RCB ಖರೀದಿಗೆ 6 ಉದ್ಯಮಿಗಳು ಪೈಪೋಟಿನಾ..? ರೇಸ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಓನರ್!

ಆರ್​​ಸಿಬಿ ತಂಡವನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷ್ಯ. ಅಧಿಕೃತವಾಗಿ ಸೇಲ್ ಮಾಡಲಾಗುತ್ತಿದೆಯಾ ಎನ್ನುವ ವಿಚಾರ ನಿಗೂಢವಾಗಿದೆ. ಆದರೆ ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್​​ ತಂಡದ ಮಾಲೀಕ ಸೇರಿ..

author-image
Bhimappa
RCB (38)
Advertisment

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಟೀಮ್ ಐಪಿಎಲ್ ಇತಿಹಾಸದಲ್ಲಿ ಮೊದಲ ಟ್ರೋಫಿಗೆ ಮುತ್ತಿಟ್ಟು ಸಂಭ್ರಮಿಸಿದೆ. ಇದರ ಬೆನ್ನಲ್ಲೇ ಆರ್​​ಸಿಬಿ ತಂಡವನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷ್ಯ. ಅಧಿಕೃತವಾಗಿ ಸೇಲ್ ಮಾಡಲಾಗುತ್ತಿದೆಯಾ ಎನ್ನುವ ವಿಚಾರ ನಿಗೂಢವಾಗಿದೆ. ಆದರೆ ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್​​ ತಂಡದ ಮಾಲೀಕ ಸೇರಿ ಒಟ್ಟು 6 ಉದ್ಯಮಿಗಳು ಆರ್​ಸಿಬಿ ಖರೀದಿಗೆ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. 

ಬ್ರಿಟಿಷ್ ಮದ್ಯ ಕಂಪನಿ ಡಿಯಾಜಿಯೊ (Diageo) ಆರ್​ಸಿಬಿ ಅನ್ನು ಬರೋಬ್ಬರಿ 2 ಬಿಲಿಯನ್ ಡಾಲರ್ ಅಂದ್ರೆ 17.592.7 ಕೋಟಿ ರೂಪಾಯಿಗೆ ಮಾರಾಟ ಮಾಡಲು ಸಿದ್ಧವಾಗಿದೆ ಎನ್ನಲಾಗಿದೆ. ಹೀಗಾಗಿ ಒಬ್ಬರಲ್ಲ, ಇಬ್ಬರಲ್ಲ ಒಟ್ಟು 6 ಉದ್ಯಮಿಗಳು ಆರ್​ಸಿಬಿ ಕೊಂಡುಕೊಳ್ಳಲು ಮುಂದೆ ಬಂದಿದ್ದಾರೆ. ಆದರೆ ಕೊನೆಯ ಕ್ಷಣಗಳಲ್ಲಿ ಆರ್​ಸಿಬಿ ಮಾಲೀಕತ್ವ ಹೊಂದಿರುವ ಡಿಯಾಜಿಯೊ ಮನಸು ಬದಲಿಸಿ, ಮಾರಾಟ ಮಾಡದೇ ತನ್ನಲ್ಲೇ ಉಳಿಸಿಕೊಂಡರೂ ಆಚ್ಚರಿ ಇಲ್ಲ. 

ಇದನ್ನೂ ಓದಿ:ಮಾತಲ್ಲೇ ಮೊಹಮ್ಮದ್ ಶಮಿಗೆ ಚಾಟಿ ಬೀಸಿದ ಚೀಫ್ ಸೆಲೆಕ್ಟರ್​ ಅಜಿತ್ ಅಗರ್ಕರ್​.. ಏನ್ ಹೇಳಿದರು?

DELHI_TEAM

ಆರ್​ಸಿಬಿ ಖರೀದಿ ಮಾಡಲು ಭಾರತ ಹಾಗೂ ಅಮೆರಿಕದ ಉದ್ಯಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಬಗ್ಗೆ ಡಿಯಾಜಿಯೊ ಮ್ಯಾನೇಜ್​ಮೆಂಟ್​ ಅಧಿಕೃತವಾಗಿ ಹೇಳಬೇಕಷ್ಟೇ. ಸದ್ಯ ಡೆಲ್ಲಿ ಕ್ಯಾಪಿಟಲ್​ ಸಹ-ಮಾಲೀಕ ಹಾಗೂ ಜೆಎಸ್‌ಡಬ್ಲ್ಯೂ ಗ್ರೂಪ್‌ನ ಪಾರ್ಥ್ ಜಿಂದಾಲ್, ಸೀರಮ್ ಇನ್‌ಸ್ಟಿಟ್ಯೂಟ್‌ನ ಆದರ್ ಪೂನಾವಾಲಾ, ಅದಾನಿ ಗ್ರೂಪ್, ದೆಹಲಿಯ ಪ್ರಸಿದ್ಧ ಉದ್ಯಮಿ ಸೇರಿದಂತೆ ಅಮೆರಿಕದ 2 ಖಾಸಗಿ ಷೇರು ಕಂಪನಿಗಳು ಆರ್​ಸಿಬಿ ಖರೀದಿಗೆ ಮುಂದೆ ಬಂದಿವೆ ಎಂದು ಹೇಳಲಾಗುತ್ತಿದೆ. 

ಆದಾರ್ ಪೂನಾವಾಲ ಆರ್​ಸಿಬಿ ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಒಂದು ವೇಳೆ ಮಾತುಕತೆ ನಡೆದರೆ ಅವರು ಅಮೆರಿಕದ ಹೂಡಿಕೆದಾರರ ಜೊತೆ ಪಾಲುದಾರಿಕೆ ಹೊಂದಬಹುದು ಎನ್ನಲಾಗುತ್ತಿದೆ. ಸಿನಿಮಾ ಕ್ಷೇತ್ರದಲ್ಲೂ ಹಣ ಹೂಡಿಕೆ ಮಾಡುತ್ತಿರುವ ಇವರು 2010 ರಿಂದಲೂ ಐಪಿಎಲ್ ತಂಡಗಳಲ್ಲಿ ಹಣ ಹೂಡಿಕೆ ಮಾಡಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Phil Salt RCB RCB CARES RCB
Advertisment