/newsfirstlive-kannada/media/media_files/2025/09/20/klb_man-2025-09-20-11-32-09.jpg)
ಕಲಬುರಗಿ: ಕಲಬುರಗಿ ನಗರದ ಲ್ಯಾಪ್ರಸ್ಸಿ ಕಾಲೋನಿಯಲ್ಲಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಬಟ್ಟೆ ಬಿಚಿ ದೊಣ್ಣೆಯಿಂದ ಹೊಡೆದು ಜೀವ ತೆಗೆಯಲಾಗಿದೆ. ಮೂವತ್ತೆಂಟು ವರ್ಷದ ಚಾಂದ್​ಸಾಬ್ ಮೃತ ದುರ್ದೈವಿಯಾಗಿದ್ದಾರೆ.
ತಡರಾತ್ರಿ ಎಣ್ಣೆ ಪಾರ್ಟಿ ಮಾಡಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದ ಪರಿಚಿತರೊಬ್ಬರು ಹಳೇ ವೈಷಮ್ಯದ ಹಿನ್ನಲೆ ಚಾಂದ್​ಸಾಬ್​ನನ್ನು ವಿವಸ್ತ್ರಗೊಳಿಸಿ ಜೀವ ತೆಗೆದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಆರ್.ಜಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.