/newsfirstlive-kannada/media/media_files/2025/10/03/kantara-2025-10-03-09-56-04.jpg)
ಸಿನಿಮಾ ಬಿಡುಗಡೆಯ ಫಸ್ಟ್ ಡೇ ಅನ್ನೋದು ತುಂಬಾ ಇಂಪಾರ್ಟೆಂಟ್. ಇದು ಸಿನಿಮಾದ ಕ್ರೇಜ್ ಯಾವ ಮಟ್ಟಿಗಿದೆ ಅನ್ನೋದನ್ನು ತೋರಿಸೋ ದಿನ. ಅದರಲ್ಲೂ ಬುಕ್ ಮೈ ಶೋನಲ್ಲಿ ಫಸ್ಟ್ ಡೇ ಎಷ್ಟು ಟಿಕೆಟ್ ಸೇಲಾಗಿದೆ ಅಂತಾ ಎಲ್ಲರಿಗೂ ಕುತೂಹಲ ಇರುತ್ತೆ.
ಆ ಲೆಕ್ಕಾಚಾರದಲ್ಲಿ ಕಾಂತಾರ ಚಾಪ್ಟರ್ 1 ದೊಡ್ಡ ದಾಖಲೆ ಬರೆದಿದೆ. ಮೂಲಗಳ ಪ್ರಕಾರ ನೆನ್ನೆ ಒಂದೇ ದಿನದಲ್ಲಿ ಬರೋಬ್ಬರಿ 1.28 ಮಿಲಿಯನ್ ಟಿಕೆಟ್ ಸೇಲಾಗಿದೆ. ಇದು ಕನ್ನಡ ಸಿನಿಮಾ ಇತಿಹಾಸದಲ್ಲೇ ಅತ್ಯಧಿಕ ನಂಬರ್ ಆಗಿದೆ.
ಕಾಂತಾರ ಚಾಪ್ಟರ್ 1 ಸಿನಿಮಾಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ನಿರೀಕ್ಷೆಗೂ ಮೀರಿದ ರಿಪೋರ್ಟ್ ಸಿನಿಮಾಗೆ ಸಿಕ್ಕಿದೆ. ಗಂಟೆಗೆ 80 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ಕಿಂಗ್ ಆಗ್ತಿದೆ. ಈ ಮೂಲಕ ದೊಡ್ಡ ಕ್ರೇಜ್ ಕ್ರಿಯೇಟ್ ಆಗಿದ್ದು, ಟಿಕೆಟ್ಗೆ ಸಿಗದಂತಾಗಿದೆ. ಎಷ್ಟೋ ಜನ ಟಿಕೆಟ್ ಸಿಗದೇ, ಥಿಯೇಟರ್​ನಿಂದ ವಾಪಸ್ ಹೋಗುತ್ತಿರೋ ಸನ್ನಿವೇಶಗಳು ಸೃಷ್ಟಿಯಾಗಿದೆ. ಬಹುತೇಕ ಶೋಗಳು ಹೌಸ್ ಫುಲ್ ಆಗಿವೆ.
ಇದನ್ನೂ ಓದಿ:ಕಾಂತಾರ ಯಶಸ್ಸು ಕಂಡರೂ ರಿಷಭ್ ಶೆಟ್ಟಿ ಸ್ನೇಹಿತ ರಕ್ಷಿತ್ ಬಂದಿಲ್ಲವೇಕೆ? ಎಲ್ಲಿ ಹೋದರು ರಕ್ಷಿತ್ ಶೆಟ್ಟಿ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ