Advertisment

ಪಾಕ್ ವಿರುದ್ಧದ ಪಂದ್ಯಕ್ಕೆ ಸ್ಟಾರ್​ ವೇಗಿ ಕಂಬ್ಯಾಕ್.. ಇವತ್ತು ತಂಡದಲ್ಲಿ ಎರಡು ಬದಲಾವಣೆ..!

ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು (IND vs PAK) ಎರಡನೇ ಬಾರಿಗೆ ಮುಖಾಮುಖಿ ಆಗ್ತಿವೆ. ಇವತ್ತು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೂಪರ್ ಫೋರ್ (Super four) ಪಂದ್ಯ ನಡೆಯಲಿದೆ.

author-image
Ganesh Kerekuli
team india (15)
Advertisment

ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು (IND vs PAK) ಎರಡನೇ ಬಾರಿಗೆ ಮುಖಾಮುಖಿ ಆಗ್ತಿವೆ. ಇವತ್ತು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೂಪರ್ ಫೋರ್ (Super four) ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾ ಗ್ರೂಪ್ ಹಂತದಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸೂಪರ್ ಫೋರ್‌ಗೆ ಲಗ್ಗೆ ಇಟ್ಟಿದೆ. ಇವತ್ತು ನಡೆಯುವ ಪಂದ್ಯದಲ್ಲಿ ಟೀಂ ಇಂಡಿಯಾ ಭಾರೀ ಬದಲಾವಣೆ ಮಾಡುವ ಸಾಧ್ಯತೆ ಇದೆ.

Advertisment

ಟೀಂ ಇಂಡಿಯಾದಲ್ಲಿ 2 ಬದಲಾವಣೆ

ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ಓಮನ್ ವಿರುದ್ಧ ಆಡಿತು. ಈ ವೇಳೆ ಟೀಮ್ ಇಂಡಿಯಾ ಎರಡು ಪ್ರಮುಖ ಬದಲಾವಣೆ ಮಾಡಿತ್ತು. ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾರನ್ನ ಕಣಕ್ಕಿಳಿಸಿತು. ಇದರಿಂದ ಜಸ್​ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಪ್ಲೇಯಿಂಗ್-11ನಿಂದ ಹೊರಗಿದ್ದರು. ಆದರೆ ಇವತ್ತು ಬುಮ್ರಾ ಮತ್ತು ಚಕ್ರವರ್ತಿ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ.

ಇದನ್ನೂ ಓದಿ:ಟೀಮ್ ಇಂಡಿಯಾ ಜೊತೆ ವಿಶೇಷ ದಾಖಲೆ ಬರೆದ ಒಮಾನ್ ಓಪನರ್ಸ್​.. ಏನದು?

SURYAKUMAR_DUBE (1)


 
ಸಂಭಾವ್ಯ ಆಟಗಾರರು. ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಜಸ್​ಪ್ರಿತ್ ಬುಮ್ರಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ

ಇದನ್ನೂ ಓದಿ:ಬ್ಯಾಟಿಂಗ್​ ಕ್ರಮಾಂಕದಲ್ಲಿ ಓವರ್​ಸ್ಮಾರ್ಟ್ ಆದ್ರಾ ಕ್ಯಾಪ್ಟನ್​ ಸೂರ್ಯಕುಮಾರ್.. ಯಾಕೆ?

Advertisment

ಟೀಮ್ ಇಂಡಿಯಾ 8ನೇ ಕ್ರಮಾಂಕದವರೆಗೆ ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಇರೋದ್ರಿಂದ ಬ್ಯಾಟಿಂಗ್ ಘಟಕದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ. ಬುಮ್ರಾ , ಕುಲದೀಪ್ ಮತ್ತು ಚಕ್ರವರ್ತಿಯನ್ನ ಕೈಬಿಡುವ ಸಾಧ್ಯತೆ ಕಡಿಮೆ ಇದೆ. ಓಮನ್ ವಿರುದ್ಧದ ಪಂದ್ಯದಲ್ಲಿ ಅರ್ಷದೀಪ್ ಸಿಂಗ್, ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದರು. ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 100 ವಿಕೆಟ್‌ಗಳನ್ನ ಪಡೆದ ಸಾಧನೆ ಮಾಡಿದರು. 

ಇದನ್ನೂ ಓದಿ:ಇವತ್ತು IND vs PAK ಮ್ಯಾಚ್.. ಕುತೂಹಲ ಮೂಡಿಸಿದ ಪಾಕಿಸ್ತಾನದ ಈ ನಡೆ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Ind vs Pak Asia Cup 2025 india vs pakistan asia cup
Advertisment
Advertisment
Advertisment