/newsfirstlive-kannada/media/media_files/2025/10/13/kanthara-collectiom-2025-10-13-14-21-21.jpg)
ಕಾಂತಾರ-1
ಕಾಂತಾರ-1 ಸಿನಿಮಾ ಬಿಡುಗಡೆಯಾದ 11 ದಿನಕ್ಕೆ ಬರೋಬ್ಬರಿ 655 ಕೋಟಿ ಗಳಿಕೆ ಕಂಡಿದೆ. ಇಂದಿಗೂ ಸಹ ಕಾಂತಾರ ಕ್ರೇಜ್​ ಮಾತ್ರ ಕಡಿಮೆನೇ ಆಗ್ತಿಲ್ಲ. ಕಾಂತಾರ ಅಭಿಮಾನಿಗಳು ಮುಗಿಬಿದ್ದು ಕಾಂತಾರ ಸಿನಿಮಾ ಮಂದಿರಕ್ಕೆ ಹೋಗುತ್ತಿದ್ದಾರೆ. ವಿಶ್ವದಾದ್ಯಂತ ಕಲೆಕ್ಷನ್​​ನಲ್ಲಿ ಕಾಂತಾರ ಧೂಳೆಬ್ಬಿಸಿದೆ. ಇಂದಿಗೂ ದೇಶಾದ್ಯಂತ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಗೆ ಸಿನಿಮಾ ನೋಡಲು ಥಿಯೇಟರ್ ನಲ್ಲಿ ಟಿಕೆಟ್​​ಗಳೇ ಸಿಗುತ್ತಿಲ್ಲ.
ಕುಟುಂಬ ಸಮೇತ ಅಭಿಮಾನಿಗಳು ಥಿಯೇಟರ್​ಗೆ ಹೋಗಿದ್ದು, ದೇಶಾದ್ಯಂತ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಎಲ್ಲೆಲೂ ಕಾಂತಾರ ಕಾಂತಾರ ಅಭಿಮಾನಿಗಳು ಕಾಂತಾರ -1 ಸಿನಿಮಾವನ್ನ ಕಂಡು ಫುಲ್​ ಪೈಸಾ ಪೈಸಾ ವಸುಲ್​ ಎಂದು ಹಾಡಿ ಹೊಗಳುತ್ತಿದ್ದಾರೆ.
ಮೊದಲ ಕಾಂತಾರ ಚಿತ್ರದ ಯಶಸ್ಸಿನ ನಂತರ ಹೊಂಬಾಳೆ ಫಿಲ್ಮ್ಸ್ ‘ಕಾಂತಾರ ಚಾಪ್ಟರ್​-1’ 2023ರ ಆರಂಭದಲ್ಲಿ ಘೋಷಿಸಿತು. ಇದು ಮೊದಲ ಚಿತ್ರದ ಪ್ರೀಕ್ವೆಲ್​ ಆಗಿದೆ. ರಿಷಬ್ ಶೆಟ್ಟಿ ಕಥೆ ಬರೆದು, ನಿರ್ದೇಶಿಸಿ ನಟಿಸಿದ ಈ ಚಿತ್ರ ಸರಿಸುಮಾರು 125 ಕೋಟಿ ರೂಪಾಯಿ ಬಜೆಟ್​​​ನಲ್ಲಿ ನಿರ್ಮಾಣಗೊಂಡಿದೆ. ಅರವಿಂದ್ ಕಶ್ಯಪ್ ಕ್ಯಾಮರಾ ವರ್ಕ್ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿದೆ. ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಕದಂಬ ವಂಶದ ಕಾಲಘಟ್ಟದಲ್ಲಿದ್ದು, ಭೂತ ಕೋಲ ಆಚರಣೆಯ ಕಥೆಯನ್ನ ವರ್ಣಿಸುತ್ತದೆ. ಕ್ರಿ.ಶ.300ರಲ್ಲಿ ಕದಂಬ ರಾಜವಂಶದ ಆಳ್ವಿಕೆಯಲ್ಲಿ ನಡೆಯುತ್ತದೆ. ಇದು ಭೂತಕೋಲ ಆಚರಣೆಯ ಮೂಲವನ್ನು ಅನಾವರಣಗೊಳಿಸುತ್ತದೆ.
ಇದನ್ನೂ ಓದಿ:ಇತರೆ ಸ್ಪರ್ಧಿಗಳಿಗೆ ಬಿಗ್ ಸರ್ಪ್ರೈಸ್ ಕೊಟ್ಟ ವೀಕ್ಷಕರು.. ಮಾಳು-ಸ್ಪಂದನಾ ಫೈನಲಿಸ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.