/newsfirstlive-kannada/media/media_files/2025/09/20/dunith_wellalage_father-2025-09-20-10-47-33.jpg)
ದುನಿತ್​ ವೆಲ್ಲಲಾಗೆ.. ಶ್ರೀಲಂಕಾದ ಈ ಯಂಗ್​​ ಸ್ಪಿನ್ನರ್​ ಪಾಲಿಗೆ ಮೊನ್ನೆ ಸೆಪ್ಟೆಂಬರ್​ 18 ರಂದು ಜೀವನದ ಅತ್ಯಂತ ಕರಾಳ ದಿನ. ಆನ್​​ಫೀಲ್ಡ್​ನ ವೈಫಲ್ಯ ಒಂದು ಕಡೆಯಾದ್ರೆ, ಆಫ್​ ದ ಫೀಲ್ಡ್​ನಲ್ಲಿ ಬಾಳಿನ ಬೆಳಕಾಗಿದ್ದ ದೀಪವೇ ಆರಿ ಹೋಗಿದೆ. ಯಾರ ಕನಸನ್ನ ನನಸು ಮಾಡಲು ಯುವ ಸ್ಪಿನ್ನರ್​ ಹೋರಾಡ್ತಾ ಇದ್ನೋ ಆ ವ್ಯಕ್ತಿಯೇ ಬಾಳಿನ ಯಾನ ಮುಗಿಸಿ ಬಿಟ್ಟರು.
- 19.1ನೇ ಎಸೆತ ಲಾಂಗ್​ ಆಫ್​ ಮೇಲೆ ಸಿಕ್ಸರ್​
- 19.2ನೇ ಎಸೆತ ಲಾಂಗ್​​ ಆನ್​ ಮೇಲೆ 2ನೇ ಸಿಕ್ಸ್
- 19.3ನೇ ಎಸೆತ ಲಾಂಗ್​ ಆನ್​ ಮೇಲೆ ಹ್ಯಾಟ್ರಿಕ್​​ ಸಿಕ್ಸರ್​
- 19.4ನೇ ಎಸೆತ ವೈಡ್​​ & ನೋ ಬಾಲ್​
- ಫ್ರೀ ಹಿಟ್​​ ಬಾಲ್..​​​​​​ ಓವರ್​​ ದಿ ಲಾಂಗ್​ ಆಫ್ ಮೇಲೆ 4ನೇ ಸಿಕ್ಸ್
- 19.5ನೇ ಎಸೆತ ಡೀಪ್ ಮಿಡ್ ವಿಕೆಟ್ ಮೇಲೆ 5ನೇ ಸಿಕ್ಸರ್​
- 19.6ನೇ ಎಸೆತ ಮೊಹಮ್ಮದ್ ನಬಿ ರನೌಟ್​
3 ಓವರ್​​ಗೆ 17 ರನ್​.. ಕೊನೆ ಓವರ್​​ನಲ್ಲಿ 5 ಸಿಕ್ಸರ್ ಸಹಿತ ಬಿಟ್ಟುಕೊಟ್ಟಿದ್ದು 32 ರನ್. ಈ ಸಿಕ್ಸರ್​ಗಳ ಸುರಿಮಳೆ ಫ್ಯಾನ್ಸ್​ಗೆ ಹಬ್ಬದೂಟ ಉಣಬಡಿಸಿತ್ತು. ಅಪ್ಘಾನ್ ಸವಾಲಿನ ಮೊತ್ತ ಪೇರಿಸಲು ನೆರವಾಗಿತ್ತು. ಆದ್ರೆ, ಬೌಲಿಂಗ್​ ಮಾಡಿದ ಯುವ ಸ್ಪಿನ್ನರ್​​​ ಪಾಲಿಗೆ ಆಕಾಶವೇ ಕುಸಿದು ಬಿದ್ದಂತಾಗಿತ್ತು.
ಸತತ 5 ಸಿಕ್ಸರ್​​ ಸಿಡಿಸಿಕೊಂಡು ಅದಾಗಲೇ ಕುಗ್ಗಿ ಹೋಗಿದ್ದ ದುನಿತ್ ವೆಲ್ಲಲಾಗೆ ಮತ್ತೊಂದು ಅಘಾತಕಾರಿ ಸುದ್ದಿ ಕಾದಿತ್ತು. ಯಾರು ಈತನನ್ನ ಕ್ರಿಕೆಟರ್​ ಮಾಡೋಕೆ ಹೋರಾಟ ನಡೆಸಿದ್ರೂ, ಈತನ ಜೀವನಕ್ಕೆ ದಾರಿ ದೀಪವಾಗಿದ್ರೂ, ದುನಿತ್​ ವೆಲ್ಲಾಲಗೆಯನ್ನ ಲೆಜೆಂಡರಿ ಸ್ಪಿನ್ನರ್​ ಮಾಡೋ ಕನಸು ಕಂಡಿದ್ದರೋ, ಆ ವ್ಯಕ್ತಿ ಇಹಲೋಕ ತ್ಯಜಿಸಿದರು. ಅಂದ್ಹಾಗೆ ಅವರ ಹೆಸರು ಸುರಂಗ ವೆಲ್ಲಲಾಗೆ.. ದುನಿತ್​ ತಂದೆ.
ಡ್ರಿಂಕ್ಸ್​ ಬ್ರೇಕ್​ ವೇಳೆಯೇ ಬಂದಿತ್ತು ಮೃತ್ಯು ಸಂದೇಶ..!
ದುನಿತ್​ ವೆಲ್ಲಲಾಗೆ ಪಾಲಿಗೆ ಗುರುವಾರ ಕರಾಳ ದಿನವಾಗಿತ್ತು. ಕೊನೆ ಓವರ್​​ನಲ್ಲಿ 5 ಸಿಕ್ಸರ್​ ಬಿಟ್ಟುಕೊಟ್ಟಿದ್ದ ಬೇಸರದಲ್ಲಿದ್ದ ದುನಿತ್​​, ಬ್ಯಾಟ್​​, ಹೆಲ್ಮೆಟ್ ಹಿಡಿದು ಡಗೌಟ್​​ನಲ್ಲೇ ಸಹ ಆಟಗಾರರ ಜೊತೆ ಕುಳಿತಿದ್ದರು. ಆ ಸಮಯದಲ್ಲೇ ಶ್ರೀಲಂಕಾ ಬ್ಯಾಟಿಂಗ್​​ನ ಡ್ರಿಂಕ್ಸ್​​ ಬ್ರೇಕ್ ವೇಳೆಗೆ ವೆಲ್ಲಾಲಗೆ ಹೃದಯಾಘಾತದ ಸಂದೇಶ ಮ್ಯಾನೇಜ್​​​​ಮೆಂಟ್​​​ಗೆ ತಲುಪಿತ್ತು. ಆದ್ರೆ, ಪಂದ್ಯ ಮುಗಿಯೋ ತನಕ ಸುದ್ದಿಯನ್ನ ಲಂಕಾ ಮ್ಯಾನೇಜ್​​​ಮೆಂಟ್ ತಡೆಹಿಡಿದುಕೊಂಡಿತ್ತು. ಪಂದ್ಯ ಮುಗಿಯುತ್ತಿದ್ದಂತೆ ವೆಲ್ಲಲಾಗೆ ಬಳಿ ತೆರಳಿದ ಸನತ್ ಜಯಸೂರ್ಯ ಹಾಗೂ ಮ್ಯಾನೇಜರ್ ತಂದೆಯ ಸಾವಿನ ಸುದ್ದಿ ತಿಳಿಸಿದ್ದರು.
ಪಂದ್ಯಕ್ಕೂ ಮುನ್ನವೇ ಆಸ್ಪತ್ರೆ ಸೇರಿದ್ರಾ ತಂದೆ..?
ಲೀಗ್​​​ನ 2 ಮ್ಯಾಚ್ ಬೆಂಚ್ ಕಾದಿದ್ದ ದುನಿತ್​ ವೆಲ್ಲಲಾಗೆ ಕೊನೆ ಪಂದ್ಯದಲ್ಲಿ ಚಾನ್ಸ್​ ಸಿಕ್ಕಿತ್ತು. ಮಗನ ಆಟ ನೋಡ್ತಿದ್ದ ತಂದೆ ಸುರಂಗ ವೆಲ್ಲಲಾಗೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಆದ್ರೆ, ಕೆಲ ವರದಿಗಳ ಪ್ರಕಾರ ದುನಿತ್​​ ತಂದೆ, ಪಂದ್ಯಕ್ಕೂ ಮುನ್ನವೇ ಹೃದಯಘಾತಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು ಎನ್ನಲಾಗ್ತಿದೆ. ಇನ್ನಷ್ಟೇ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.
ಇದನ್ನೂ ಓದಿ:BCCI ಚುನಾವಣಾ ಅಖಾಡಕ್ಕೆ ಅಮಿತ್​ ಶಾ ಎಂಟ್ರಿ.. ಇಂದಿನ ಸಭೆಯಲ್ಲಿ ಅಧ್ಯಕ್ಷರ ಹೆಸರು ಫೈನಲ್!
22 ವರ್ಷದ ದುನಿತ್ ವೆಲ್ಲಾಲಗೆ ತಂದೆಯೇ ಸ್ಪೂರ್ತಿ..!
ದುನೀತ್​ ತಂದೆ ಸುರಂಗ ವೆಲ್ಲಲಾಗೆ ಕೂಡ ಕ್ರಿಕೆಟರ್ ಆಗಿದ್ದರು. ಕಾಲೇಜ್ ಲೆವೆಲ್​​​ನಲ್ಲಿ ಕ್ಯಾಪ್ಟನ್ ಆಗಿದ್ದ ಸುರಂಗಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡುವ ಕನಸು ನನಸಾಗಿರಲಿಲ್ಲ. ಹೀಗಾಗಿ ಮಗ ಕ್ರಿಕೆಟರ್ ಆಗಬೇಕೆಂಬ ಕನಸು ಕಾಣ್ತಾರೆ. ಅಪ್ಪನ ಆಸೆಯಂತೆ ದುನಿತ್ ವೆಲ್ಲಲಾಗೆ​​, ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸಾಧನೆ ಮಾಡಲು ಹೊರಟಿದ್ದರು. ಮಗನ ಸಾಧನೆ ನೋಡಲು ದುನಿತ್​ ವೆಲ್ಲಲಾಗೆ ತಂದೆ ಆಸೆಯಿಂದ ಕಾದಿದ್ದರು.
ಆದ್ರೆ, ವಿಧಿಬರಹವೇ ಬೇರೆ ಇತ್ತು.. ಮಗ ಕ್ರಿಕೆಟ್ ಆಡುತ್ತಿರುವಾಗಲೇ ಪ್ರಾಣ ಬಿಟ್ಟಿದ್ದಾರೆ. ಮೇಲಿಂದ ಮೇಲೆ ಆಘಾತ ಯುವ ಆಟಗಾರನಿಗೆ ಅಪ್ಪಳಿಸಿದೆ. ದುನಿತ್​ ವೆಲ್ಲಾಲಗೆಗೆ ಈ ನೋವನ್ನ ಮೆಟ್ಟಿನಿಂತು ಸ್ಟ್ರಾಂಗ್​ ಕಮ್​​ಬ್ಯಾಕ್​ ಮಾಡೋ ಶಕ್ತಿ ಸಿಗಲಿ ಅನ್ನೋದು ಕ್ರಿಕೆಟ್​ ಲೋಕದ ಪ್ರಾರ್ಥನೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ