸರು ಕದ್ದ ಚಿನ್ನ ಮತ್ತು 1 ಲಕ್ಷ ರೂಪಾಯಿ ನಗದು ಸಹಿತ ಆರೋಪಿಯನ್ನ ಬಂಧಿಸಿದ್ದಾರೆ.
ಇದನ್ನೂ ಓದಿ:ಚೀನಾ ಮೀರಿಸಿದ ಭಾರತದ ಜಿಡಿಪಿ ಬೆಳವಣಿಗೆ ದರ, ಮೊದಲ ತ್ರೈಮಾಸಿಕದಲ್ಲಿ ದಾಖಲೆ ಬೆಳವಣಿಗೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ