/newsfirstlive-kannada/media/media_files/2025/10/18/rishabh_shetty-1-2025-10-18-08-14-13.jpg)
ರಿಷಭ್ ಶೆಟ್ಟಿ ಅವರ ಕಾಂತಾರ ಪ್ರೀಕ್ವೆಲ್ ಮೂವಿ ದೇಶದ ಎಲ್ಲ ಥಿಯೇರ್​​ಗಳಲ್ಲಿ ಅಬ್ಬರಿಸುತ್ತಿದೆ. ಜನರನ್ನು ಸಿನಿಮಾ ಮಂದಿರಗಳತ್ತ ಸೆಳೆಯುತ್ತಿರುವ ಕಾಂತಾರ ಕಲೆಕ್ಷನ್​​ನಲ್ಲೂ ಹಿಂದೆ ಬಿದ್ದಿಲ್ಲ. ಹೌಸ್​ಫುಲ್​ ಶೋಗಳು ನಡೆಯುತ್ತಿದ್ದು ರಿಷಭ್​ ಶೆಟ್ಟಿ ಹಾಗೂ ನಿರ್ಮಾಪಕರಿಗೆ ಸಂತಸದ ಸುದ್ದಿಯಾಗಿದೆ. ಕಾಂತಾರ ಪ್ರೀಕ್ವೆಲ್​ ರಿಲೀಸ್ ಆಗಿ ಕೇವಲ 2 ವಾರದಲ್ಲಿ ವಿಶ್ವದ್ಯಾಂತ 700 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ.
ಕಾಂತಾರ ಮತ್ತೊಮ್ಮೆ ಬಹುದೊಡ್ಡ ಸಕ್ಸಸ್​ ಕಂಡ ಹಿನ್ನೆಲೆಯಲ್ಲಿ ಡಿವೈನ್ ಸ್ಟಾರ್, ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿದ್ದಾರೆ. ದೇವರ ಆಶೀರ್ವಾದ ಪಡೆದ ರಿಷಭ್ ಶೆಟ್ಟಿ ಅವರು ಗಂಗಾ ಆರತಿಯಲ್ಲೂ ಪಾಲ್ಗೊಂಡಿದ್ದಾರೆ. ಇನ್ನು ಇದೇ ವೇಳೆ ಸಿನಿಮಾಗೆ ಅತ್ಯಂತ ದೊಡ್ಡ ಗೆಲುವು ಕೊಟ್ಟಿದ್ದಕ್ಕೆ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
2025ರ ವರ್ಷದಲ್ಲಿ ಕಾಂತಾರ ಪ್ರಿಕ್ವೇಲ್ ಮೂವಿ ಬ್ಲಾಕ್​ಬಾಸ್ಟರ್ ಹಿಟ್ ಮೂವಿ ಆಗಿದೆ. ಈ ಸಿನಿಮಾವೂ ರಿಲೀಸ್ ಆದ ಕೇವಲ 16 ದಿನಗಳಲ್ಲಿ ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಮಾಡಿದ್ದು ಇದುವರೆಗೂ 717.50 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಈಗಲೂ ಥಿಯೇಟರ್​ಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದ್ದು ಸಾವಿರ ಕೋಟಿ ರೂಪಾಯಿಗಳನ್ನು ಸುಲಭವಾಗಿಯೇ ಗಳಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:RCB ಖರೀದಿಗೆ 6 ಉದ್ಯಮಿಗಳು ಪೈಪೋಟಿನಾ..? ರೇಸ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಓನರ್!
ರಿಷಭ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರು ಅಭಿನಯಿಸಿರುವ ಕಾಂತಾರ ಪ್ರೀಕ್ವೆಲ್ ಮೂವಿ ರಿಲೀಸ್ ಆದ ಮೇಲೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತ ಮುನ್ನುಗ್ಗುತ್ತಿದೆ. ಕಲೆಕ್ಷನ್​ನಲ್ಲಿ ಹಿಂದೆ ಬೀಳದ ಕಾಂತಾರ ಸಿನಿಮಾ ಎಲ್ಲ ದಾಖಲೆಗಳನ್ನು ಉಡೀಸ್ ಮಾಡುವಂತೆ ಕಾಣುತ್ತಿದೆ. ಏಕೆಂದರೆ ರಿಷಭ್ ಶೆಟ್ಟಿ ಅವರ ಡೈರೆಕ್ಷನ್​ ಹಾಗೂ ನಟನೆಗೆ ಅಭಿಮಾನಿಗಳು ಮೂಕವಿಸ್ಮಿತರಾಗಿದ್ದಾರೆ.
2022ರಲ್ಲಿ ರಿಲೀಸ್ ಆಗಿದ್ದ ಕಾಂತಾರ ಭಾಗ-2 ಸಿನಿಮಾ ಸುಮಾರು 16 ಕೋಟಿ ರೂಪಾಯಿನಲ್ಲಿ ನಿರ್ಮಾಣ ಮಾಡಲಾಗಿತ್ತು. ಇದು ಒಟ್ಟು 400 ಕೋಟಿ ರೂಪಾಯಿ ಗಳಿಸಿತ್ತು. ಇದೀಗ ಕಾಂತಾರ ಪ್ರೀಕ್ವೆಲ್​ ಅಂದಾಜು 125 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದ್ದು 700 ಕೋಟಿ ರೂಪಾಯಿಗೂ ಅಧಿಕ ಸಂಗ್ರಹಿಸಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ರಿಷಭ್ ಶೆಟ್ಟಿ ಅವರಿಗೆ ಎಲ್ಲೆಡೆಯಿಂದ ಅಭಿನಂದನೆಗಳು ಹರಿದು ಬರುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ