/newsfirstlive-kannada/media/media_files/2025/10/17/rakshitha_bbk12-2025-10-17-16-08-07.jpg)
ರಕ್ಷಿತಾ ಬಿಗ್‌ಬಾಸ್ ಮನೆಗೆ ಬಂದ ಆರಂಭದಲ್ಲಿ ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವಳನ್ನು ತುಂಬಾ ಟಫ್ ಕಾಂಪಿಟೇಟರ್ ಅಂದಿದ್ದರು. ಇದೀಗ ಅದೇ ರಕ್ಷಿತಾನೇ ಇವರಿಬ್ಬರ ರಿಯಲ್ ಟಾರ್ಗೆಟ್ ಆಗಿದ್ದಾಳೆ. ಹೀಗಾಗಿದ್ಯಾಕೆ?.
ರಕ್ಷಿತಾ ಒಂದು ವಾರ ತಡವಾಗಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿಕೊಟ್ಟಿದ್ದರು. ಇದ್ದ ಟೈಂನಲ್ಲಿ ತಮ್ಮ ಹವಾ ಏನು ಅನ್ನೋದನ್ನು ತೋರಿಸಿದ್ದರು. ಟಾಸ್ಕ್‌ಗಳಲ್ಲಿಯೂ ಅವರು ಬೆಸ್ಟ್ ಇದ್ದಾರೆ ಅನ್ನೋದನ್ನು ಪ್ರೂವ್ ಮಾಡಿದರು. ಆದ್ರೀಗ ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರನ್ನು ಸುಖಾಸುಮ್ಮನೆ ಟಾರ್ಗೆಟ್ ಮಾಡ್ತಿದ್ದಾರೆ ಅನಿಸೋಕೆ ಶುರುವಾಗಿದೆ.
ರಕ್ಷಿತಾ ಎಲ್ಲರೂ ಮಲಗಿದ ಮೇಲೆ ಬಾತ್‌ರೂಂಗೆ ಹೋಗಿ ಕ್ಯಾಮೆರಾ ನೋಡಿಕೊಂಡು ಏನೇನೋ ಮಾತಾಡಿಕೊಂಡು ಇರುತ್ತಾರೆ. ಇದು ಪ್ರೇಕ್ಷಕರಿಗೂ ತಿಳಿದಿರೋದೆ. ಅಶ್ವಿನಿ ಹಾಗೂ ಜಾಹ್ನವಿ ಇದಕ್ಕೆ ದೆವ್ವದ ಬಣ್ಣ ಕಟ್ಟಿದ್ದಾರೆ. ರಕ್ಷಿತಾ ಗೆಜ್ಜೆ ಕಟ್ಟಿ ರಾರಾ.. ಹಾಡಿಗೆ ಕುಣಿಯುತ್ತಿದ್ರು ಅಂತ ಮನೆಯವರೆಲ್ಲರಲ್ಲೂ ಹಬ್ಬಿಸಿಕೊಂಡು ಬಂದಿದ್ದಾರೆ. ಇಷ್ಟು ಸಾಲದು ಎಂಬಂತೆ ತಾವೇ ಗೆಜ್ಜೆ ಸದ್ದು ಮಾಡಿ ಅದರ ಅನುಮಾನವನ್ನು ರಕ್ಷಿತಾ ಮೇಲೆ ಬರುವಂತೆಯೂ ಮಾಡಿದ್ದಾರೆ.
ಇದನ್ನೂ ಓದಿ:BBK12; ಮಿಡ್​ ವೀಕ್ ಎಲಿಮಿನೇಷನ್.. ದೊಡ್ಮನೆಯಿಂದ ಹೊರ ನಡೆದ ಮತ್ತೊಬ್ಬ ಕಂಟೆಸ್ಟೆಂಟ್, ಯಾರು?
ಇಷ್ಟು ಮಾತ್ರ ಸಾಲದು ಎಂಬಂತೆ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ರಕ್ಷಿತಾ ಜಾಹ್ನವಿಯನ್ನು, ಜಾಹ್ನವಿ ರಕ್ಷಿತಾರನ್ನು ಎಲಿಮಿನೇಷನ್‌ಗೆ ನಾಮಿನೇಟ್ ಮಾಡಿಕೊಂಡಿದ್ದರು. ಇದೇ ಇವತ್ತು ಬಿಗ್‌ಬಾಸ್ ಮನೆಯಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿದೆ. ಜಾಹ್ನವಿ ರಕ್ಷಿತಾಳಲ್ಲಿ ನಾಮಿನೇಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದಾಗ ಅವಳು ನೀವೇ ದೊಡ್ಡ ನಾಗವಲ್ಲಿ ಎಂದಿದ್ದಾಳೆ.
ಮಾತ್ರವಲ್ಲ ಅಶ್ವಿನಿ ಹಾಗೂ ಜಾಹ್ನವಿ ಗೆಜ್ಜೆ ಸದ್ದು ಮಾಡಿದ್ದನ್ನೂ ಪ್ರಸ್ತಾಪಿಸಿದ್ದಾಳೆ. ಇಷ್ಟಕ್ಕೇ ಅಶ್ವಿನಿ ಗೌಡ ಸಿಡಿದೆದ್ದಿದ್ದು, ನಿನ್ನ ನಾಟಕ ಎಲ್ಲ ಬಾತ್‌ರೂಂಲ್ಲಿ ಇಟ್ಕೋ ಈಡಿಯೆಟ್ ಎಂದು ಬೈದಿದ್ದಾರೆ ಮಾತ್ರವಲ್ಲ, ರಕ್ಷಿತಾಳ ಸೂಟ್‌ಕೇಸ್ ಎಳೆದು ತೋರಿಸಿ ಇದನ್ನು ನೋಡಿದ್ರೇನೆ ನೀನು ಎಲ್ಲಿಂದ ಬಂದವಳೆಂದು ತಿಳಿಯುತ್ತೆ ಎಂದು ಹೀಯಾಳಿಸಿದ್ದಾರೆ.
ಅಷ್ಟಕ್ಕೂ ಅಶ್ವಿನಿ ಹಾಗೂ ಜಾಹ್ನವಿ ರಕ್ಷಿತಾರನ್ನೇ ಟಾರ್ಗೆಟ್ ಮಾಡುತ್ತಿರುವುದೇಕೆ? ರಕ್ಷಿತಾಳದ್ದು ತಪ್ಪೇನಾದ್ರೂ ಇದೆಯಾ ಇದನ್ನು ನೋಡೋಕೆ ಇವತ್ತಿನ ಎಪಿಸೋಡ್ ನೋಡಲೇಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ