/newsfirstlive-kannada/media/media_files/2025/09/21/kantara_trailar_new-2025-09-21-18-45-52.jpg)
ಹೊಂಬಾಳೆ ಫಿಲಂನವರ ಸ್ಯಾಂಡಲ್​ವುಡ್​ನ ಬಿಗ್​ ಬಜೆಟ್ ಮೂವಿಯಾಗಿರುವ ಕಾಂತಾರ ಪ್ರೀಕ್ವೆಲ್ ಸಿನಿಮಾದ ಟ್ರೈಲರ್​ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸೆಪ್ಟೆಂಬರ್​ 22 ಅಂದರೆ ಇಂದು ಮಧ್ಯಾಹ್ನ ಸರಿಯಾಗಿ 12: 45 ನಿಮಿಷಕ್ಕೆ ಕಾಂತಾರ-1 ಮೂವಿಯ ಟ್ರೈಲರ್ ರಿಲೀಸ್ ಆಗಲಿದೆ. ಈ ಬಗ್ಗೆ ಸ್ವತಹ ಹೊಂಬಾಳೆ ಅಧಿಕೃತ ಮಾಹಿತಿ ನೀಡಿದೆ. ವಿಶೇಷ ಏನೆಂದರೆ ಪ್ಯಾನ್ ಇಂಡಿಯಾ ಸ್ಟಾರ್ಸ್​ ಆಯಾಯ ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರೆ.
ಇಂದು ಕಾಂತಾರ ಪ್ರೀಕ್ವೆಲ್ ಸಿನಿಮಾದ ಟ್ರೈಲರ್​ ಅನ್ನು ಆಯಾಯ ಭಾಷೆಯ ಬಿಗ್ ಸ್ಟಾರ್ ನಟರು ಬಿಡುಗಡೆ ಮಾಡುತ್ತಿದ್ದಾರೆ. ಅಂದರೆ ತೆಲುಗಿನಲ್ಲಿರುವ ಟ್ರೈಲರ್​ ಅನ್ನು ರೆಬೆಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ಅವರು ರಿಲೀಸ್ ಮಾಡುತ್ತಿದ್ದಾರೆ. ಅದರಂತೆ ಮಲಯಾಲಂ ಭಾಷೆಯ ಟ್ರೈಲರ್ ಅನ್ನು ಪ್ರಭಾಸ್ ಜೊತೆ ಸಲಾರ್​ನಲ್ಲಿ ನಟಿಸಿರುವ ಪೃಥ್ವಿರಾಜ್ ಸುಕುಮಾರನ್ ಅವರು ರಿಲೀಸ್ ಮಾಡುತ್ತಾರೆ.
ಆದರೆ ಕನ್ನಡದಲ್ಲಿರುವ ಕಾಂತಾರ ಮೂವಿಯ ಟ್ರೈಲರ್ ಅನ್ನು ಕನ್ನಡ ಜನತೆ ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಏಕೆಂದರೆ ಕಾಂತಾರ ಸಿನಿಮಾಗೆ ದೊಡ್ಡ ಯಶಸ್ಸು ಕೊಟ್ಟ ಹಿನ್ನೆಲೆಯಲ್ಲಿ ಕನ್ನಡಿಗರಿಂದಲೇ ಕಾಂತಾರ ಪ್ರೀಕ್ವೆಲ್ ರಿಲೀಸ್ ಮಾಡುವುದಾಗಿ ಸಿನಿಮಾ ಟೀಮ್ ಮಾಹಿತಿ ನೀಡಿದೆ. ಇದರ ಜೊತೆಗೆ ನಿಮ್ಮ ಪ್ರೀತಿಯೇ ನಮಗೆ ದೊಡ್ಡ ಶಕ್ತಿ ಎಂದು ಚಿತ್ರತಂಡ ಹೇಳಿರುವುದು ತುಂಬಾ ವಿಶೇಷ ಎನಿಸಿದೆ.
ತೆಲುಗು, ಮಲಯಾಲಂ ಆಯ್ತು ಇನ್ನು ತಮಿಳು ಕಾಂತಾರ ಪ್ರೀಕ್ವೆಲ್ ಟ್ರೈಲರ್ ಅನ್ನು ಶಿವಕಾರ್ತಿಕೇಯನ್ ಅವರು ಬಿಡುಗಡೆ ಮಾಡುತ್ತಿದ್ದಾರೆ. ಹಾಗೇ ಹಿಂದಿ ಅಥವಾ ಬಾಲಿವುಡ್ ಸಿನಿ ರಂಗದಲ್ಲಿ ಬಿಗ್ ಸ್ಟಾರ್ ಆಗಿರುವ ​ಹೃತಿಕ್ ರೋಷನ್ ಅವರಿಂದ ಹಿಂದಿ ವರ್ಷಿನ್​ ಟ್ರೈಲರ್​ ಅನ್ನು ರಿಲೀಸ್ ಮಾಡಲಾಗುತ್ತಿದೆ. ಈ ಸಿನಿಮಾ ಕುರಿತು ಅಭಿಮಾನಿಗಳಲ್ಲಿರುವ ಕ್ರೇಜ್ ಅಷ್ಟಿಷ್ಟಲ್ಲ. ಟ್ರೈಲರ್ ನೋಡಲು ಸಿನಿಪ್ರಿಯರು ಕಾತುರದಲ್ಲಿದ್ದಾರೆ. ಟ್ರೈಲರ್ ಬಿಡುಗಡೆಗೆ ಈಗಾಗಲೇ ಸಕಲ ಸಿದ್ಧತೆ ಆಗಿದೆ. ಕೆಲವೇ ಗಂಟೆಗಳಲ್ಲಿ ಕಾಂತಾರ ಟ್ರೈಲರ್​ ಔಟ್ ಆಗಲಿದೆ.
ಅಕ್ಟೋಬರ್ 2 ಅಂದರೆ ಗಾಂಧಿ ಜಯಂತಿ, ಅಂದು ಗುರುವಾರ ದಿನ ಸಿನಿಮಾ ರಿಲೀಸ್ ಆಗಲಿದೆ. ಆದರೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಥಿಯೇಟರ್​ಗಳು ಸಮಾನ್ಯವಾಗಿ ಹೌಸ್​ ಫುಲ್ ಆಗೋದು ಪಕ್ಕಾ. ಹೀಗಾಗಿ ಹೊಂಬಾಳೆ ಫಿಲಂ ದೊಡ್ಡ ಲಾಭದ ನಿರೀಕ್ಷೆಯಲ್ಲಿದೆ. ಕಾಂತಾರ ಭಾಗ-2 ಸೂಪರ್ ಹಿಟ್ ಆಗಿದ್ದು ಹೆಚ್ಚು ವೀಕ್ಷಣೆ ಕಂಡಿತ್ತು. ಈ ಸಿನಿಮಾವನ್ನು ರಿಷಭ್ ಶೆಟ್ಟಿಯವರೇ ನಿರ್ದೇಶನ ಮಾಡಿ ಅಭಿನಯಿಸಿದ್ದಾರೆ. ರುಕ್ಮಿಣಿ ವಸಂತ್ ಕನಕವತಿ ಪಾತ್ರದಲ್ಲಿ ನಟಿಸಿದ್ದಾರೆ. ಇದು ಪ್ಯಾನ್​ ಇಂಡಿಯಾ ಮೂವಿಯಾಗಿದ್ದು ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಒಟ್ಟು 7 ಭಾಷೆಗಳಲ್ಲಿ ಕಾಂತಾರ ಪ್ರೀಕ್ವೆಲ್ ಅಬ್ಬರಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ