/newsfirstlive-kannada/media/media_files/2025/08/10/darshan-2025-08-10-12-55-54.jpg)
ನಟ ದರ್ಶನ್​ ಫ್ಯಾನ್ಸ್​ಗೆ ‘ದಿ ಡೆವಿಲ್’ ತಂಡ ಬಿಗ್ ಅಪ್ಡೇಟ್ ಕೊಟ್ಟಿದೆ. ದರ್ಶನ್ ಮತ್ತು ರಚನಾ ರೈ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರೋ 'ದಿ ಡೆವಿಲ್' ಸಿನಿಮಾದ ಮೊದಲ ಸಾಂಗ್​ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ.
ಇದನ್ನೂ ಓದಿ: ಹಳದಿ ಮಾರ್ಗದ ಮೆಟ್ರೋ ಟ್ರೈನ್​ ದರ ಹೇಗಿದೆ.. ಎಲ್ಲಿಂದ ಎಲ್ಲಿವರೆಗೆ ಎಷ್ಟು ರೂಪಾಯಿ ಕೊಡಬೇಕು?
/filters:format(webp)/newsfirstlive-kannada/media/post_attachments/wp-content/uploads/2025/02/Darshan-Devil-Teaser-7.jpg)
ತಾರಕ್ ಬಳಿಕ ನಿರ್ದೇಶಕ ಮಿಲನ ಪ್ರಕಾಶ್ ಅವರು ಮತ್ತೆ ದರ್ಶನ್ ಜೊತೆಯಾಗಿದ್ದಾರೆ. ಈಗಾಗಲೇ ದಿ ಡೆವಿಲ್ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದ್ದು, ಇದೀಗ ಮೊದಲ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 15ರಂದು ಬೆಳಗ್ಗೆ 'ದಿ ಡೆವಿಲ್' ಸಿನಿಮಾದ ಮೊದಲ ಹಾಡು ರಿಲೀಸ್ ಆಗಲಿದೆ.
ಇದೀಗ ಸ್ವಾತಂತ್ರ್ಯ ದಿನಾಚರಣೆಯಂದು 'ದಿ ಡೆವಿಲ್' ಸಿನಿಮಾದ ಮೊದಲ ಹಾಡು ರಿಲೀಸ್​ ಆಗಿಲಿದೆ ಎಂಬ ಪೋಸ್ಟರ್​ ನಟ ದರ್ಶನ್ ಶೇರ್ ಮಾಡಿಕೊಂಡಿದ್ದಾರೆ. ವಿಶೇಷ ಏನೆಂದರೆ ದಿ ಡೆವಿಲ್ ಸಿನಿಮಾದ ಹಾಡಿನ ಮೊದಲ ಸಾಲು 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಎಂದು ಶುರುವಾಗಲಿದೆ. ಈ ಸಾಲು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.
/filters:format(webp)/newsfirstlive-kannada/media/post_attachments/wp-content/uploads/2025/02/Darshan-Devil-Teaser.jpg)
ಇದೀಗ ಅದೇ ಸಾಲನ್ನು ಇಟ್ಟುಕೊಂಡು ಈ ಹಾಡನ್ನು ಬರೆಯಲಾಗಿದೆ ಎಂಬ ಸೂಚನೆ ಸಿಕ್ಕಿದೆ. ದಕ್ಷಿಣ ಭಾರತದಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು 'ದಿ ಡೆವಿಲ್' ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಈಗಾಗಲೇ ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗಿನಲ್ಲೂ ಸೌಂಡ್ ಮಾಡಿದ್ದು, ಈಗ 'ದಿ ಡೆವಿಲ್' ಸಿನಿಮಾದ ಹಾಡಿನ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2024/06/DARSHAN-25.jpg)
ಇನ್ನು, ಈ ಸಿನಿಮಾದಲ್ಲಿ ನಟ ದರ್ಶನ್, ರಚನಾ ರೈ ಜೊತೆಗೆ ಅಚ್ಯುತ್ ಕುಮಾರ್, ಮಹೇಶ್ ಮಾಂಜ್ರೇಕರ್, ಶರ್ಮಿಳಾ ಮಾಂಡ್ರೆ, ಚಂದು ಗೌಡ, ವಿನಯ್ ಗೌಡ ಸೇರಿದಂತೆ ಅನೇಕರ ಕಲಾವಿದರು ನಟಿಸಿದ್ದಾರೆ. 'ರಾಬರ್ಟ್', 'ಕಾಟೇರ' ಖ್ಯಾತಿಯ ಸುಧಾಕರ್ ಎಸ್ ರಾಜ್ ಅವರು ಈ ಸಿನಿಮಾಕ್ಕೆ ಛಾಯಾಗ್ರಹಣ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us