/newsfirstlive-kannada/media/media_files/2025/08/18/darshan-in-jail-2025-08-18-07-07-27.jpg)
ನಟ ದರ್ಶನ್​​ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡುವ ಕೆರೆ ದಡ ಆಟ ಮುಂದುವರೆದಿದೆ. ನಿನ್ನೆ 64ನೇ ಸೆಷನ್ಸ್​ ಕೋರ್ಟ್​ನಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್​ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಆದ್ರೆ, ವಿಚಾರಣೆ ಮುಂದೂಡಿಕೆ ಆಗಿರುವ ಕಾರಣ, ಇಂದು ಸಂಜೆವರೆಗೂ ಪರಪ್ಪನ ಅಗ್ರಹಾರದಲ್ಲೇ ದಾಸ ವಾಸ್ತವ್ಯ ಮಾಡಲಿದ್ದಾರೆ.
ರೇಣುಕಾಸ್ವಾಮಿ ಕೇಸ್​ನಲ್ಲಿ ದರ್ಶನ್​ ಮತ್ತೆ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆದ್ರೆ ದರ್ಶನ್​ನನ್ನ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಜೈಲು ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ಪರಪ್ಪನ ಅಗ್ರಹಾರದ ಪಂಜರದಲ್ಲಿರುವ ದಾಸನಿಗೆ ಬಳ್ಳಾರಿಯ ದಿಗಿಲು ಹೆಚ್ಚಾಗಿದೆ.
/filters:format(webp)/newsfirstlive-kannada/media/media_files/2025/08/20/darshan-5-2025-08-20-13-17-47.jpg)
ಇಂದು ಸೆಷನ್ಸ್​ ನ್ಯಾಯಾಲಯದಲ್ಲಿ ನಡೆಯಲಿದೆ ವಿಚಾರಣೆ!
ನಿನ್ನೆ ಜಸ್ಟೀಸ್​ ಲ್ಯಾಂಡ್ ಸೆಷನ್ಸ್​ ಕೋರ್ಟ್​ ಮುಂದೆ ದರ್ಶನ್ ಪರ ವಕೀಲ ಸಂದೇಶ್ ಚೌಟ ಹಲವು ಬೇಡಿಕೆಯನ್ನಿಟ್ಟರು. ಬೆಳಗ್ಗೆ ಕನಿಷ್ಠ ಸಲವತ್ತು ಬೇಕು. ಬಟ್ಟೆ, ಆಹಾರ, ಹಾಸಿಗೆ, ದಿಂಬುಗಳು ಸೇರಿ ಬೆಸಿಕ್ ನೀಡ್ಸ್​ ಕೊಡಿ ಅಂತ ಕೇಳಿಕೊಂಡರು. ಇನ್ನೂ ಮಧ್ಯಾಹ್ನದ ವಿಚಾರಣೆಯಲ್ಲಿ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ವಿಚಾರವಾಗಿ ಆಕ್ಷೇಪಣೆ ಸಲ್ಲಿಸಿದರು.
ಎಸ್​ಪಿಪಿ ಪ್ರಸನ್ನ ಕುಮಾರ್ ವಾದವನ್ನ ಕೂಡ ನ್ಯಾಯಾಲಯ ಕೇಳಿತು. ಎರಡೂ ಕಡೆಯ ವಾದ-ಪ್ರತಿವಾದವನ್ನ ಆಲಿಸಿ 64ನೇ ಸೆಷನ್ಸ್​ ಕೋರ್ಟ್​.. ವಿಚಾರಣೆಯನ್ನ ಇವತ್ತು ಸಂಜೆ 4 ಗಂಟೆಗೆ ಮುಂದೂಡಿಕೆ ಮಾಡಿದೆ. ಆದ್ರೆ ಇತ್ತ ಪರಪ್ಪನ ಅಗ್ರಹಾರ ಜೈಲಿನಲ್ಲರೋ ದರ್ಶನ್​ಗೆ ಇವತ್ತು ಕೋರ್ಟ್​ ಏನ್​ ಹೇಳುತ್ತೆ ಅನ್ನೋ ಟೆನ್ಷನ್​ ಶುರುವಾಗಿದೆ.
ದರ್ಶನ್​ ಟೆನ್ಷನ್!
- ಇಂದು ಆದೇಶ ಕೊಟ್ಟರೆ, ಬಳ್ಳಾರಿಗೆ ದರ್ಶನ್ ಶಿಫ್ಟ್
- ಎರಡನೇ ಬಾರಿಗೆ ಬಳ್ಳಾರಿ ಜೈಲಿನ ಕಂಬಿಗಳ ಎಣಿಕೆ
- 63 ದಿನ ಕಾಲ ಬಳ್ಳಾರಿ ಜೈಲಲ್ಲಿದ್ದ ಆರೋಪಿ ದರ್ಶನ್
- ಬೆಂಗಳೂರಿನಲ್ಲಿದ್ದರೇ ಕುಟುಂಬದವರ ಭೇಟಿಗೆ ಸುಲಭ
- ಆರೋಗ್ಯ ಸಮಸ್ಯೆ ಕಂಡು ಬಂದ್ರೆ ಚಿಕಿತ್ಸೆಗೆ ಅನುಕೂಲ
/filters:format(webp)/newsfirstlive-kannada/media/media_files/2025/08/16/actor-darshan-pavithra-photos-2025-08-16-18-09-36.jpg)
ಹೀಗೆ ಹತ್ತು ಹಲವಾರು ವಿಚಾರಗಳು ಸದ್ಯ ದರ್ಶನ್​ ತಲೆನಲ್ಲಿ ಹುಟ್ಟಿಕೊಂಡಿದೆ. ವಿಚಾರಣೆ ಮುಂದೂಡಿಕೆ ಮಾಡಿ ನಟ ದರ್ಶನ್​ಗೆ ತಾತ್ಕಾಲಿಕ ರಿಲೀಫ್​ ನೀಡಿರುವ ಸೆಷನ್ಸ್​​ ಕೋರ್ಟ್​, ಬೇಲ್​ ನಿರೀಕ್ಷೆಯಲ್ಲಿದ್ದ ಮೊದಲ ಆರೋಪಿ ಪವಿತ್ರಾಗೌಡಗೆ ಶಾಕ್​ ಕೊಟ್ಟಿದೆ.
ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ
ಮಹಿಳೆ ಹಾಗೂ ಸಿಂಗಲ್ ಪೇರೆಂಟ್ ಆಗಿರುವುದರಿಂದ ಮಗಳ ಆರೈಕೆ ಮಾಡಬೇಕಿದೆ ಎಂಬ ಕಾರಣ ನೀಡಿ ಪವಿತ್ರಾ ಗೌಡ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದ್ರೆ, ಪವಿತ್ರಾ ಗೌಡ ಅವರ ಮನವಿಯನ್ನ ಪರಿಗಣಿಸದ ನ್ಯಾಯಾಲಯ ಜಾಮೀನು ಅರ್ಜಿಯನ್ನ ವಜಾ ಮಾಡಿದೆ. ಇದರಿಂದ ದರ್ಶನ್​ ಆಪ್ತೆಗೆ ಜೈಲುವಾಸ ಮುಂದುವರಿಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us