/newsfirstlive-kannada/media/media_files/2025/09/19/abhishek_sharma-5-2025-09-19-15-38-14.jpg)
ಅಭಿಷೇಕ್ ಶರ್ಮಾ ಕ್ರೀಸ್​ನಲ್ಲಿ ಇದ್ದೊಷ್ಟು ಹೊತ್ತು ಫ್ಯಾನ್ಸ್​ಗೆ ಎಂಟರ್​ಟೈನ್ಮೆಂಟ್​. ಬೌಲರ್​​ಗಳಿಗೆ ನರಕ ಫಿಕ್ಸ್. ಯಾಕಂದ್ರೆ, ಈತ ಸಿಂಗಲ್ ರನ್ಸ್ ಕದೆಯೋಕಿಂತ ಹೆಚ್ಚು ಸಿಕ್ಸರ್​, ಬೌಂಡರಿಗಳಿಂದಲೇ ರನ್ ಡೀಲ್ ಮಾಡ್ತಾರೆ. ಆದ್ರೆ, ಅಭಿಷೇಕ್ ಶರ್ಮಾರ ಫೈರಿ ಬ್ಯಾಟಿಂಗ್ ಹಿಂದೆ ಒಂದು ಸೀಕ್ರೆಟ್ ಇದೆ?.
ಅಭಿಷೇಕ್​ ಶರ್ಮಾ.. ಸದ್ಯ ವಿಶ್ವ ಕ್ರಿಕೆಟ್​​ ಲೋಕದ ಸೆನ್ಸೇಷನ್​. ಆಟ, ಆ್ಯಟಿಡ್ಯೂಡ್​ ಎರಡರಲ್ಲೂ ಗಮನ ಸೆಳೆದಿರೋ ಈತ, ಆನ್​ಫೀಳ್ಡ್​ನಲ್ಲಿ ಫಿಯರ್ ಲೆಸ್ ಆಟದಿಂದಲೇ ಗಮನ ಸೆಳೆದಾತ. ಥೇಟ್​ ಯುವಿಯಂತೆಯೇ ಎದುರಾಳೀ ಬೌಲರ್​ಗಳ ಮೇಲೆ ಎರಗುವ ಅಭಿಷೇಕ್ ಪಕ್ಕ ಫಿಯರ್​ ಲೆಸ್ ಬ್ಯಾಟ್ಸ್​ಮನ್​.
ಫೇಸ್​ ಮಾಡಿದ ಫಸ್ಟ್​ ಬಾಲ್​​ನಿಂದಲೇ ಬೌಂಡರಿ,​​ ಸಿಕ್ಸರ್​ಗಟ್ಟೋಕೆ​ ಧಮ್​ ಬೇಕು. ಪಾಕ್​​ನಂಥ ಶಾಹೀದ್ ಆಫ್ರಿದಿಯಂತ ಬೌಲರ್​​ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್, ಬೌಂಡರಿ, ಸಿಕ್ಸರ್ ಸಿಡಿಸೋಕೆ ಎಂಟೆದೆ ಗುಂಡಿಗೆನೇ ಬೇಕು. ಈ ಫಿಯರ್​​ಲೆಸ್​ ಆ್ಯಟಿಟ್ಯೂಡ್​, ಬ್ರೇವ್​ ಕ್ಯಾರೆಕ್ಟರ್​ಗೆ ಫ್ಯಾನ್ಸ್​ ಸಖತ್ ಫಿದಾ ಆಗಿದ್ದಾರೆ. ದಿಗ್ಗಜರು ಕೊಂಡಾಡ್ತೊದ್ದಾರೆ. ಮೋಸ್ಟ್​ ಡೇಂಜರಸ್ ಆಗಿ ಕಾಣ್ತಿರುವ ಅಭಿಷೇಕ್​​ ಶರ್ಮಾರ ಬ್ಯಾಟಿಂಗ್ ನೋಡಿದ ಬೌಲರ್​​ಗಳು ಬೆವರುತ್ತಿದ್ದಾರೆ.
ಬೌಂಡರಿ, ಸಿಕ್ಸರ್​ಗಳು ಅಂದ್ರೆ ಅಭಿಷೇಕ್​ಗೆ ಲೆಕ್ಕಕ್ಕಿಲ್ಲ..!
ಅಭಿಷೇಕ್ ಶರ್ಮಾ, ಬ್ಲಾಸ್ಟಿಂಗ್ ಓಪನಿಂಗ್ ನೀಡೋದ್ರಲ್ಲಿ ಎತ್ತಿದ ಕೈ. ಫಸ್ಟ್ ಬಾಲ್ ಟು ಲಾಸ್ಟ್​ ಬಾಲ್​.. ಬೌಂಡರಿ ಸಿಕ್ಸರ್​ಗಳಿಂದ ರನ್ ಕೊಳ್ಳೆ ಹೊಡೆಯೋದೆ ಈತನ ಸ್ಪೆಷಾಲಿಟಿ. ಇದೇ ಕಾರಣಕ್ಕೆ ಟಿ20 ಕ್ರಿಕೆಟ್​​ನಲ್ಲಿ ಟ್ರೇಡ್ ಮಾರ್ಕ್ ಸೃಷ್ಟಿಸಿರುವ ಅಭಿಷೇಕ್ ಶರ್ಮಾ, 195.40ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸ್ತಾರೆ. ಇದು ಅಭಿಷೇಕ್ ಶರ್ಮಾರ ರಣಭೀಕರ ಆಟಕ್ಕೆ ಬೆಸ್ಟ್ ಎಕ್ಸಾಂಪಲ್.
ಸಾಲಿಡ್ ಓಪನಿಂಗ್ ನೀಡಿರುವ ಅಭಿಷೇಕ್ ಶರ್ಮಾ, 18 ಇನ್ನಿಂಗ್ಸ್​ಗಳಲ್ಲೇ 52 ಬೌಂಡರಿ, 46 ಸಿಕ್ಸರ್​ ಸಿಡಿಸಿದ್ದಾರೆ. ಆದ್ರೆ, ಇದು ಸುಲಭದಲ್ಲ. ಇದನ್ನು ಸಲಭವಾಗಿಸಿರುವ ಅಭಿಷೇಕ್ ಶರ್ಮಾ, ಪ್ರತಿ ಮೂರು ಬಾಲ್​​​ಗೊಂದು ಬೌಂಡರಿ ಸಿಡಿಸ್ತಾರೆ. ಇದು ಆತನ ಆಟದ ವೈಖರಿಯನ್ನೇ ಪ್ರತಿಬಿಂಬಿಸ್ತಿಲ್ಲ. ನಯಾ ಸಿಕ್ಸ್​ ಹಿಟ್ಟಿಂಗ್ ಮಿಷನ್ ಅನ್ನೋದನ್ನು ಸಾರಿ ಸಾರಿ ಹೇಳುತ್ತೆ.
ಅಭಿಷೇಕ್ ಸಿಕ್ಸ್​ ಹಿಟ್ಟಿಂಗ್ ಹಿಂದಿದೆ ಸೀಕ್ರೆಟ್​..!
ಕ್ರಿಕೆಟ್​ನಲ್ಲಿ ರನ್ ಗಳಿಸೋಕೆ ಎರಡು ವಿಧ ಇದೆ. ಒಂದು ಟೆಕ್ನಿಕಲ್​, ಮತ್ತೊಂದು ಪವರ್. ಈ ಟೆಕ್ನಿಕಲಿ ರನ್ ಗಳಿಸೋದು ಸುಲಭ. ಬ್ಯಾಟ್ ಟೈಮಿಂಗ್, ಪರ್ಫೆಕ್ಟ್​ ಶಾಟ್ ಸೆಲೆಕ್ಷನ್ ಮಾಡಿದ್ರೆ, ಸುಲಭಕ್ಕೆ ಬೌಂಡರಿ ಬರುತ್ತೆ. ಆದ್ರೆ, ಬುಲೆಟ್ ಪವರ್​ನಲ್ಲಿ ಚೆಂಡು ಬೌಂಡರಿ ಗೆರೆ ದಾಟಬೇಕು ಅಂದ್ರೆ, ಹ್ಯಾಂಡ್ ಪವರ್ ಮುಖ್ಯ. ಹಿಟ್ಟಿಂಗ್​ ಎಬಿಲಿಟಿ ಇರಬೇಕು. ಅಭಿಷೇಕ್ ಶರ್ಮಾನ ನೋಡಿದ್ರೆ, ಪವರ್ ಹಿಟ್ಟಿಂಗ್ ಮಾಡೋ ತಾಕತ್ತಿದೆಯಾ ಎಂಬ ಅನುಮಾನ ಸಹಜವಾಗೇ ಮೂಡುತ್ತೆ. ಆದ್ರೆ, ಇದನ್ನಾ ಸಾಧ್ಯವಾಗಿಸಿರುವ ಅಭಿಷೇಕ್​​, ಸುಲಭಕ್ಕೆ ಬೌಂಡರಿ, ಸಿಕ್ಸರ್ ಸಿಡ್ತಿದ್ದಾರೆ. ಇದಕ್ಕೆ ಕಾರಣ ವರ್ಕೌಟ್.
ಜಿಮ್​​ನಲ್ಲಿ ಪ್ರತಿದಿನ ಬೆವರಿಳಿಸ್ತಾರೆ ಅಭಿಷೇಕ್ ಶರ್ಮಾ!
ಸಾಲಿಡ್​ ಬ್ಯಾಟಿಂಗ್ ಟೆಕ್ನಿಕ್ ಹೊಂದಿರುವ ಅಭಿಷೇಕ್ ಶರ್ಮಾ, ರಾಕೆಟ್ ವೇಗದಲ್ಲಿ ಬೌಂಡರಿ ಗೆರೆದಾಟಿಸ್ತಾರೆ. ಇದಕ್ಕೆ ಕಾರಣ ಮಸಲ್ಸ್​ ಪವರ್​. ಇದಕ್ಕಾಗಿಯೇ ಪ್ರತಿದಿನ ಜಿಮ್​​ನಲ್ಲಿ ಅಭಿಷೇಕ್ ಶರ್ಮಾ ಪ್ರತಿದಿನ ವರ್ಕೌಟ್ ಮಾಡ್ತಾರೆ.
ಮಸಲ್​​ ಹಾಗೂ ಫಿಟ್ನೆಸ್​ಗಾಗಿ ಪ್ರತಿದಿನ ವರ್ಕೌಟ್ ಮಾಡೋ ಅಭಿಷೇಕ್ ಶರ್ಮಾ, ಜಿಮ್​​ನಲ್ಲಿ ಡೆಡ್ ಲಿಫ್ಟ್, ಫುಷ್​ ಅಪ್ಸ್​, Bench Press, Overhead Pressನತ್ತಲೇ ಹೆಚ್ಚು ಫೋಕಸ್ ಮಾಡ್ತಾರೆ. ಇದೇ ವರ್ಕೌಟ್​​​ಗಳು ಆನ್​​ಫೀಲ್ಡ್​ನಲ್ಲಿ ಅಭಿಷೇಕ್, ಸಿಕ್ಸರ್​ಗಳ ಸುರಿಮಳೆ ಸುರಿಸಲು ನೆರವಾಗುತ್ತೆ.
ಕ್ರಿಕೆಟ್ ಅನ್ನೋದು ಸ್ಕಿಲ್​ ಫುಲ್ ಗೇಮ್​. ಈ ಗೇಮ್​ನಲ್ಲಿ ಸ್ಕಿಲ್ಸ್​ ಜೊತೆಗೆ ಮಸಲ್ಸ್​ ಪವರ ಇದ್ರಷ್ಟೇ, ಟಿ20 ಕ್ರಿಕೆಟ್​​ನಲ್ಲಿ ಸಕ್ಸಸ್ ಕಾಣಲು ಸಾಧ್ಯ. ಇದೇ ಸೂತ್ರವೇ ಈಗ ಅಭಿಷೇಕ್ ಸಕ್ಸಸ್ ಮಂತ್ರವಾಗಿದೆ. ಅದೇನೇ ಆಗಿರಲಿ, ಸದ್ಯ ಟೀಮ್ ಇಂಡಿಯಾದ ಡಿಸ್ಟ್ರಕ್ಟಿವ್ ಓಪನರ್ ಆಗಿ ಮಿಂಚ್ತಿರುವ ಅಭಿಷೇಕ್, ಇದೇ ಹಾದಿಯಲ್ಲಿ ಮುನ್ನಡೆಯಲಿ, ಟೀಮ್ ಇಂಡಿಯಾಗೆ ಮತ್ತಷ್ಟು ದಿಗ್ವಿಜಯಗಳು ತಂದು ಕೊಡಲಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ