/newsfirstlive-kannada/media/media_files/2025/08/02/actor-santhosh-balaraj1-2025-08-02-10-46-47.jpg)
ಸ್ಯಾಂಡಲ್​ವುಡ್​ ಯುವ ನಟ ಸಂತೋಷ್ ಬಾಲರಾಜ್ ನಿಧನರಾಗಿದ್ದಾರೆ. ಹಿರಿಯ ನಿರ್ಮಾಪಕ ಆನೆಕಲ್ ಬಾಲ್ ರಾಜ್ ಪುತ್ರ ಸಂತೋಷ ಬಾಲರಾಜ್ ಇಂದು ಬೆಳಗ್ಗೆ 9.45ರ ಸುಮಾರಿಗೆ ನಿಧನ ಹೊಂದಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ; ಈ ಕುರಿತು ಸಭೆ ಬಳಿಕ ಸಚಿವ ರಾಮಲಿಂಗಾರೆಡ್ಡಿ ಏನೇನು ಹೇಳಿದರು?
/newsfirstlive-kannada/media/media_files/2025/08/02/actor-santhosh-balaraj2-2025-08-02-10-56-11.jpg)
ಕಿರಿಯ ವಯಸ್ಸಿಗೆ ಜಾಂಡೀಸ್​ನಿಂದ ನಟ ಸಂತೋಷ್ ಬಾಲರಾಜ್ ಬಳಲುತ್ತಿದ್ದರು. ಹೀಗಾಗಿ 34 ವಯಸ್ಸಿನ ನಟ ಸಂತೋಷ್ ಬಾಲರಾಜ್ ಅವರನ್ನ ಕುಮಾರಸ್ವಾಮಿ ಲೇಔಟ್​ನ ಸಾಗರ್ ಅಫೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ, ನಟ ಸಂತೋಷ್ ಬಾಲರಾಜ್ ನಿಧನರಾಗಿದ್ದಾರೆ.
/filters:format(webp)/newsfirstlive-kannada/media/media_files/2025/08/02/actor-santhosh-balaraj-2025-08-02-10-46-47.jpg)
ಸಂತೋಷ್ ಬಾಲ್​ರಾಜ್ ಅವರು ಅಮ್ಮನ ಜೊತೆಗೆ ವಾಸವಾಗಿದ್ದರು. ಸಂತೋಷ್ ಬಾಲ್​ರಾಜ್ ತಂದೆ ಅನೇಕಲ್ ಬಾಲರಾಜ್ ದರ್ಶನ್​ಗೆ ಕರಿಯ ಸಿನಿಮಾ ಮಾಡಿದ್ದರು. ಕರಿಯ-2 ಕೆಂಪ, ಗಣಪ, ಬರ್ಕ್ಲಿ, ಸತ್ಯ ಸಿನಿಮಾಗಳಲ್ಲಿ ಸಂತೋಷ್ ನಾಯಕ ನಟನಾಗಿ ಅಭಿನಯಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us