/newsfirstlive-kannada/media/media_files/2025/09/20/surya_oman-2025-09-20-11-41-22.jpg)
ಒಮಾನ್ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ 21 ರನ್​ಗಳಿಂದ ಗೆಲುವು ಪಡೆದಿದೆ. ಈ ಮೂಲಕ ಈ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಸೂರ್ಯಕುಮಾರ್​ ನೇತೃತ್ವದ ಟೀಮ್ ಇಂಡಿಯಾ ಗೆಲುವು ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದೆ. ಪಂದ್ಯ ಮುಗಿದ ಮೇಲೆ ಒಮಾನ್ ಆಟಗಾರರಿಗೆ ಸೂರ್ಯಕುಮಾರ್ ಅವರು ಕೆಲವು ಟಿಪ್ಸ್ ಹೇಳಿಕೊಟ್ಟಿದ್ದಾರೆ.
ಸೂರ್ಯಕುಮಾರ್ ಅವರು ಕ್ರಿಕೆಟ್​ ಬಗೆಗಿನ ಟಿಪ್ಸ್ ಹೇಳುತ್ತಿರಬೇಕಾದರೆ ಒಮಾನ್ ಕ್ರಿಕೆಟರ್ಸ್​, ಸಿಬ್ಬಂದಿ ವರ್ಗ ಎಲ್ಲ ನಿಂತುಕೊಂಡು ಶ್ರದ್ಧೆಯಿಂದ ಕೇಳಿಸಿಕೊಂಡರು. ಪಂದ್ಯದಲ್ಲಿ ಸೋಲು, ಗೆಲುವುಗಳು ಬಂದು ಹೋಗುತ್ತಿರುತ್ತವೆ. ಆ ಬಗ್ಗೆ ಚಿಂತೆ ಬೇಡ. ಆದರೆ ಕ್ರಿಕೆಟ್​​ ಅನ್ನು ಕೈಬಿಡಬೇಡಿ. ನಮ್ಮ ಜೊತೆ ನೀವು ಸೂಪರ್ ಆಗಿ ಪೈಪೋಟಿ ಕೊಟ್ಟಿದ್ದೀರಿ. ನೀವು ಬ್ಯಾಟಿಂಗ್ ಆಡೋದು ನೋಡಿ ನನಗೆ ಶಾಕ್ ಆಗೋಯಿತು ಎಂದು ಹೇಳಿದ್ದಾರೆ.
ಬ್ರ್ಯಾಂಡ್ ಆಫ್ ಕ್ರಿಕೆಟ್​ ನೀವು ಆಡಿದ್ದೀರಾ ಅಲ್ವಾ ಅದನ್ನು ನಾವು ಏನಾದರೂ ತಿಂದಾಗ ಯಾವ ರೀತಿ ಟೇಸ್ಟ್ ನೆನಪಲ್ಲಿ ಇಟ್ಟುಕೊಳ್ಳುತ್ತಿವೆಯೋ ಅದೇ ರೀತಿ ನೆನಪಲ್ಲಿ ಇಟ್ಟುಕೊಳ್ಳಿ. ನಾವು ಫೀಲ್ಡಿಂಗ್ ಮಾಡುವಾಗ, ಬ್ಯಾಟಿಂಗ್ ಮಾಡುವಾಗ ಏನೇನು ಮಾಡಿದೇವು ಎನ್ನುವುದು ತಲೆಯಲ್ಲಿ ಇರಬೇಕು. ಪ್ರತಿ ಪಂದ್ಯದಲ್ಲೂ ಬದಲಾವಣೆ ಇರುತ್ತದೆ. ಶ್ರಮ, ಏಕಾಗ್ರತೆ ವಹಿಸಿ ಆಡಬೇಕು. ಕ್ರಿಕೆಟ್​ನಲ್ಲಿ ಸೋಲುವುದಕ್ಕೂ, ಗೆಲ್ಲುವುಕ್ಕೂ ತಯಾರು ಆಗಿರಬೇಕು. ಎಲ್ಲ ಆಟಗಾರರಿಗೂ ಆಲ್​ ದೀ ಬೆಸ್ಟ್​ ಎಂದು ಸೂರ್ಯಕುಮಾರ್ ಅವರು ಒಮಾನ್ ಆಟಗಾರರಿಗೆ ಹೇಳಿದರು.
ಇವತ್ತೂ ನಮ್ಮ ಜೊತೆ ಎಲ್ಲರೂ ಸಖತ್ ಆಗಿಯೇ ಆಡಿದ್ದೀರಿ. ಈ ಟೂರ್ನಿಯಲ್ಲಿ ಇತರ ಎರಡು ತಂಡಗಳಿಗಿಂತ ನೀವು ಚೆನ್ನಾಗಿ ಟ್ರೈ ಮಾಡಿದ್ದೀರಿ. ನೀವು ಆಡಿರುವುದನ್ನ ಪ್ರತಿಯೊಂದು ನೆನಪಲ್ಲಿ ಇಟ್ಟುಕೊಳ್ಳಿ ಎಂದರು. ಸೂರ್ಯಕುಮಾರ್ ತಮ್ಮ ಕ್ರಿಕೆಟ್​ ಅನುಭವವನ್ನು ಎಲ್ಲ ಒಮಾನ್ ಆಟಗಾರರಿಗೆ ಹೇಳಿದರು. ಸೂರ್ಯ ಮಾತನಾಡುವುದು ಮುಗಿದ ಮೇಲೆ ಎಲ್ಲರೂ ಒಟ್ಟಿಗೆ ಫೋಟೋಗೆ ಪೋಸ್​ ಕೊಟ್ಟರು.
Suryakumar Yadav sharing his experience with Oman players. 🥹❤️
— Johns. (@CricCrazyJohns) September 20, 2025
- A lovely gesture by Indian Captain. pic.twitter.com/w59TNPtx0f
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ