/newsfirstlive-kannada/media/media_files/2025/09/20/amit_shah-2025-09-20-09-46-57.jpg)
ವಿಶ್ವದ ಶ್ರೀಮಂತ ಕ್ರಿಕೆಟ್​​ ಸಂಸ್ಥೆ ಬಿಸಿಸಿಐನ ನೂತನ ಬಾಸ್​​​​ ನೇಮಕಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. ರೋಜರ್​ ಬಿನ್ನಿಯಿಂದ ತೆರವಾಗಿರೋ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕಕ್ಕೆ ಕಸರತ್ತು ಆರಂಭವಾಗಿದೆ. ಕ್ರಿಕೆಟ್​ ಲೋಕದ​ ಚುನಾವಣಾ ಕಣಕ್ಕೆ ಇದೀಗ ರಾಜಕೀಯ ಚಾಣಕ್ಯ ಅಮಿತ್​ ಶಾ ಎಂಟ್ರಿಯಾಗಿದೆ. ಹೀಗಾಗಿ ಚುನಾವಣಾ ಕಣ ಫುಲ್​ ರಂಗೇರಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್​ ಸಂಸ್ಥೆ ಬಿಸಿಸಿಐ ವಲಯದಲ್ಲಿ ಬದಲಾವಣೆ ಬಿರುಗಾಳಿ ಜೋರಾಗಿ ಬೀಸ್ತಾಯಿದೆ. ರೋಜರ್​ ಬಿನ್ನಿಯಿಂದ ತೆರವಾದ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿಯ ನೇಮಕದ ಕಸರತ್ತು ಅಂತಿಮ ಘಟ್ಟ ತಲುಪಿದೆ. ಭಾರತೀಯ ಕ್ರಿಕೆಟ್​​ನ ಮುಂದಿನ ಬಿಗ್​ಬಾಸ್​ ಯಾರಾಗ್ತಾರೆ? ಅನ್ನೋ ಕುತೂಹಲಕ್ಕೆ ಇದೀಗ ಮತ್ತಷ್ಟು ಹೆಚ್ಚಾಗಿದೆ. ಯಾಕಂದ್ರೆ, ಕ್ರಿಕೆಟ್​ ಲೋಕದ ಚುನಾವಣೆ, ರಾಜಕೀಯ ಲೋಕದ ಚುನಾವಣಾ ಚಾಣಕ್ಯ ಅಮಿತ್​ ಶಾ ಎಂಟ್ರಿಯಾಗಿದೆ. ಇದ್ರಿಂದಾಗಿ ಚುನಾವಣೆಯ ಕಾವು ಹೆಚ್ಚಾಗಿದೆ.
ಹೋಮ್​​ ಮಿನಿಸ್ಟರ್​ ಮನೆಯಲ್ಲಿಂದು ಚುನಾವಣೆ ಸಭೆ.!
ಬಿಸಿಸಿಐ ಎಲೆಕ್ಷನ್​ ಇದೀಗ ಕ್ಲೈಮ್ಯಾಕ್ಸ್​ ಹಂತ ತಲುಪಿದೆ. ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆ ಇರೋದು ಸಪ್ಟೆಂಬರ್​ 28ಕ್ಕೆ. ನೂತನ ಅಧ್ಯಕ್ಷರ ಘೋಷಣೆಯಾಗೋದು ಆಗಲೇ. ಆದ್ರೆ, ಬಿಸಿಸಿಐ ನೂತನ ಬಾಸ್​ ಆಯ್ಕೆ ಇವತ್ತೇ ನಡೆಯಲಿದೆ. ಹೋಮ್​ ಮಿನಿಸ್ಟರ್​ ಅಮಿತ್​ ಶಾ ಮನೆಯಲ್ಲಿ ಇಂದು ಬಿಸಿಸಿಐನ ಟಾಪ್​​ ಅಫಿಶಿಯಲ್ಸ್​ ಮೀಟಿಂಗ್​ ನಡೆಯಲಿದೆ. ಇದೇ ಸಭೆಯಲ್ಲಿ ಮುಂದಿನ ಅಧ್ಯಕ್ಷರ ಆಯ್ಕೆಯೂ ಅಂತಿಮವಾಗಲಿದೆ.
2ನೇ ಬಾರಿ ಬಿಸಿಸಿಐ ಬಾಸ್​ ಆಗ್ತಾರಾ ಸೌರವ್​​ ಗಂಗೂಲಿ.?
ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ಅಧ್ಯಕ್ಷ ಹುದ್ದೆಯ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ. 2019ರಿಂದ 2022ರವರೆಗೆ ಅಧ್ಯಕ್ಷರಾಗಿ ದಾದಾ ಗಂಗೂಲಿ ಸೇವೆ ಸಲ್ಲಿಸಿದ್ರು. ಅದಾದ ಬಳಿಕ ಕ್ರಿಕೆಟ್​ ಆಡಳಿತದಿಂದ ದೂರ ಉಳಿದಿದ್ದ ಬೆಂಗಾಲ್​ ಪ್ರಿನ್ಸ್​, ಇದೀಗ ಇನ್ನೊಂದು ಅವಧಿಗೆ ಬಿಸಿಸಿಐ ಬಾಸ್​​ ಆಗಲು ಆಸಕ್ತಿ ತೋರಿಸಿದ್ದಾರೆ. ಬೆಂಗಾಲ್​ ಕ್ರಿಕೆಟ್​ ಅಸೋಷಿಯನ್​​ ಗಂಗೂಲಿಯನ್ನ ಪ್ರತಿನಿಧಿಯಾಗಿ ನಾಮಿನೇಟ್​ ಕೂಡ ಮಾಡಿದೆ.
ದಾದಾ ಗಂಗೂಲಿಗೆ ಗೂಗ್ಲಿ ಹಾಕ್ತಾರಾ ಹರ್ಭಜನ್​​.?
ಅಧ್ಯಕ್ಷಗಾದಿಯ ರೇಸ್​​ನಲ್ಲಿ ಗಂಗೂಲಿಗೆ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್ ಟಫ್​ ಫೈಟ್​ ನೀಡ್ತಿದ್ದಾರೆ. ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ನ ಪ್ರತಿನಿಧಿಯಾಗಿ ಪಂಜಾಬ್​ ಕ್ರಿಕೆಟ್​ ಅಸೋಸಿಯೇಷನ್​ ಸಭೆಗೆ ಕಳುಹಿಸಲು ತೀರ್ಮಾನಿಸಿದೆ. ಇದ್ರೊಂದಿಗೆ ಹರ್ಭಜನ್​ ಸಿಂಗ್ ಕೂಡ ಅಧಿಕೃತವಾಗಿ ಚುನಾವಣಾ ಕಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.
KSCA ಅಧ್ಯಕ್ಷ ರಘುರಾಮ್​ ಭಟ್​ ಕೂಡ ರೇಸ್​ನಲ್ಲಿ.!
ಕರ್ನಾಟಕ ಕ್ರಿಕೆಟ್​ ಅಸೋಸಿಯೇಷನ್​​ನ ಹಾಲಿ ಅಧ್ಯಕ್ಷ ರಘುರಾಮ್​ ಭಟ್​ ಕೂಡ ಬಿಸಿಸಿಐ ಬಾಸ್​ ಆಗೋ ರೇಸ್​​ನಲ್ಲಿದ್ದಾರೆ. ಕಳೆದ ಒಂದು ಅವಧಿಯಲ್ಲಿ ಕೆಎಸ್​​ಸಿಎಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ರಘುರಾಮ್​ ಭಟ್​ಗಿದೆ. ಆದ್ರೆ, ಈ ಹಿಂದೆ ಅಧ್ಯಕ್ಷರಾಗಿದ್ದ ರೋಜರ್​ ಬಿನ್ನಿ ಕೂಡ ಕರ್ನಾಟಕದವರೇ ಆಗಿದ್ರು. ಹೀಗಾಗಿ ಸತತ 2ನೇ ಬಾರಿಗೆ ಕರ್ನಾಟಕದವರಿಗೆ ಚಾನ್ಸ್​ ಸಿಗುತ್ತಾ ಅನ್ನೋ ಅನುಮಾನವಿದೆ.
ಇದನ್ನೂ ಓದಿ:ಅಯ್ಯೋ ನಾನು ರೋಹಿತ್ ಶರ್ಮಾ ಆಗಿಬಿಟ್ಟೇ.. ಪ್ಲೇಯರ್​ ಹೆಸರು ನೆನಪಿಗೆ ಬರದೇ ಸೂರ್ಯಕುಮಾರ್..
ಕೊನೆ ಕ್ಷಣದಲ್ಲಿ ಎಂಟ್ರಿ ಕೊಟ್ಟ ಕಿರಣ್​ ಮೋರೆ.!
ಟೀಮ್​ ಇಂಡಿಯಾ ಮಾಜಿ ವಿಕೆಟ್​​ ಕೀಪರ್​​ ಕಿರಣ್​ ಮೋರೆ ಕೂಡ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​ ಪ್ರತಿನಿಧಿಯಾಗಿ ಕೊನೆಯ ಕ್ಷಣದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಚುನಾವಣಾ ಕಣಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಟೀಮ್​ ಇಂಡಿಯಾದ ಸೆಲೆಕ್ಷನ್​ ಕಮಿಟಿಯ ಮುಖ್ಯಸ್ಥನಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದ ಕಿರಣ್​ ಮೋರೆ, ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಎದುರು ನೋಡ್ತಿದ್ದಾರೆ.
ಬಿಸಿಸಿಐನ ಹಾಲಿ ಸೆಕ್ರೆಟರಿ ದೇವಜಿತ್​ ಸೈಕಿಯಾ, ಐಪಿಎಲ್​ ಅಧ್ಯಕ್ಷ ಅರುಣ್​ ಧುಮಾಲ್​ ಹೆಸರುಗಳು ಕೂಡ ಬಿಸಿಸಿಐ ಮುಂದಿನ ಅಧ್ಯಕ್ಷ ಹುದ್ದೆಯ ರೇಸ್​ನಲ್ಲಿವೆ. ಚುನಾವಣೆಯ ಬದಲು ಅವಿರೋಧವಾಗಿ ಮುಂದಿನ ಅಧ್ಯಕ್ಷರನ್ನ ಆಯ್ಕೆ ಮಾಡಲು ಬಿಸಿಸಿಐ ವಲಯದಲ್ಲಿ ಈಗಾಗಲೇ ನಿರ್ಧರಿಸಲಾಗಿದೆ. ಹೀಗಾಗಿ ಇಂದು ದೆಹಲಿಯ ಅಮಿತ್​ ಶಾ ಮನೆಯಲ್ಲಿ ನಡೆಯೋ ಸಭೆಯಲ್ಲಿ ಈ ಹೆಸರುಗಳಲ್ಲಿ ಒಂದು ಹೆಸರು ಮುಂದಿನ ಬಿಸಿಸಿಐ ಬಾಸ್​ ಹುದ್ದೆಗೆ ಫೈನಲ್​ ಆಗಲಿದೆ. ಆ ಹೆಸರು ಯಾವುದು ಅನ್ನೋದೇ ಸದ್ಯದ ಕುತೂಹಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ