Advertisment

ಇವತ್ತು IND vs PAK ಮ್ಯಾಚ್.. ಕುತೂಹಲ ಮೂಡಿಸಿದ ಪಾಕಿಸ್ತಾನದ ಈ ನಡೆ..!

ಏಷ್ಯಾಕಪ್​ ಟೂರ್ನಿಯ ಹೈವೋಲ್ಟೆಜ್​ ಕದನಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. ಅಬುಧಾಬಿಯ ಶೇಕ್​ ಝೈದ್​​ ಮೈದಾನದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಲೀಗ್​ ಹಂತದಲ್ಲಿ ಪಾಕಿಸ್ತಾನ ಎದುರು ಸುಲಭದ ಜಯ ಸಾಧಿಸಿದ ಟೀಮ್​ ಇಂಡಿಯಾ, ಇಂದಿನ ಪಂದ್ಯದಲ್ಲೂ ಗೆದ್ದು ಬೀಗೋ ಆತ್ಮವಿಶ್ವಾಸದ ಅಲೆಯಲ್ಲಿದೆ.

author-image
Ganesh Kerekuli
India vs pakisthan (1)
Advertisment

ಏಷ್ಯಾಕಪ್​ ಟೂರ್ನಿಯ ಹೈವೋಲ್ಟೆಜ್​ ಕದನಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. ಅಬುಧಾಬಿಯ ಶೇಕ್​ ಝೈದ್​​ ಮೈದಾನದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

Advertisment

ಲೀಗ್​ ಹಂತದಲ್ಲಿ ಪಾಕಿಸ್ತಾನ ಎದುರು ಸುಲಭದ ಜಯ ಸಾಧಿಸಿದ ಟೀಮ್​ ಇಂಡಿಯಾ, ಇಂದಿನ ಪಂದ್ಯದಲ್ಲೂ ಗೆದ್ದು ಬೀಗೋ ಆತ್ಮವಿಶ್ವಾಸದ ಅಲೆಯಲ್ಲಿದೆ. ಕಳೆದ ಮುಖಾಮುಖಿಯ ನಂತರ ಆದ ಬೆಳವಣಿಗೆಗಳು ಇಂದಿನ ಪಂದ್ಯ ಕ್ರೇಜ್​ ಹೆಚ್ಚಿಸಿವೆ.

ಪಾಕ್ ಕುತೂಹಲ

ಇದರ ಮಧ್ಯೆ ಟೀಮ್​ ಇಂಡಿಯಾ ವಿರುದ್ಧದ ಇಂದಿನ ಪಂದ್ಯಕ್ಕೂ ಮುನ್ನ ನಡೆಯಬೇಕಿದ್ದ ಸುದ್ದಿಗೋಷ್ಟಿಯನ್ನ ಪಾಕಿಸ್ತಾನ ತಂಡ ರದ್ದು ಮಾಡಿದೆ. ಈ ಹಿಂದಿನ ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ಕೂಡ ಪಾಕಿಸ್ತಾನ ಪತ್ರಿಕಾಗೋಷ್ಟಿಯನ್ನ ಮಾಡಿರಲಿಲ್ಲ. ಪಂದ್ಯ ಆದ ಬಳಿಕ ಪಾಕಿಸ್ತಾನದ ವೇಗಿ ಹ್ಯಾರಿಸ್​ ರೌಫ್​ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ರು. ಇದೀಗ ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್​ ತಂಡ ಪತ್ರಿಕಾಗೋಷ್ಠಿ ರದ್ದು ಮಾಡಿರೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಬ್ಯಾಟಿಂಗ್​ ಕ್ರಮಾಂಕದಲ್ಲಿ ಓವರ್​ಸ್ಮಾರ್ಟ್ ಆದ್ರಾ ಕ್ಯಾಪ್ಟನ್​ ಸೂರ್ಯಕುಮಾರ್.. ಯಾಕೆ? 

Advertisment

India vs pakisthan

ಟೀ ಇಂಡಿಯಾದಲ್ಲಿ ಬದಲಾವಣೆ..!

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​ ಬದಲಾವಣೆಯಾಗಲಿದೆ. ಓಮನ್​ ವಿರುದ್ಧದ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಜಸ್​​ಪ್ರಿತ್​ ಬೂಮ್ರಾ, ತಂಡಕ್ಕೆ ವಾಪಾಸ್ಸಾಗಲಿದ್ದಾರೆ. ಹರ್ಷಿತ್​ ರಾಣಾ ಅಥವಾ ಆರ್ಷ್​​ದೀಪ್​ ಸಿಂಗ್​ ಪ್ಲೇಯಿಂಗ್​ ಇಲೆವೆನ್​ನಿಂದ ಹೊರಬೀಳಲಿದ್ದಾರೆ. ವರುಣ್​ ಚಕ್ರವರ್ತಿ ಕೂಡ ಪ್ಲೇಯಿಂಗ್​ ಇಲೆವೆನ್​ಗೆ ಕಮ್​ಬ್ಯಾಕ್​ ಮಾಡೋ ಸಾಧ್ಯತೆ ದಟ್ಟವಾಗಿದೆ. 

ಇದನ್ನೂ ಓದಿ:ಟೀಮ್ ಇಂಡಿಯಾ ಜೊತೆ ವಿಶೇಷ ದಾಖಲೆ ಬರೆದ ಒಮಾನ್ ಓಪನರ್ಸ್​.. ಏನದು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Ind vs Pak Asia Cup 2025 india vs pakistan asia cup
Advertisment
Advertisment
Advertisment