/newsfirstlive-kannada/media/media_files/2025/09/20/oman-openers-2025-09-20-16-12-58.jpg)
ಟಿ20 ಇತಿಹಾಸದಲ್ಲಿ ಭಾರತದ ವಿರುದ್ಧ 50+ ಜೊತೆಯಾಟ ದಾಖಲಿಸಿದ ಎರಡನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಒಮಾನ್ ಪಾತ್ರವಾಗಿದೆ. ಇದಕ್ಕೂ ಮೊದಲು, ಅಫ್ಘಾನಿಸ್ತಾನ ಈ ದಾಖಲೆಯನ್ನು ಮಾಡಿತ್ತು. ಆರಂಭಿಕ ಜೋಡಿಯಾದ ನಾಯಕ ಜತಿಂದರ್ ಸಿಂಗ್ ಹಾಗು ಅಮೀರ್ ಕಲೀಮ್ 56 ರನ್‌ಗಳನ್ನು ಕಲೆಹಾಕುವ ಮೂಲಕ ಉತ್ತಮ ಜೊತೆಯಾಟವನ್ನಾಡಿ, ತಂಡಕ್ಕೆ ಭದ್ರ ಬುನಾದಿಯನ್ನಾಕಿದರು.
ಇದನ್ನೂ ಓದಿ: ಸಮೀಕ್ಷೆಯಲ್ಲಿ ಜಾತಿ ಕಲಂನಲ್ಲಿ ಒಕ್ಕಲಿಗ, ಉಪಜಾತಿ ನಿಮ್ಮ ಇಷ್ಟದಂತೆ ಬರೆಸಿ ಎಂದ ನಿರ್ಮಲಾನಂದನಾಥ ಸ್ವಾಮೀಜಿ
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಜಸ್ಪ್ರೀತ್ ಬುಮ್ರಾ ಹಾಗು ವರುಣ್ ಚಕ್ರವರ್ತಿ ಅವರನ್ನು ಪಂದ್ಯದಿಂದ ಹೊರಗಿಟ್ಟು, ಅರ್ಶ್​ದೀಪ್ ಸಿಂಗ್ ಹಾಗು ಹರ್ಷಿತ್ ರಾಣಾ ಅವರಿಗೆ ಚಾನ್ಸ್ ನೀಡಿತ್ತು. ಆದ್ರೆ ಈ ಜೋಡಿಯು ಉತ್ತಮ ಪ್ರದರ್ಶನ ನೀಡಿದರೂ, ತಂಡಕ್ಕೆ ಲಾಭ ತಂದುಕೊಡುವುದರಲ್ಲಿ ವಿಫಲರಾದರು. ಮೆನ್ ಇನ್ ಬ್ಲೂ ಪರ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು.
ಭಾರತ ತಂಡ ನೀಡಿದ್ದ 189 ರನ್​ಗಳ ಟಾರ್ಗೆಟ್​ಗೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಮಾಡಿದ ಒಮಾನ್ ಆರಂಭದಲ್ಲೇ ಉತ್ತಮ ರನ್ ಗಳಿಸಿತು. ನಾಯಕ ಜತಿಂದರ್ ಸಿಂಗ್ ಹಾಗು ಅಮೀರ್ ಕಲೀಮ್ ಈ ಇಬ್ಬರ ಜೋಡಿಯಾಟದಿಂದ ಬಂದಂತಹ 56 ರನ್ ದಾಖಲೆಯಾಗಿದೆ. ಆದರೆ ಓವರ್​ಗಳು ಮುಗಿದು ಹೋಗಿದ್ದರಿಂದ ಭಾರತದ ವಿರುದ್ಧ ಒಮಾನ್ 21 ರನ್​ಗಳಿಂದ ಸೋಲೊಪ್ಪಿಕೊಂಡಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ