Advertisment

ಮಾತಲ್ಲೇ ಮೊಹಮ್ಮದ್ ಶಮಿಗೆ ಚಾಟಿ ಬೀಸಿದ ಚೀಫ್ ಸೆಲೆಕ್ಟರ್​ ಅಜಿತ್ ಅಗರ್ಕರ್​.. ಏನ್ ಹೇಳಿದರು?

ಮೊಹಮ್ಮದ್ ಶಮಿ ಏನು ಹೇಳಿದ್ದಾರೆ ಎಂಬುದು ನನಗೆ ಮಾಹಿತಿ ಇಲ್ಲ. ಶಮಿ ಇಲ್ಲಿದ್ದರೂ ನನ್ನ ಉತ್ತರ ಒಂದೇ. ಸೋಷಿಯಲ್ ಮೀಡಿಯಾದಲ್ಲಿ ಶಮಿ ಏನು ಹೇಳಿದ್ದಾರೆ ಎಂಬುದು ನನಗೆ ಖಚಿತತೆ ಇಲ್ಲ. ಒಂದು ವೇಳೆ ನಾನು ಅದನ್ನು ನೋಡಿದ್ದರೇ ಅವರಿಗೆ ಫೋನ್ ಮಾಡುತ್ತಿದ್ದೆ.

author-image
Bhimappa
Shami_IND
Advertisment

ಏಕದಿನ ಸರಣಿಗಾಗಿ ಈಗಾಗಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಅಭ್ಯಾಸ ಮಾಡುತ್ತಿದೆ. ಬಲಿಷ್ಠ ತಂಡವನ್ನು ಪ್ರಕಟಿಸಿರುವ ಬಿಸಿಸಿಐ ಆಯ್ಕೆ ಸಮಿತಿ, ಕೆಲ ಆಟಗಾರರು ಫಿಟ್ ಆಗಿದ್ದರೂ ಆಯ್ಕೆ ಮಾಡಿಲ್ಲ ಎನ್ನುವ ಅಪಸ್ವರಗಳು ಕೇಳಿ ಬರುತ್ತಿವೆ. ಅದರಂತೆ ವೇಗಿ ಮೊಹಮ್ಮದ್ ಶಮಿ ಅವರು ಬಿಸಿಸಿಐ ಸಲೆಕ್ಷನ್​ ಕಮಿಟಿ ವಿರುದ್ಧ ಕಿಡಿ ಕಾರಿದ್ದರು. ಇದರ ಬೆನ್ನಲ್ಲೇ ಚೀಪ್ ಸಲೆಕ್ಟರ್​​ ಅಜಿತ್ ಅಗರ್ಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. 

Advertisment

ಮಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು, ಯಾವುದೇ ಆಟಗಾರರು ಫಿಟ್ ಆಗಿದ್ರೆ ತಂಡದಲ್ಲಿ ಇರುತ್ತಿದ್ದರು. ಮೊಹಮ್ಮದ್ ಶಮಿ ಫಿಟ್ ಇಲ್ಲ, ತಂಡಕ್ಕೆ ಆಯ್ಕೆ ಆಗಿಲ್ಲ. ಅವರು ಏನು ಹೇಳಿದ್ದಾರೆ ಎಂಬುದು ನನಗೆ ಮಾಹಿತಿ ಇಲ್ಲ. ಶಮಿ ಇಲ್ಲಿದ್ದರೂ ನನ್ನ ಉತ್ತರ ಒಂದೇ. ಸೋಷಿಯಲ್ ಮೀಡಿಯಾದಲ್ಲಿ ಶಮಿ ಏನು ಹೇಳಿದ್ದಾರೆ ಎಂಬುದು ನನಗೆ ಖಚಿತತೆ ಇಲ್ಲ. ಒಂದು ವೇಳೆ ನಾನು ಅದನ್ನು ನೋಡಿದ್ದರೇ ಅವರಿಗೆ ಫೋನ್ ಮಾಡುತ್ತಿದ್ದೆ. ಎಲ್ಲ ಆಟಗಾರರಿಗೂ ನನ್ನ ಫೋನ್ ಯಾವಾಗಲೂ ಆನ್ ಆಗಿರುತ್ತದೆ. ಕಳೆದ ಕೆಲವು ತಿಂಗಳ ಹಿಂದೆ ಶಮಿ ಜೊತೆ ಮಾತನಾಡಿದ್ದೇನೆ. ಆದರೆ ಅದನ್ನು ಇಲ್ಲಿ ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ. 

ಇದನ್ನೂ ಓದಿ:BBK12; ನೀವೇ ದೊಡ್ಡ ನಾಗವಲ್ಲಿ.. ರಕ್ಷಿತಾ ಜೊತೆ ನಿಲ್ಲದ ಜಾಹ್ನವಿ, ಅಶ್ವಿನಿಯ ಜಗಳ

Ajit_Agarkar

ಮೊಹಮ್ಮದ್ ಶಮಿ ಅವರು ಟೀಮ್ ಇಂಡಿಯಾಕ್ಕಾಗಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್​ ಟೂರ್​ಗೂ ಮೊದಲೇ ಶಮಿ ಫಿಟ್ ಆಗಿದ್ರೆ ಈಗ ಆಸ್ಟ್ರೇಲಿಯಾದ ವಿಮಾನ ಏರುತ್ತಿದ್ದರು. ದುರದೃಷ್ಟವಶಾತ್ ಅವರು ಅಂದು ಫಿಟ್ ಇರಲಿಲ್ಲ. ರಣಜಿ ಸೀಸನ್​ ಈಗ ಆರಂಭವಾಗಿದೆ. ಅಲ್ಲಿ ಅವರು ಫಿಟ್ ಆಗಿದ್ದರೋ ಇಲ್ವೋ ಎಂಬುದು ಈಗ ಗೊತ್ತಾಗುತ್ತದೆ. ಇದಕ್ಕೆಲ್ಲಾ ಸಮಯ ಬೇಕು ಎಂದು ಹೇಳಿದ್ದಾರೆ. 

Advertisment

ರಣಜಿಯಲ್ಲಿ ಒಂದೆರಡು ಪಂದ್ಯಗಳಲ್ಲಿ ಶಮಿ ಅವರ ಫಿಟ್ ಏನು ಎನ್ನುವುದು ನಮಗೆ ಗೊತ್ತಾಗುತ್ತದೆ. ಅವರು ಫಿಟ್ ಆಗಿದ್ರೆ ಅಂತಹ ಒಳ್ಳೆ ಆಟಗಾರನನ್ನು ನಾವು ಏಕೆ ಕಡೆಗಣಿಸುತ್ತೇವೆ. ತಂಡಕ್ಕೆ ಆಯ್ಕೆ ಮಾಡೇ ಮಾಡುತ್ತೇವೆ. ಆಸ್ಟ್ರೇಲಿಯಾ ಟೂರ್​ಗೂ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ನಮ್ಮಲ್ಲೂ ಚರ್ಚೆ ಆಗಿತ್ತು. ಆದರೆ ಇಂಗ್ಲೆಂಡ್​ ಟೂರ್ ಬಳಿಕವೂ ಅವರು ಫಿಟ್ ಆಗಿರಲಿಲ್ಲ ಎಂದು ಅಜಿತ್ ಅಗರ್ಕರ್​ ಅವರು ಹೇಳಿದ್ದಾರೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

bcci president BCCI
Advertisment
Advertisment
Advertisment