/newsfirstlive-kannada/media/media_files/2025/09/21/megha_shetty-2025-09-21-15-47-46.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗಲಿದೆ. ಕಿಚ್ಚ ಸುದೀಪ್ ಅವರು ತಮ್ಮ ಸಿನಿಮಾಗಳ ಶೂಟಿಂಗ್ ಪೂರ್ಣಗೊಳಿಸಿ ಬಿಗ್ ಬಾಸ್ ನಡೆಸಿಕೊಡಲು ಎಲ್ಲ ತಯಾರಿಯಲ್ಲಿದ್ದಾರೆ. ಈಗಾಗಲೇ ಈ ಬಿಗ್ ರಿಯಾಲಿಟಿ ಶೋಗೆ ಹಲವಾರ ಹೆಸರು ಫೈನಲ್ ಆಗಿದೆ ಎನ್ನಲಾಗಿದೆ. ಅದರಲ್ಲಿ ನಟಿ ಮೇಘಾ ಶೆಟ್ಟಿ ಕೂಡ ಒಬ್ಬರು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸ್ವತಹ ಮೇಘಾ ಶೆಟ್ಟಿ ಅವರೇ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಿಗ್ ಬಾಸ್​ ಸೀಸನ್ 12ಕ್ಕೆ 18 ಸ್ಪರ್ಧಿಗಳ ಹೆಸರು ಫೈನಲ್ ಆಗಿದೆ ಎಂದು ಹೇಳಲಾಗುತ್ತಿದ್ದು ಈ ಸ್ಪರ್ಧಿಗಳ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಹೆಸರುಗಳಲ್ಲಿ ಮೇಘಾ ಶೆಟ್ಟಿ ಅವರ ಹೆಸರು ಕೂಡ ಸೇರಿಕೊಂಡಿದೆ. ಬಿಗ್ ಬಾಸ್ ಪ್ರೇಕ್ಷಕರು ಕೂಡ ಸ್ಪರ್ಧಿಗಳು ಯಾರು ಯಾರು ಇರಬಹುದು ಎನ್ನುವ ಕುತೂಹಲದಲ್ಲಿದ್ದಾರೆ. ಆದರೆ ವಾಹಿನಿ ಮಾತ್ರ ಇದುವರೆಗೂ ಒಂದು ಕ್ಲೂ ಕೂಡ ಕೊಟ್ಟಿಲ್ಲ. ಸದ್ಯಕ್ಕೆ ಮಾತ್ರ ಸಸ್ಪೆನ್ಸ್​ ಆಗಿ ಇಟ್ಟಿದೆ.
ಬಿಬಿಕೆ12 ಶೋನಲ್ಲಿ ಮೇಘಾ ಶೆಟ್ಟಿ ಭಾಗವಹಿಸುತ್ತಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಮೊದಲ ರಿಯಾಕ್ಷನ್ ಕೊಟ್ಟಿರುವ ಮೇಘಾ ಶೆಟ್ಟಿ ಅವರು, ನಾನು ಬಿಗ್ ಬಾಸ್​ಗೆ ಹೋಗುತ್ತಿಲ್ಲ. ನಾನು ಬಿಗ್ ಬಾಸ್​ಗೆ ಹೋಗುವುದು ಇದ್ದರೇ ನಾನೇ ಹೇಳುತ್ತೇನೆ. ಈಗಂತೂ ಹೋಗುತ್ತಿಲ್ಲ. ದಯವಿಟ್ಟು ಈ ಸುದ್ದಿ ಹಬ್ಬಿಸೋದು ನಿಲ್ಲಿಸಿ ಎಂದು ಹೇಳಿದ್ದಾರೆ. ಈ ಬಗ್ಗೆ ತಮ್ಮ ಇನ್​​ಸ್ಟಾದಲ್ಲಿಯೂ ಮಾಹಿತಿ ನೀಡಿದ್ದಾರೆ.
ಪ್ರತಿ ವರ್ಷ ಬಿಗ್ ಬಾಸ್ ಆರಂಭವಾಗುವುದಕ್ಕೂ ಮೊದಲೇ ಯಾರು ಯಾರು ಮನೆಯೊಳಗೆ ಹೋಗುತ್ತಾರೆ ಎಂದು ಹೆಸರುಗಳು ಓಡಾಡುತ್ತವೆ. 12ನೇ ಸೀಸನ್​ಗೆ 18 ಹೆಸರುಗಳ ಲಿಸ್ಟ್​​ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಮೇಘಾ ಶೆಟ್ಟಿ ಹೆಸರು ಕೂಡ ಇದ್ದಿದ್ದರಿಂದ ಅವರು ಈ ಕುರಿತು ಮೊದಲ ರಿಯಾಕ್ಷನ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ