/newsfirstlive-kannada/media/media_files/2025/08/19/kantara-2025-08-19-14-41-45.jpg)
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾಗೆ ಬಾಲಿವುಡ್ ಸ್ಟಾರ್ ನಟ ಎಂಟ್ರಿ ಕೊಟ್ಟಿದ್ದಾರೆ. ಹೌದು, ಕಾಂತಾರ ಚಾಪ್ಟರ್ 1 ಬಗ್ಗೆ ತಂಡ ಆಗಾಗ ಹೊಸ ಹೊಸ ಅಪ್ಡೇಟ್ ಕೊಡ್ತಾನೆ ಇತ್ತು. ಇದೀಗ ಕಾಂತಾರ ಸಿನಿಮಾ ತಂಡ ಮತ್ತೊಂದು ಅಪ್ಡೇಟ್ ಕೊಟ್ಟಿದೆ.
ಇದನ್ನೂ ಓದಿ:ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ ಸುಜಾತ, ಅನನ್ಯಾ ಭಟ್ ಕುಟುಂಬದ ಬಗ್ಗೆ ಎಸ್‌ಐಟಿ ತನಿಖೆ, ಸಿಕ್ಕ ಮಾಹಿತಿ ಏನು ಗೊತ್ತಾ?
ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1ನಲ್ಲಿ ಜನಪ್ರಿಯ ನಟ ಗುಲ್ಶನ್ ದೇವಯ್ಯ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಹೆಮ್ಮೆಯಿಂದ ಘೋಷಿಸಿದೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ, 'ಕಾಂತಾರ' ಜಾಗತಿಕವಾಗಿ ಮೆಚ್ಚುಗೆ ಗಳಿಸುತ್ತಿದೆ. ಇದೀಗ ಈ ಸಿನಿಮಾದಲ್ಲಿ ಕುಲಶೇಖರ ಪಾತ್ರದಲ್ಲಿ ನಟ ಗುಲ್ಶನ್ ದೇವಯ್ಯ ಅವರು ನಟಿಸುತ್ತಿದ್ದಾರೆ.
ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಕಾಂತಾರ ಚಾಪ್ಟರ್ 1' ಪ್ರಬಲ ನಿರೂಪಣೆ ಮತ್ತು ಅದ್ಭುತ ದೃಶ್ಯಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧವಾಗಿದೆ. ಸ್ಟಾರ್ ನಟ ಗುಲ್ಶನ್ ದೇವಯ್ಯ ಅವರ ಆಗಮನವು ಸಿನಿಮಾದ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟಿಸುವಂತೆ ಮಾಡಿದೆ. ಈ ಚಿತ್ರವು 2025ರ ಅಕ್ಟೋಬರ್ 2ರಂದು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ