Big Breaking: ಸ್ಯಾಂಡಲ್​ವುಡ್ ಸ್ಟಾರ್​ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು?

ಸ್ಯಾಂಡಲ್​ವುಡ್​ ಸ್ಟಾರ್ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪರಸ್ಪರ ವಿಚ್ಛೇದನ ಕೋರಿ ಅಜಯ್ ರಾವ್ ಪತ್ನಿ ಸ್ವಪ್ನ ರಾವ್ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

author-image
Veenashree Gangani
Updated On
Ajay Rao
Advertisment

ಸ್ಯಾಂಡಲ್​ವುಡ್​ ಸ್ಟಾರ್ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಪರಸ್ಪರ ವಿಚ್ಛೇದನ ಕೋರಿ ಅಜಯ್ ರಾವ್ ಪತ್ನಿ ಸ್ವಪ್ನ ರಾವ್ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ:ಭರ್ಜರಿ ಬ್ಯಾಚುಲರ್ಸ್ 2 ಮುಕ್ತಾಯದ ಬೆನ್ನಲ್ಲೇ ಪ್ರವೀಣ್​ ಜೈನ್ ಮನೆಗೆ ಹೊಸ ಅತಿಥಿ ಆಗಮನ.. ಏನದು..?

ಅಜಯ್ ರಾವ್ ಮತ್ತು ಸ್ವಪ್ನ ರಾವ್ 2014 ಡಿಸೆಂಬರ್ 18ರಲ್ಲಿ ಇಬ್ಬರು ಪ್ರೀತಿಸಿ ಮದುವೆ ಆಗಿದ್ದರು. 11 ವರ್ಷಗಳ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಡಿವೋರ್ಸ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇತ್ತೀಚೆಗೆ ಈ ಜೋಡಿ ಹೊಸ ಮನೆ ಗೃಹ ಪ್ರವೇಶ ಮಾಡಿತ್ತು. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. 

ajai rao

ನಟ ಅಜಯ್‌ ರಾವ್‌ ಮತ್ತು ಸ್ವಪ್ನ ಅಜಯ್‌ ರಾವ್‌ ಅವರು 2014 ಡಿಸೆಂಬರ್‌ನಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಯದ್ದು ಲವ್‌ ಕಂ ಅರೇಂಜ್‌ ಮ್ಯಾರೇಜ್‌. ಹೀಗೆ ಪರಿಚಯವಾಗಿ, ಆ ಪರಿಚಯ ಸ್ನೇಹಕ್ಕೆ ಮತ್ತು ಸ್ನೇಹ ಪ್ರೀತಿಗೆ ತಿರುಗಿ ನಂತರ ಸಪ್ತಪದಿ ತುಳಿದಿದ್ದರು. ಸದ್ಯ ಈ ಜೋಡಿಗೆ ಮುದ್ದಾದ ಮಗಳಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

actor Ajay Rao, divorce case
Advertisment