/newsfirstlive-kannada/media/media_files/2025/09/03/prem_darshan-2025-09-03-13-20-50.jpg)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಜೈಲಿನಿಂದ ಹೊರ ಬಂದ ತಕ್ಷಣ ಅವರ ಜೊತೆ ನಾನೇ ಸಿನಿಮಾ ಮಾಡೋದು ಎಂದು ಸ್ಯಾಂಡಲ್ವುಡ್ ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ ಅವರು ಹೇಳಿದ್ದಾರೆ.
ಜೋಗಿ ಪ್ರೇಮ್ ಅವರು ತಮ್ಮ ಸಿನಿಮಾಗಳ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜೊತೆಗಿನ ಬಹುನಿರೀಕ್ಷಿತ ಕೆಡಿ ಮೂವಿ ಬಗ್ಗೆ ಇನ್ನಷ್ಟು ಅಪ್ಡೇಟ್ಸ್ ಬರಬೇಕಿದೆ. ಕೆಡಿ ಮೂವಿಯ ಸಾಂಗ್ ಈಗಾಗಲೇ ಜನರ ಮೆಚ್ಚುಗೆ ಗಳಿಸಿದೆ. ಇದರ ನಡುವೆ ಜೋಗಿ ಪ್ರೇಮ್ ಅವರು ಲೈಫ್ ಟುಡೇ ಸಿನಿಮಾಕ್ಕಾಗಿ ಒಂದು ಒಳ್ಳೆಯ ಹಾಡು ಹಾಡಿದ್ದಾರೆ. ಸಿನಿಮಾದ ಸಾಂಗ್ ಹಾಡಿದ ಬಳಿಕ ಜೋಗಿ ಪ್ರೇಮ್ ಅವರು ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಬಳ್ಳಾರಿ ಜೈಲಿನ ಭಯ.. ಇಂದು ನ್ಯಾಯಾಲಯ ಏನ್ ಹೇಳುತ್ತೆ ಅನ್ನೋ ಟೆನ್ಷನ್
ದರ್ಶನ್ ಬಗ್ಗೆ ಮಾತನಾಡಿದ ಜೋಗಿ ಪ್ರೇಮ್ ಅವರು, ದರ್ಶನ್ ಆರಾಮಾವಾಗಿ ಇದ್ದಾರೆ. ಒಬ್ಬರು ನೋವಲ್ಲಿ ಇರುವಾಗ ಏನೇನೋ ಮಾತನಾಡಬಾರದು. ದರ್ಶನ್ ಸದ್ಯದಲ್ಲೇ ಜೈಲಿನಿಂದ ಹೊರಗೆ ಬರುತ್ತಾರೆ. ದರ್ಶನ್ ಹೊರಗೆ ಬಂದ ತಕ್ಷಣ ನಾನೇ ಸಿನಿಮಾ ಮಾಡುತ್ತೇನೆ. ದರ್ಶನ್ ಜೈಲಿಗೆ ಹೋಗೋ ಎರಡು ದಿನದ ಮೊದಲೇ ಭೇಟಿ ಮಾಡಿದ್ದೆ. ಅದು ಕ್ಯಾಶುಯಲ್ ಭೇಟಿ ಆಗಿತ್ತು ಅಷ್ಟೇ ಎಂದು ಜೋಗಿ ಪ್ರೇಮ್ ಅವರು ಹೇಳಿದ್ದಾರೆ.
ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ದರ್ಶನ್ ಅವರು ಸದ್ಯ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ಡೆವಿಲ್ ಮೂವಿ ಶೂಟಿಂಗ್ ಪೂರ್ಣಗೊಳಿಸಿರುವ ದರ್ಶನ್, ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಜೈಲಿಗೆ ಹೋಗಿದ್ದಾರೆ. ಬಳ್ಳಾರಿ ಜೈಲಿಗೆ ಕಳುಹಿಸಬೇಕು ಎನ್ನುವ ಅರ್ಜಿ ಕೋರ್ಟ್ನಲ್ಲಿದ್ದು ಈ ಬಗ್ಗೆ ಇಂದು ಸಂಜೆ ಅಂತಿಮ ತೀರ್ಮಾನ ಹೊರ ಬೀಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ