/newsfirstlive-kannada/media/media_files/2025/10/03/rakshith_shetty-2025-10-03-22-23-42.jpg)
ಬೆಂಗಳೂರು: 2021ನೇ ಸಾಲಿನ ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಕಟ ಮಾಡಲಾಗಿದ್ದು ಅತ್ಯುತ್ತಮ ನಟ ರಕ್ಷಿತ್ ಶೆಟ್ಟಿ ಹಾಗೂ ಅತ್ಯುತ್ತಮ ನಟಿ ಎಂದು ಅರ್ಚನಾ ಜೋಯ್ಸ್ ಅವರು ಆಯ್ಕೆ ಆಗಿದ್ದಾರೆ. ಹಾಗೇ​ ಅತ್ಯುತ್ತಮ ಸಿನಿಮಾ ದೊಡ್ಡಹಟ್ಟಿ ಬೋರೇಗೌಡ ಅತ್ಯುತ್ತಮ ಮೂವಿ ಪ್ರಶಸ್ತಿಗೆ ಆಯ್ಕೆ ಆಗಿದೆ.
2021ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ಮಾಡಲಾಗಿದ್ದು 777 ಚಾರ್ಲಿ ಸಿನಿಮಾದ ನಟನೆಗೆ ರಕ್ಷಿತ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ, ಮ್ಯೂಟ್ ಸಿನಿಮಾದಲ್ಲಿ ನಟನೆಗಾಗಿ ಅರ್ಚನಾ ಜೋಯ್ಸ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ದೊಡ್ಡಹಟ್ಟಿ ಬೋರೇಗೌಡ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 777 ಚಾರ್ಲಿ ಸಿನಿಮಾಗೆ 2ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಇದಾಗಿದೆ. ಬಿಸಿಲು ಕುದುರೆ ಸಿನಿಮಾಗೆ 3ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರೆತಿದೆ.
- ರತ್ನನ್ ಪ್ರಪಂಚ ಸಿನಿಮಾದ ನಟನೆಗೆ ಪ್ರಮೋದ್​ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ
- ಪುನೀತ್ ರಾಜ್‍ಕುಮಾರ್ ನಟನೆಯ ಯುವರತ್ನ ಸಿನಿಮಾಗೆ ಅತ್ಯುತ್ತಮ ಜನಪ್ರಿಯ ಮನರಂಜನಾ ಸಿನಿಮಾ ಪ್ರಶಸ್ತಿ
- ವಿಶೇಷ ಕಳಕಳಿ ಚಿತ್ರ- ಭಾರತದ ಪ್ರಜೆಗಳಾದ ನಾವು
- ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ- ನಾಡಪದ ಆಶಾ (ಕೊಡವ)
- ಅತ್ಯುತ್ತಮ ಮಕ್ಕಳ ಚಿತ್ರ- ಕೇಕ್
- ಅತ್ಯುತ್ತಮ ಹಿನ್ನೆಲೆ ಗಾಯಕ- ಅಜನೀಶ್ ಕೇಶವರಾವ್
- ಅತ್ಯುತ್ತಮ ಹಿನ್ನೆಲೆ ಗಾಯಕಿ- ಸಹನಾ ಭಾರದ್ವಾಜ್
- ಅತ್ಯುತ್ತಮ ಪೋಷಕ ನಟಿ- ಉಮಾಶ್ರೀ (ಚಿತ್ರ- ರತ್ನನ್ ಪ್ರಪಂಚ)
- ಅತ್ತ್ಯುತ್ತಮ ಗೀತ ರಚನೆ- ನಾಗಾರ್ಜುನ ಶರ್ಮಾ (ಚಿತ್ರ- 777 ಚಾರ್ಲಿ)
- ಅತ್ಯುತ್ತಮ ಸಂಕಲನ- ಪ್ರತೀಕ್ ಶೆಟ್ಟಿ (ಚಿತ್ರ- 777 ಚಾರ್ಲಿ)
- ಅತ್ಯುತ್ತಮ ಸಂಗೀತ ನಿರ್ದೇಶಕ- ಇಮ್ತಿಯಾಜ್ ಸುಲ್ತಾನ್ (ಚಿತ್ರ- ಬಿಸಿಲು ಕುದುರೆ)
- ಅತ್ಯುತ್ತಮ ಬಾಲನಟಿ- ಬೇಬಿ ಭೈರವಿ (ಚಿತ್ರ- ಭೈರವಿ)
- ಅತ್ಯುತ್ತಮ ಬಾಲನಟ- ಮಾಸ್ಟರ್ ಅತೀಶ್ ಶೆಟ್ಟಿ (ಚಿತ್ರ- ಕೇಕ್)
- ಉತ್ತಮ ಕಲಾ ನಿರ್ದೇಶಕ- ರವಿ ಸಂತೇಹಕ್ಲು (ಚಿತ್ರ- ಭಜರಂಗಿ-2)
- ಅತ್ಯುತ್ತಮ ಚೊಚ್ಚಲ ನಿರ್ದೇಶನ- ಶಂಕರ್ ಗುರು (ಚಿತ್ರ- ಬಡವ ರಾಸ್ಕಲ್)
- ಅತ್ಯುತ್ತಮ ನಿರ್ಮಾಣ ನಿರ್ವಾಹಕ- ಶಿವಕುಮಾರ್ ಎಸ್​. (ಪೊಗರು)
- ಅತ್ಯುತ್ತಮ ಛಾಯಾಗ್ರಹಣ- ಭುನವೇಶ್ ಪ್ರಭು (ಆಮ್ಚಿ ಸಂಸಾರ- ಕೊಂಕಣಿ)
- ಅತ್ಯುತ್ತಮ ಚಿತ್ರಕಥೆ- ರಘು ಕೆ.ಎಂ (ದೊಡ್ಡ ಹಟ್ಟಿ ಬೋರೆಗೌಡ)
- ಅತ್ಯುತ್ತಮ ಕಥೆ- ಮಂಜುನಾಥ್ ಮುನಿಯಪ್ಪ (9 ಸುಳ್ಳು ಕಥೆಗಳು)
ತೀರ್ಪುಗಾರರ ವಿಶೇಷ ಪ್ರಶಸ್ತಿಗಳು
- ಅತ್ಯುತ್ತಮ ಚಿತ್ರ- ಭೈರವಿ
- ಅತ್ಯುತ್ತಮ ವಸ್ತ್ರ ವಿನ್ಯಾಸ- ಯೋಗಿ ಜಿ ರಾಜು, (ಭಜರಂಗಿ 2)
- ಅತ್ಯುತ್ತಮ ಪ್ರಸಾದನ- ಶಿವಕುಮಾರ್ (ತಾಯಿ ಕಸ್ತೂರ್ ಗಾಂಧಿ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ