/newsfirstlive-kannada/media/media_files/2026/01/08/toxic-1-2026-01-08-13-58-20.jpg)
ರಾಕಿಂಗ್ ಸ್ಟಾರ್​ ಅಭಿಮಾನಿಗಳಿಗೆ ಇವತ್ತು ಹಬ್ಬದ ಸಂಭ್ರ. ಒಂದು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವಾದ್ರೆ, ಇನ್ನೊಂದು ಬಹು ನಿರೀಕ್ಷಿತ ಟಾಕ್ಸಿಕ್ (Toxic: A Fairy Tale for Grown-Ups) ಸಿನಿಮಾದ ಟೀಸರ್​ ರಿಲೀಸ್ ಆಗಿದೆ.
ಟೀಸರ್​​​ನ ಕಣ್ತುಂಬಿಕೊಂಡಿರುವ ಫ್ಯಾನ್ಸ್​, ಸಿನಿಮಾ ಲೋಕದಲ್ಲಿ ಮಿಂದೇಳುತ್ತಿದ್ದಾರೆ. ಈ ಮಧ್ಯೆ ಟೀಸರ್​ನ ಒಂದು ತುಣುಕಿನಲ್ಲಿ, ಹಸಿಬಿಸಿ ದೃಶ್ಯವಿದೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಸಿನಿಮಾ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಇನ್ನೊಂದು ವಿಚಾರ ಅಂದ್ರೆ ಈ ಸಿನಿಮಾ ಮಕ್ಕಳಿಗೆ, ಅಪ್ರಾಪ್ತರಿಗೆ ಅಲ್ಲ ಎಂದು ಟಾಕ್ಸಿಕ್ ತಂಡ ಸ್ಪಷ್ಟಪಡಿಸಿದೆ.
/filters:format(webp)/newsfirstlive-kannada/media/media_files/2026/01/08/toxic-2-2026-01-08-13-59-55.jpg)
ಆ ದೃಶ್ಯದಲ್ಲಿರೋ ನಟಿ ಯಾರು..?
ಟಾಕ್ಸಿಕ್ ಗ್ಲಿಂಪ್ಸ್​ನಲ್ಲಿ ಬೆಂಕಿ ಹಚ್ಚಿದ ನಟಿಯ ಹೆಸರು ನ್ಯಾಟಲೀ ಬರ್ನ್​ (Natalie burn). ಅಮೆರಿಕಾ ಮೂಲದ ಖ್ಯಾತ ಹಾಲಿವುಡ್ ನಟಿಯಾಗಿರುವ ಇವರು, ಟಾಕ್ಸಿಕ್ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರು. ನ್ಯಾಟಲಿ ಬರ್ನ್ ಒಬ್ಬ ಹಾಲಿವುಡ್ ನಟಿ ಮತ್ತು ನಿರ್ಮಾಪಕಿ. ಅವಳ ಮೂಲ ಹೆಸರು ನಟಾಲಿಯಾ ಗುಸ್ಲಿಸ್ತಾಯಿ (Natalia Guslista). ಅವಳು ಉಕ್ರೇನ್​​ ಕಿಯೆವ್ ನಲ್ಲಿ (Kyiv, Ukraine) ಜನಿಸಿದ ಅವರು, ಮಾಡೆಲಿಂಗ್ ಜಗತ್ತಿನಲ್ಲೂ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’ ಹುಮಾ ಖುರೇಷಿ ಫಸ್ಟ್​ ಲುಕ್ ಔಟ್! ಹೆಂಗಿದೆ..?
/filters:format(webp)/newsfirstlive-kannada/media/media_files/2026/01/08/toxic-2026-01-08-14-00-09.jpg)
ಇನ್ನು, ಟೀಸರ್​ನಲ್ಲಿ ಇದೇ ಹೀರೋಯಿನ್ ಜೊತೆ ಯಶ್​ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿದರೆ ‘ಟಾಕ್ಸಿಕ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ಸಿಗುವ ಬಗ್ಗೆ ಚರ್ಚೆ ಆಗ್ತಿದೆ. ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆ ಆಗಿದ್ದ ಟೀಸರ್​​ನಲ್ಲಿಯೂ ಹಸಿ-ಬಿಸಿ ದೃಶ್ಯಗಳಿದ್ದವು. ವಿದೇಶಿ ಯುವತಿಯರು ಅರೆನಗ್ನರಾಗಿ, ಮಾದಕ ನೃತ್ಯ ಮಾಡುತ್ತಿರುವ ದೃಶ್ಯಗಳು, ಮಾದಕ ವಸ್ತುವನ್ನು ಬಳಸುತ್ತಿರುವ ದೃಶ್ಯಗಳು, ಅಶ್ಲೀಲ ಸಜ್ಞೆಗಳನ್ನು ಮಾಡುತ್ತಿರುವ ದೃಶ್ಯಗಳನ್ನು ಒಳಗೊಂಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us