Advertisment

ಕಾಂತಾರ ಪ್ರೀಕ್ವೆಲ್ ಬಿಗ್​ ಅಪ್​ಡೇಟ್ಸ್​.. ಟ್ರೈಲರ್ ರಿಲೀಸ್ ಮಾಡೋ ದಿನ, ಸಮಯ ಯಾವುದು?

ಕಾಂತಾರ ಪ್ರೀಕ್ವೆಲ್​​ಗಾಗಿ ಅಭಿಮಾನಿಗಳು ಕಾತುರದಿಂದ ಇದ್ದರು. ಇದರ ನಡುವೆ ಚಿತ್ರತಂಡ ಕಾಂತಾರ ಪ್ರೀಕ್ವೆಲ್ ಬಗ್ಗೆ ಬಿಗ್​ ಅಪ್​ಡೇಟ್​ ಕೊಟ್ಟಿದೆ. ಮುಂದಿನ ವಾರವೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದ್ದು ಯಾವ ದಿನ, ಯಾವ ಸಮಯ ಎನ್ನುವ ಮಾಹಿತಿ ರಿವೀಲ್ ಮಾಡಲಾಗಿದೆ.

author-image
Bhimappa
RISHABH_SHETTY (1)
Advertisment

ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾ ಕಾಂತಾರ. ಈಗಾಗಲೇ ಭಾಗ-2 ಎಲ್ಲರ ಮನ ಗೆದ್ದಿದ್ದು ಈಗ ಪ್ರೀಕ್ವೆಲ್​​ಗಾಗಿ ಅಭಿಮಾನಿಗಳು ಕಾತುರದಿಂದ ಇದ್ದರು. ಇದರ ನಡುವೆ ಚಿತ್ರತಂಡ ಕಾಂತಾರ ಪ್ರೀಕ್ವೆಲ್ ಬಗ್ಗೆ ಬಿಗ್​ ಅಪ್​ಡೇಟ್​ ಕೊಟ್ಟಿದೆ. ಮುಂದಿನ ವಾರವೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದ್ದು ಯಾವ ದಿನ, ಯಾವ ಸಮಯ ಎನ್ನುವ ಮಾಹಿತಿ ರಿವೀಲ್ ಮಾಡಲಾಗಿದೆ. 

Advertisment

ಸ್ಯಾಂಡಲ್​ವುಡ್​ನ ಕಾಂತಾರ ಮಹತ್ವಾಕಾಂಕ್ಷೆ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ಕೆಲವು ದಿನಗಳು ಉಳಿದಿವೆ. ಅಕ್ಟೋಬರ್​ 2, ಅದೇ ಗಾಂಧಿಜಯಂತಿ ದಿನ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಬೆಳ್ಳಿ ತೆರೆ ಮೇಲೆ ಅಬ್ಬರಿಸಲಿದ್ದಾರೆ. ಸಾಕಷ್ಟು ನಿರೀಕ್ಷೆಗಳನ್ನು ಹೊತ್ತಿರುವ ಡಿವೈನ್ ಸ್ಟಾರ್ ಮತ್ತೊಂದು ಗೆಲುವು ಭುಜದ ಹೊತ್ತುಕೊಳ್ಳಲ್ಲಿದ್ದಾರೆ. ಕಾಂತಾರ ಪ್ರೀಕ್ವೆಲ್​ನಲ್ಲಿ ಕಥೆ ಏನಿರಬಹುದು ಎನ್ನುವುದು ಎಲ್ಲರ ಕುತೂಹಲವಾಗಿದೆ. ಇದರ ನಡುವೆ ಟ್ರೈಲರ್​ ಡೇಟ್​ ಔಟ್​ ಆಗಿದೆ. 

ಹೊಂಬಾಳೆ ಫಿಲಂನವರ ಬಿಗ್​ ಬಜೆಟ್ ಮೂವಿಯಾಗಿರುವ ಕಾಂತಾರ ಪ್ರೀಕ್ವೆಲ್ ಸಿನಿಮಾದ ಟ್ರೈಲರ್​ ಅನ್ನು ಸೆಪ್ಟೆಂಬರ್​ 22 ರಂದು ಮಧ್ಯಾಹ್ನ 12: 45 ನಿಮಿಷಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಸ್ವತಹ ಹೊಂಬಾಳೆ ಫಿಲಂ ಅಧಿಕೃತವಾದ ಮಾಹಿತಿ ನೀಡಿದೆ. ಇದರ ಜೊತೆಗೆ ಅಕ್ಟೋಬರ್​ 2 ರಂದು ವಿಶ್ವದ್ಯಾಂತ ರಿಲೀಸ್ ಆಗಲಿದೆ ಎಂದು ಹೇಳಿದೆ. 

ಇದನ್ನೂ ಓದಿ:18 ಇನ್ನಿಂಗ್ಸ್, 52 ಬೌಂಡರಿ, 46 ಸಿಕ್ಸರ್ಸ್​.. ಅಭಿಷೇಕ್ ಶರ್ಮಾ ಇವತ್ತೂ ಅಬ್ಬರದ ಬ್ಯಾಟಿಂಗ್ ಫಿಕ್ಸ್​!

Advertisment

rukmini_vasanth_KANTARA

ಗಾಂಧಿ ಜಯಂತಿಯಂದು ಸರ್ಕಾರಿ ರಜೆ ಇರುವುದರಿಂದ ಕಾಂತಾರ ಸಿನಿಮಾಕ್ಕೆ ಬಿಗ್ ಅಡ್ವಂಟೇಜ್. ಅಕ್ಟೋಬರ್ 2 ಗುರುವಾರದ ಆದರೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಥಿಯೇಟರ್​ಗಳು ಸಮಾನ್ಯವಾಗಿ ಹೌಸ್​ ಫುಲ್ ಆಗೋದು ಪಕ್ಕಾ. ಹೀಗಾಗಿ ಹೊಂಬಾಳೆ ಫಿಲಂ ದೊಡ್ಡ ಲಾಭದ ನಿರೀಕ್ಷೆಯಲ್ಲಿದೆ. 

ಈಗಾಗಲೇ ಕಾಂತಾರ ಭಾಗ-2 ಸೂಪರ್ ಹಿಟ್ ಆಗಿದ್ದು ದೇಶದ್ಯಾಂತ ಹೆಚ್ಚು ವೀಕ್ಷಣೆ ಕಂಡಿತ್ತು. ಈ ಸಿನಿಮಾವನ್ನು ರಿಷಭ್ ಶೆಟ್ಟಿಯವರೇ ನಿರ್ದೇಶನ ಮಾಡಿ ಅಭಿನಯಿಸಿದ್ದಾರೆ. ರುಕ್ಮಿಣಿ ವಸಂತ್‌ ಕನಕವತಿ ಪಾತ್ರದಲ್ಲಿ ನಟಿಸಿದ್ದಾರೆ. ಇದು ಪ್ಯಾನ್​ ಇಂಡಿಯಾ ಮೂವಿಯಾಗಿದ್ದು ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಒಟ್ಟು 7 ಭಾಷೆಗಳಲ್ಲಿ ಕಾಂತಾರ ಪ್ರೀಕ್ವೆಲ್ ಅಬ್ಬರಿಸಲಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada Movies Rishab Shetty Kantara Movie
Advertisment
Advertisment
Advertisment