/newsfirstlive-kannada/media/media_files/2025/09/20/sky-image-2025-09-20-12-14-51.jpg)
ಒಮಾನ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಅವರ ವಿಲಕ್ಷಣ ಕ್ರಮವು ಇಂಟರ್​​ನೆಟ್​ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ಓವರ್​ಸ್ಮಾರ್ಟ್ ನಡೆಯನ್ನು ಸೂರ್ಯ ಕುಮಾರ್ ಪ್ರಯತ್ನಿಸಿದರೇ ಎಂಬ ಪ್ರಶ್ನೆ ಎನ್ನುವುದು ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಕಾರಣ ಒಮಾನ್ ವಿರುದ್ಧ ಸೂರ್ಯಕುಮಾರ್ ಬ್ಯಾಟಿಂಗ್​ಗೆ ಬಾರದೇ ಇರುವುದು ಆಗಿದೆ.
ಒಮಾನ್ ವಿರುದ್ಧದ ಏಷ್ಯಾ ಕಪ್ 2025 ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಅವರು ಕೊನೆವರೆಗೂ ಬ್ಯಾಟಿಂಗ್​ಗೆ ಬರಲೇ ಇಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್​ ಸಿಗದ ಎಲ್ಲ ಆಟಗಾರರನ್ನು ಕ್ರೀಸ್​ಗೆ ಕಳುಹಿಸಿದರು. ಮೂರನೇ ಬ್ಯಾಟಿಂಗ್​ಗೆ ಬರುತ್ತಿದ್ದ ಸೂರ್ಯ ಬದಲಿಗೆ ಸಂಜು ಸ್ಯಾಮ್ಸನ್​ 3ನೇ ಬ್ಯಾಟರ್ ಆಗಿ ಕ್ರೀಸ್​ಗೆ ಇಳಿದರು. ಇವರಾದ ಮೇಲೆ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ತಿಲಕ್ ವರ್ಮಾ ಹೀಗೆ ಅರ್ಷ್​ದೀಪ್​ ಸಿಂಗ್​, ಹರ್ಷಿತ್ ರಾಣಾ, ಕುಲ್​ದೀಪ್​ ಯಾದವ್​ ಕ್ರೀಸ್​ಗೆ ಆಗಮಿಸಿ ಬ್ಯಾಟ್ ಬೀಸಿದರು.
ಇದನ್ನೂ ಓದಿ:ಮನೆಯಲ್ಲಿ ಯಾರು ಇಲ್ಲದಾಗ ವ್ಯಕ್ತಿಯ ವಿವಸ್ತ್ರಗೊಳಿಸಿ ಜೀವ ತೆಗೆದ ಕಿರಾತಕರು
ಆದ್ರೆ ಅಭಿಮಾನಿಗಳು ಸೂರ್ಯಕುಮಾರ್ ಬ್ಯಾಟ್​ಗಾಗಿ ಕಾಯುತ್ತಿದ್ದರು. 7ನೇ ಸ್ಥಾನದಲ್ಲಿ ಬರುತ್ತಾರೆ ಎಂದುಕೊಂಡಿದ್ದರು. ಬ್ಯಾಟಿಂಗ್​ಗೆ ಸೂರ್ಯ ಬರಲೇ ಇಲ್ಲ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದ್ದು ಕೆಲವೊಬ್ಬರ ನಾಯಕನನ್ನ ಹೊಗಳಿದರೆ ಇನ್ನ ಕೆಲವೊಬ್ಬರು ಓಹೋ.. ಇದು ಓವರ್​ಸ್ಮಾರ್ಟ್ ಎಂದು ಹೇಳಿದ್ದಾರೆ. ಹೀಗಾಗಿಯೇ ತಮ್ಮನ್ನು 11ನೇ ಕ್ರಮಾಂಕದ ಬ್ಯಾಟಿಂಗ್​​ಗೆ ಇಳಿಸಿಕೊಂಡಿದ್ದಾರೆ ಎಂದಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಸೂರ್ಯಕುಮಾರ್ ಅವರು ಬ್ಯಾಟಿಂಗ್​ ಮಾಡದೇ ಇದ್ದರೂ ಟೀಮ್ ಇಂಡಿಯಾ ಬ್ಯಾಟರ್ಸ್​ 8 ವಿಕೆಟ್​ಗೆ 169 ರನ್​ಗಳ ಟಾರ್ಗೆಟ್​ ಸೆಟ್ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಮಾಡಿದ ಒಮಾನ್ ಉತ್ತಮವಾದ ಪೈಪೋಟಿಯನ್ನೇ ಕೊಟ್ಟಿತು. ಕೊನೆಗೆ ಒಮಾನ್ 4 ವಿಕೆಟ್​ಗೆ 167 ರನ್ ಮಾತ್ರ ಗಳಿಸಲು ಶಕ್ತವಾಯಿತು. ಹೀಗಾಗಿ ಟೀಮ್ ಇಂಡಿಯಾ 21 ರನ್​ಗಳ ಅಮೋಘವಾದ ಜಯ ಪಡೆಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ