/newsfirstlive-kannada/media/media_files/2025/09/01/ss_devid-2025-09-01-08-59-21.jpg)
ಬೆಂಗಳೂರು: ಪೊಲೀಸ್ ಸ್ಟೋರಿ, ಅಗ್ನಿ ಐಪಿಎಸ್, ಜೈಹಿಂದ್ ಸೇರಿದಂತೆ ಸ್ಯಾಂಡಲ್ವುಡ್ನ ಹಲವು ಸಿನಿಮಾಗಳ ಬರಹಗಾರ ಎಸ್.ಎಸ್ ಡೇವಿಡ್ ಅವರು ನಿಧನರಾಗಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ರೈಟರ್ ಆಗಿದ್ದ ಎಸ್.ಎಸ್ ಡೇವಿಡ್ ಅವರು ಆರ್ಆರ್ ನಗರದ ಎಸ್ಎಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಡೇವಿಡ್ ಅವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಿನಿಮಾಗಳಿಗೆ ಕಥೆ ಬರೆಯುವುದು ಅಲ್ಲದೇ ಹಾಯ್ ಬೆಂಗಳೂರು ಹಾಗೂ ಧೈರ್ಯ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
ಇದನ್ನೂ ಓದಿ: BJP ಧರ್ಮಯುದ್ಧ.. ಬಿ.ವೈ ವಿಜಯೇಂದ್ರ, R ಅಶೋಕ್ ನೇತೃತ್ವದಲ್ಲಿ ಇಂದು ಧರ್ಮಸ್ಥಳ ಚಲೋ
ಎಸ್.ಎಸ್ ಡೇವಿಡ್ ಅವರು ಮೆಡಿಕಲ್ ಶಾಪ್ಗೆ ಹೋಗಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ವೇಳೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗ ಮಧ್ಯೆಯೇ ಪಲ್ಸ್ ರೇಟ್ ಕಡಿಮೆ ಆಗಿದ್ದರಿಂದ ಎಸ್.ಎಸ್ ಡೇವಿಡ್ ಅವರು ಉಸಿರು ಚೆಲ್ಲಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ