/newsfirstlive-kannada/media/media_files/2025/09/20/rohit_surya-2025-09-20-07-35-46.jpg)
ಟೀಮ್ ಇಂಡಿಯಾ ಹಾಗೂ ಒಮಾನ್ ನಡುವಿನ ಪಂದ್ಯದ ವೇಳೆ ಎರಡು ತಂಡದ ನಾಯಕರು ತಮಾಷೆಗೆ ಕಾರಣರಾದರು. ಪ್ಲೇಯಿಂಗ್​-11ನಲ್ಲಿ ತಮ್ಮ ತಮ್ಮ ಆಟಗಾರರ ಹೆಸರನ್ನು ಮರೆತು ಸೂರ್ಯಕುಮಾರ್ ಹಾಗೂ ಜತೀಂದರ್ ಸಿಂಗ್ ಪೇಚಿಗೆ ಸಿಲುಕಿದರು.
ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕ್ಯಾಪ್ಟನ್ ಸೂರ್ಯಕುಮಾರ್ ಅವರು ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಈ ಟಾಸ್ ಆಗುತ್ತಿದ್ದಂತೆ ಭಾರತದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಕಾಮೆಂಟರರ್​ ರವಿಶಾಸ್ತ್ರಿ ಅವರು ಸೂರ್ಯಕುಮಾರ್ ಅವರನ್ನು ಮಾತನಾಡಿಸಲು ಕರೆದರು.
ಇದನ್ನೂ ಓದಿ:ಸೋಲುವ ಭಯ.. ಒಮಾನ್​ ವಿರುದ್ಧ ಗೆಲ್ಲಲು ಹರಸಾಹಸಪಟ್ಟ ಸೂರ್ಯಕುಮಾರ್​ ಪಡೆ
ಈ ವೇಳೆ ಕಾಮೆಂಟರರ್​ ರವಿಶಾಸ್ತ್ರಿ ಅವರು ನಿಮ್ಮ ತಂಡದಲ್ಲಿ ಆಟಗಾರರ ಬದಲಾವಣೆಗಳು ಏನೇನು ಎಂದು ಕೇಳಿದರು. ಅದಕ್ಕೆ ಸೂರ್ಯಕುಮಾರ್ ಅವರು ಇಬ್ಬರು ಆಟಗಾರರ ಬದಲಾವಣೆ ಆಗಿದೆ. ಜಸ್​ಪ್ರಿತ್ ಬೂಮ್ರಾ ಹಾಗೂ ವರುಣ್ ಚಕ್ರವರ್ತಿ ಅವರ ಬದಲಿಗೆ ಹರ್ಷಿತ್​ ರಾಣಾರನ್ನು ಸೇರಿಸಿಕೊಳ್ಳಲಾಗಿದೆ ಎಂದರು. ಆದರೆ ಇನ್ನೊಬ್ಬ ಯುವ ಆಟಗಾರ ಅರ್ಷ್​ದೀಪ್ ಸಿಂಗ್​ ಹೆಸರು ನೆನಪಿಗೆ ಬರದೇ ತಡಬಡಾಯಿಸಿದರು. ಅಯ್ಯೋ ನಾನು ರೋಹಿತ್ ಶರ್ಮಾ ಆಗಿಬಿಟ್ಟೇ ಅಂತ ಸೂರ್ಯ ನಗುತ್ತ ಹೇಳಿದರು. ಇದರಿಂದ ಅಲ್ಲಿದ್ದವರೆಲ್ಲ ನಕ್ಕರು. ಕೊನೆಗೆ ಅರ್ಷ್​ದೀಪ್ ಸಿಂಗ್​ ಹೆಸರು ನೆನಪಿಗೆ ಬರಲಿಲ್ಲ. ಸೂರ್ಯಕುಮಾರ್ ಕೇವಲ ಟು ಚೇಂಜಸ್​ ಎಂದು ಹೇಳಿದರು ಅಷ್ಟೇ.
ಇನ್ನು ಸೂರ್ಯಕುಮಾರ್ ಆದ ಮೇಲೆ ಮಾತನಾಡಲು ಬಂದ ಒಮಾನ್ ತಂಡದ ಕ್ಯಾಪ್ಟನ್ ಜತೀಂದರ್ ಸಿಂಗ್ ಕೂಡ ಒಬ್ಬರ ಹೆಸರನ್ನು ಮರೆತು ಹೋದರು. ವಸೀಂ ಅಲಿ ಮತ್ತು ಹಸ್ನಾನ್ ಇಬ್ಬರು ತಂಡದಿಂದ ಹೊರಗಿದ್ದಾರೆ. ಇವರ ಬದಲಿಗೆ ನದೀಮ್ ಮತ್ತು.. ಇನ್ನೊಬ್ಬ ಪ್ಲೇಯರ್ ಅನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದರು. ಆದರೆ ಇನ್ನೊಬ್ಬ ಆಟಗಾರನ ಹೆಸರನ್ನು ಜತೀಂದರ್ ಸಿಂಗ್ ಹೇಳುವುದಕ್ಕೆ ಆಗಲಿಲ್ಲ. ಒನ್​ಮೋರ್​.. ಒನ್​ಮೋರ್​ ಚೇಂಜಸ್​ ಎಂದಷ್ಟೇ ಹೇಳಿದರು. ಇದರಿಂದ ಸ್ಟೇಡಿಯಂನಲ್ಲಿದ್ದ ಆಟಗಾರರು, ಸಿಬ್ಬಂದಿ ವರ್ಗ ಹಾಗೂ ಅಭಿಮಾನಿಗಳು ನಗೆಗಡಲಲ್ಲಿ ತೇಲಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ