Advertisment

ಟುಕ್​ ಟುಕ್ ಪಾಕ್​.. ರಿವೇಂಜ್​​ಗೆ ಕಾಯ್ತಿರೋ ಇವ್ರ ಕತೆ ದೊಡ್ಡದೇ ಇದೆ..!

ಮತ್ತೊಂದು ಮೆಗಾ ಬ್ಯಾಟಲ್​ಗೆ ವೇದಿಕೆ ಸಜ್ಜಾಗಿದೆ. ಹ್ಯಾಡ್ ಶೇಕ್ ಅಪಮಾನ. ಸೋಲಿನ ಮುಖಭಂಗಕ್ಕೆ ಪಾಕ್​, ರಿವೇಂಜ್ ತೆಗೆದುಕೊಳ್ಳಲು ಕಾಯ್ತಿದೆ. ಅನ್​ಸ್ಟಾಪಬಲ್ ಟೀಮ್ ಇಂಡಿಯಾ ಎದುರು ಟುಕ್ ಟುಕ್ ಪಾಕ್, ಗೆಲ್ಲೋದು ಕನಸಲ್ಲೂ ಸಾಧ್ಯವಿಲ್ಲ.

author-image
Ganesh Kerekuli
pakisthan cricket
Advertisment

ಇಂಡೋ, ಪಾಕ್ ಸೂಪರ್​-4 ಮ್ಯಾಚ್​ಗೆ ಕೌಂಟ್​ಡೌನ್ ಶುರುವಾಗಿದೆ. ಸೂಪರ್​ ಸಂಡೇಯ ಸೂಪರ್​ ಫೈಟ್​​​​​​​​, ಟೀಮ್ ಇಂಡಿಯಾಗೆ ಸೂಪರ್ ಸಂಡೇ ಆಗೋದ್ರಲ್ಲಿ ಡೌಟಿಲ್ಲ. ಕಳೆದ ಭಾನುವಾರವಷ್ಟೇ ಪಾಕ್​ ಎದುರು ದಂಡೆಯಾತ್ರೆ ನಡೆಸಿದ್ದ ಟೀಮ್ ಇಂಡಿಯಾ, ಈ ಸಲನೂ ಅದೇ ರಿಪೀಟ್ ಮಾಡೋ ಉತ್ಸುಕದಲ್ಲಿದೆ. ಅತ್ತ ಹ್ಯಾಡ್​ ಶೇಕ್​ ನೀಡದ ಮುನಿಸಿನಲ್ಲಿರುವ ಪಾಕ್​, ಈ ಸಲ ಟೀಮ್ ಇಂಡಿಯಾ ಎದುರು ಗೆದ್ದು ಸೇಡು ತೀರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಇದು ಪಾಕ್​​ಗೆ ಸಾಧ್ಯವಾಗದ ಕೆಲಸ.

Advertisment

ಇದನ್ನೂ ಓದಿ:ಬಿಸಿಸಿಐಗೆ CSK ಮಾಜಿ ಸ್ಟಾರ್​ ಅಧ್ಯಕ್ಷ.. ಖಜಾಂಚಿಯಾಗಿ ರಘುರಾಂ ಭಟ್ ಆಯ್ಕೆ

Pakisthan cricket team

ಸೂಪರ್ ಸಂಡೇಯ ಸೂಪರ್-4ನಲ್ಲಿ  ಸೂಪರ್ ಆಟವಾಡೋಕೆ ಟೀಮ್ ಇಂಡಿಯಾ ರೆಡಿಯಾಗಿದೆ. ಸೋಲಿಲ್ಲದ ಸರದಾರನಾಗಿರುವ ಅನ್​ಸ್ಟಾಬಲ್ ಟೀಮ್ ಇಂಡಿಯಾ, ಮತ್ತೊಮ್ಮೆ ಡಾಮಿನೇಟ್ ಮಾಡೋಕೆ ಕಾಯ್ತಿದೆ. ಇತ್ತ ಸೋತು, ಕೈಕುಲುಕದ ಅವಮಾನಕ್ಕೊಳಗಾಗಿರೋ ಪಾಕ್​​​ ರಿವೇಂಜ್ ತಗೊಳ್ಳೋಕೆ ನೋಡ್ತಿದೆ. ಆದ್ರೆ, ಬಲಿಷ್ಠ ಸೂರ್ಯ ಪಡೆಯನ್ನ ಸೋಲಿಸೋದು ಸುಲಭದಲ್ಲ. ಟಾಪ್ ಟು ಬಾಟಮ್ ಟೀಮ್ ಇಂಡಿಯಾ ಸಖತ್​ ಸ್ಟ್ರಾಂಗ್ ಆಗಿದೆ.

ಅನ್​ಸ್ಟಾಪಬಲ್ ಟೀಮ್ ಇಂಡಿಯಾ!

  • ಏಷ್ಯಾಕಪ್​​ನಲ್ಲಿ ಟೀಮ್ ಇಂಡಿಯಾ ಸೋಲಿಲ್ಲದ ಸರದಾರ
  • ಬ್ಲಾಕ್​ಬಾಸ್ಟರ್ ಓಪನಿಂಗ್..  ಸ್ಪಿನ್ನರ್ಸ್ ಡಾಮಿನೇಷನ್
  • ಐಸಿಸಿ ಟಿ20 ವಿಶ್ವಕಪ್ ಹಾಲಿ ಚಾಂಪಿಯನ್ಸ್, ನಂ.1 ಟಿ20 ಟೀಂ
  • ಬ್ಯಾಟಿಂಗ್, ಬೌಲಿಂಗ್, ಆಲ್​​​ರೌಂಡರ್ ವಿಭಾಗದಲ್ಲಿ ನಂ.1
  • ಟಾಪ್ ಟು ಬಾಟಮ್​ ಬ್ಯಾಟಿಂಗ್, ಬೌಲಿಂಗ್ ಸ್ಟ್ರೆಂಥ್
  • 15 ತಿಂಗಳಿಂದ ಟಿ20 ಸರಣಿಯನ್ನೇ ಸೋಲದ ಟೀಮ್ ಇಂಡಿಯಾ
Advertisment

ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೆ ಸ್ಟಾರ್​ ವೇಗಿ ಕಂಬ್ಯಾಕ್.. ಇವತ್ತು ತಂಡದಲ್ಲಿ ಎರಡು ಬದಲಾವಣೆ..!

india vs pakisthan (2)

ಟಿ20ಯಲ್ಲಿ ಕಂಪ್ಲಿಟ್ ಡಾಮಿನೇಟ್ ಮಾಡ್ತಿರೋ ಟೀಮ್ ಇಂಡಿಯಾಗೆ ಪಾಕ್​ ಲೆಕ್ಕಕ್ಕಿಲ್ಲ. ಹೀಗಾಗಿ ಸೂಪರ್​-4ನಲ್ಲೂ ಟೀಮ್ ಇಂಡಿಯಾನೇ ಗೆಲ್ಲೋ ಹಾಟ್ ಫೇವರಿಟ್ ಆಗಿದ್ದು, ಪಾಕ್​​ ಪಡೆಯನ್ನು ಮಣ್ಣು ಮುಕ್ಕಿಸೋದು ಫಿಕ್ಸ್.

ಸೂಪರ್​​-4 ರಿವೇಂಜ್​​ ಕಷ್ಟ ಕಷ್ಟ

ಅನ್​ಸ್ಟಾಪಬಲ್​ ಆಗಿ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾ, ಇವತ್ತು ಗೆಲ್ಲೋ ಫೇವರಿಟ್. ವಿಶ್ವ ಕ್ರಿಕೆಟ್​ನಲ್ಲಿ ಮುಜುಗರಕ್ಕೀಡಗಿರುವ ಪಾಕ್, ಶತಯಾ ಗತಯಾ ರಿವೇಂಜ್ ತೀರಿಸಿಕೊಳ್ಳಲು ಪಣ ತೊಟ್ಟಿದೆ. ಟೀಮ್ ಇಂಡಿಯಾನಾ ಸೋಲಿಸೋ ಚಾಲೆಂಜ್ ಹಾಕಿದೆ. ಸಮಸ್ಯೆಗಳ ಸರಮಾಲೆಯನ್ನೇ ಹೊಂದಿರುವ ಟುಕ್ ಟುಕ್​ ಪಾಕ್​ ಇವತ್ತು ಗೆಲ್ಲೋದು ಅಸಾಧ್ಯ.

Advertisment

ಇದನ್ನೂ ಓದಿ: ಇವತ್ತು IND vs PAK ಮ್ಯಾಚ್.. ಕುತೂಹಲ ಮೂಡಿಸಿದ ಪಾಕಿಸ್ತಾನದ ಈ ನಡೆ..!

India vs pakisthan

ಟುಕ್​ ಟುಕ್ ಪಾಕ್​

  • ಏಷ್ಯಾಕಪ್​​ನಲ್ಲಿ ಟಾಪ್ ಆರ್ಡರ್ ಬ್ಯಾಟಿಂಗ್ ಕಂಪ್ಲೀಟ್ ಫೇಲ್​
  • 3 ಪಂದ್ಯಗಳಲ್ಲಿ ಪಾಕ್ ಓಪನರ್ ಸೈಮ್ ಅಯೂಬ್ ಡಕೌಟ್​
  • ಸಲ್ಮಾನ್ ಅಲಿ ಅಘಾ 3 ಪಂದ್ಯ, 23 ರನ್, 57.50 ಸ್ಟ್ರೈಕ್ ರೇಟ್
  • ಹಸನ್ ನವಾಜ್ 17 ರನ್​.. 65.38ರ ಸ್ಟ್ರೈಕ್​ರೇಟ್
  • ಸ್ಪಿನ್ನರ್​​ಗಳ ಮುಂದೆ ಪಾಕ್​ ಬ್ಯಾಟರ್​​ಗಳು ಪರದಾಟ
  • ಕಳಪೆ ತಂಡಗಳ ಎದುರಷ್ಟೇ ಶಾಹೀನ್ ಆಫ್ರಿದಿ ಪ್ರತಾಪ

ಇಂಡೋ ಪಾಕ್ ನಡುವಿನ ಮ್ಯಾಚ್ ಕಾವು, ಗೆಲ್ಲಬೇಕೆಂಬ ಛಲ, ಅಪಮಾನಕ್ಕೆ ಸೇಡು ತೀರಿಸಿಕೊಳ್ಳಬೇಕು ಅನ್ನೋ ಹಠ ಉಭಯ ತಂಡಗಳಲ್ಲಿ ಇದೆ. ಹೀಗಾಗಿ ಮತ್ತೆ ಪಾಠ ಕಲಿಸಲು ಸನ್ನದ್ಧವಾಗಿರುವ ಟೀಮ್ ಇಂಡಿಯಾ, ಸೂಪರ್​​-4ನಲ್ಲಿ ಸೂಪರ್ ಆಟವಾಡಬೇಕಿದೆ. ಪಾಕ್​ಗೆ ಮತ್ತೊಂದು ಸೋಲಿನ ಅಘಾತ ನೀಡಬೇಕಿದೆ ಅನ್ನೋದೆ ಅಭಿಮಾನಿಗಳ ಆಶಯ.

Advertisment

ಇದನ್ನೂ ಓದಿ:ಟೀಮ್ ಇಂಡಿಯಾ ಜೊತೆ ವಿಶೇಷ ದಾಖಲೆ ಬರೆದ ಒಮಾನ್ ಓಪನರ್ಸ್​.. ಏನದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ind vs Pak Asia Cup 2025 india vs pakistan asia cup
Advertisment
Advertisment
Advertisment